ತಾಯಿಯನ್ನು ನೆನೆದು ಎಮೋಷನಲ್ ಪೋಸ್ಟ್ ಮಾಡಿದ ಜಾನ್ವಿ, ಪ್ರತಿನಿತ್ಯ ನೆನಪಿಗೆ ಬರುತ್ತೀಯಾ ಎಂದ ಜಾನ್ವಿ….!

ದೇಶದ ಸಿನಿರಂಗದಲ್ಲಿ ಸದಾ ನೆನಪಿನಲ್ಲಿರುವ ಹೆಸರುಗಳಲ್ಲಿ ಅತಿಲೋಕ ಸುಂದರಿ ದಿವಂಗತ ಶ್ರೀದೇವಿಯವರು ಸಹ ಒಬ್ಬರಾಗಿದ್ದಾರೆ. ದಶಕಗಳ ಕಾಲ ಸಿನಿರಂಗವನ್ನು ಆಳಿದ ಕೀರ್ತಿ ಆಕೆಗೆ ಸಲ್ಲುತ್ತದೆ. ದೊಡ್ಡ ದೊಡ್ಡ ಸ್ಟಾರ್‍ ನಟರ ಜೊತೆ ಅಭಿನಯಿಸುವ ಮೂಲಕ ದೇಶ ಕಂಡ ಖ್ಯಾತ ನಟಿಯಾಗಿದ್ದಾರೆ. ಇಂದು ಶ್ರೀದೇವಿಯವರ ಜಯಂತಿಯಾಗಿದ್ದು, ಎಲ್ಲರೂ ಶ್ರೀದೇವಿಯವರಿಗೆ ಸಂತಾಪ ಸೂಚಿಸುತ್ತಿದ್ದಾರೆ. ಇನ್ನೂ ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್‍ ಇದೀಗ ತನ್ನ ತಾಯಿಯನ್ನು ನೆನೆದು ಎಮೋಷನಲ್ ಪೋಸ್ಟ್ ಹಾಕಿದ್ದಾರೆ. ಜಾನ್ವಿ ಪೋಸ್ಟ್ ಇದೀಗ ಎಲ್ಲಾ ಕಡೆ ಹರಿದಾಡುತ್ತಿದೆ.

ಇಂದು ಅತಿಲೋಕ ಸುಂದರಿ ಶ್ರೀದೇವಿ ಕಪೂರ್‍ ರವರ ಜಯಂತಿ. ಇನ್ನೂ ಶ್ರೀದೇವಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಸಹ ಆಕೆಯನ್ನು ಸ್ಮರಿಸುತ್ತಾ ಸಂತಾಪ ಸೂಚಿಸುತ್ತಿದ್ದಾರೆ. ಇನ್ನೂ ಶ್ರೀದೇವಿ ಪುತ್ರಿ  ಜಾನ್ವಿ ಕಪೂರ್‍ ಎಮೋಷನಲ್ ಆಗಿದ್ದು, ಸೋಷಿಯಲ್ ಮಿಡಿಯಾದಲ್ಲಿ ಎಮೋಷನಲ್ ಪೋಸ್ಟ್ ಸಹ ಹಂಚಿಕೊಂಡಿದ್ದಾರೆ. ತಾನು ಚಿಕ್ಕಂದಿನಲ್ಲಿ ತನ್ನ ತಾಯಿಯೊಂದಿಗೆ  ತೆಗೆಸಿಕೊಂಡ ಪೊಟೋ ಒಂದನ್ನು ಶೇರ್‍ ಮಾಡಿ ನೀನು ಸದಾ ನನಗೆ ನೆನಪಿಗೆ ಬರುತ್ತೀಯಾ ಎಂದು ಪೋಸ್ಟ್ ಮಾಡಿದ್ದಾರೆ. ಪ್ರತಿ ನಿತ್ಯ ನಿನ್ನನ್ನು ತುಂಬಾನೆ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಿನ್ನನ್ನು ಸದಾ ಪ್ರೀತಿಸುತ್ತಲೇ ಇರುತ್ತೇನೆ. ಹ್ಯಾಪಿ ಬರ್ತ್‌ಡೇ ಮಮ್ಮಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಜಾನ್ವಿ ಎಮೋಷನಲ್ ಪೋಸ್ಟ್ ವೈರಲ್ ಆಗಿದೆ.

ಸಿನಿರಂಗವನ್ನು ದಶಕಗಳ ಕಾಲ ಆಳಿದಂತಹ ಶ್ರೀದೇವಿ ಕಳೆದ 2018 ಫೆಭ್ರವರಿ 24 ರಂದು ದುಬೈ ಹೋಟೆಲ್ ಒಂದರಲ್ಲಿ ಮೃತಪಟ್ಟಿದ್ದರು. ಆಕೆ 54 ನೇ ವಯಸ್ಸಿನಲ್ಲಿ ಮೃತಪಟ್ಟರು. ತನ್ನ ಮುದ್ದಿನ ಪುತ್ರಿ ಜಾನ್ವಿ ಕಪೂರ್‍ ರನ್ನು ಸ್ಟಾರ್‍ ನಟಿಯನ್ನಾಗಿ ಮಾಡಲು ಶ್ರೀದೇವಿ ತುಂಬಾನೆ ಕನಸುಗಳನ್ನು ಕಂಡಿದ್ದರು. ಜಾನ್ವಿ ಅಭಿನಯದ ದಢಕ್ ಸಿನೆಮಾ ಬಿಡುಗಡೆಯಾಗುವುದಕ್ಕೂ ಮುಂಚೆಯೆ ಶ್ರೀದೇವಿ ಇಹಲೋಕ ತ್ಯೆಜಿಸಿದರು. ತನ್ನ ಮುದ್ದಿನ ಮಗಳನ್ನು ದೊಡ್ಡ ಪರದೆಯ ಮೇಲೆ ಕಾಣದೇ ಕಣ್ಮರೆಯಾದರು. ಇನ್ನೂ ಶ್ರೀದೇವಿ ನಿಧನ ತುಂಬಾ ವದಂತಿಗಳಿಗೆ ಆಸ್ಪದ ನೀಡಿತ್ತು. ಅನೇಕ ಕಥನಗಳು ಶ್ರೀದೇವಿ ಸಾವಿನ ಬಗ್ಗೆ ಹುಟ್ಟಿಕೊಂಡಿದ್ದವು.

ಇನ್ನೂ ಶ್ರೀದೇವಿ ಸೌಂದರ್ಯದ ಅಪ್ಸರೆಯಂತಿದ್ದರು. ತಾಯಿ ತಕ್ಕಂತೆ ಜಾನ್ವಿ ಸಹ ತುಂಬಾ ಮುದ್ದಾಗಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿ ಯಂಗ್ ಬ್ಯೂಟಿಗಳಲ್ಲಿ ಜಾನ್ವಿ ಸಹ ಒಬ್ಬರಾಗಿದ್ದಾರೆ. ಆದರೆ ಆಕೆಗೆ ಬಿಗ್ ಬ್ರೇಕ್ ನೀಡುವಂತಹ ಒಂದು ಸಿನೆಮಾ ಸಹ ಇನ್ನೂ ಸಿಕ್ಕಿಲ್ಲ. ಇತ್ತೀಚಿಗಷ್ಟೆ ಗುಡ್ ಲಕ್ ಜೆರಿ ಎಂಬ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಆದರೆ ಈ ಸಿನೆಮಾ ಸಹ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಇನ್ನೂ ಆಕೆ ಮಿಲ್ಲಿ, ಮಿಸ್ಟರ್‍ ಅಂಡ್ ಮಿಸೆಸ್ ಮಹಿ ಹಾಗೂ ಬವಾಲ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಆಕೆಯನ್ನು ಸೌತ್ ಸಿನಿರಂಗದ ಸಿನೆಮಾಗಳಲ್ಲಿ ಕಾಣಲು ಶ್ರೀದೇವಿ ಅಭಿಮಾನಿಗಳೂ ಸಹ ಕಾಯುತ್ತಿದ್ದಾರೆ.

Previous articleಮತ್ತೊಮ್ಮೆ ಹನಿಮೂನ್ ಗೆ ಹಾರಿದ ನಯನ್ ಅಂಡ್ ವಿಕ್ಕಿ, ವೈರಲ್ ಆಯ್ತು ಪೊಟೋಸ್…!
Next articleಟೈಟ್ ಫಿಟ್ ಡ್ರೆಸ್ ನಲ್ಲಿ ನಿದ್ದೆಗೆಡಿಸುವಂತಹ ಹಾಟ್ ಪೋಸ್ ಕೊಟ್ಟ ರಕುಲ್…!