ಶೀಘ್ರದಲ್ಲೇ ಟಾಲಿವುಡ್ ಗೆ ಎಂಟ್ರಿಕೊಡಲಿದ್ದಾರಂತೆ ಬಾಲಿವುಡ್ ಸ್ಟಾರ್ ಕಿಡ್ ಜಾನ್ವಿ ಕಪೂರ್!

ಬಾಲಿವುಡ್ ನಲ್ಲಿ ಸ್ಟಾರ್‍ ಕಿಡ್ ಆಗಿ ಅನೇಕ ನಟಿಯರು ಕಾಣಿಸಿಕೊಳ್ಳುತ್ತಿದ್ದರೂ, ಜಾನ್ವಿ ಕಪೂರ್‍ ಮಾತ್ರ ಎಲ್ಲರನ್ನೂ ಮೀರಿಸಿ ಮುನ್ನುಗ್ಗುತ್ತಿದ್ದಾರೆ. ಆಕೆ ತಮ್ಮದೇ ಆದ ಶೈಲಿಯಲ್ಲಿ ಸಿನೆಮಾ ರಂಗದಲ್ಲಿ ಚಾಪು ಮೂಡಿಸುತ್ತಾ ಸ್ಟಾರ್‍ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ರೇಸ್ ಕುದುರೆಯಂತೆ ಓಡುತ್ತಿದ್ದಾರೆ. ಮೊದಲಿಗೆ ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಸಹ ಇದೀಗ ದೊಡ್ಡದಾಗಿಯೇ ಸೌಂಡ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್‍ ನಟಿಯರಿಗಿಂತ ತಾನು ಕಡಿಮೆಯಿಲ್ಲ ಎಂದು ಗ್ಲಾಮರಸ್ ಟ್ರೀಟ್ ಕೊಡುತ್ತಿದ್ದಾರೆ.

ಕಳೆದ 2018 ರಲ್ಲಿ ಬಾಲಿವುಡ್ ಸಿನಿರಂಗಕ್ಕೆ ಗ್ರಾಂಡ್ ಎಂಟ್ರಿಕೊಟ್ಟ ಈಕೆ ಧಡಕ್ ಎಂಬ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ದೇಶದ ಸಿನಿರಂಗದಲ್ಲಿ ದೊಡ್ಡ ಹೆಸರು ಮಾಡಿದ ಶ್ರೀದೇವಿ ಹಾಗೂ ಬೋನಿ ಕಪೂರ್‍ ಪುತ್ರಿಯಾಗಿ ಜಾನ್ವಿ ಕಪೂರ್‍ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಸ್ಟಾರ್‍ ಕಿಡ್ ಎಂಬ ಕಾರಣದಿಂದ ಈಕೆ ದೊಡ್ಡ ಸಕ್ಸಸ್ ಕೊಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಆಕೆಯ ಮೊದಲನೇ ಸಿನೆಮಾವೇ ಮಕಾಡೆ ಮಲಗಿತ್ತು. ಇನ್ನೂಜಾನ್ವಿ ಕಪೂರ್‍ ನಟಿಸಿದ ಯಾವುದೇ ಸಿನೆಮಾಗಳೂ ಇಲ್ಲಿಯವರೆಗೂ ದೊಡ್ಡ ಮಟ್ಟದ ಸಕ್ಸಸ್ ಕಂಡುಕೊಂಡಿಲ್ಲ. ಆದರೆ ಆಕೆಯ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಅಪಾರ ಸಂಖ್ಯೆಯ ಅವರ ಅಭಿಮಾನಿ ಬಳಗ ಆಕೆಯನ್ನು ದೊಡ್ಡ ಸೂಪರ್‍ ಹಿಟ್ ಸಿನೆಮಾದಲ್ಲಿ ನೋಡಲು ಕಾಯುತ್ತಿದ್ದಾರೆ.

ಇನ್ನೂ ಜಾನ್ವಿ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೇಲೆ ಅನೇಕ ಬಾರಿ ಟಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಮಾತುಗಳು ಜೋರಾಗಿಯೇ ಕೇಳಿಬರುತ್ತಿತ್ತು. ಆದರೆ ಅನೇಕ ಬಾರಿ ಈ ಸುದ್ದಿಯನ್ನು ಜಾನ್ವಿ ತಂದೆ ಸುಳ್ಳು ಎಂದು ಸಹ ಹೇಳಿದ್ದರು. ಟಾಲಿವುಡ್ ನಲ್ಲಿ ಒಳ್ಳೆಯ ಕಥೆಯುಳ್ಳ ಸಿನೆಮಾ ಬಂದರೇ ಜಾನ್ವಿ ತಪ್ಪದೇ ನಟಿಸುತ್ತಾರೆ ಎಂದು ಜಾನ್ವಿ ತಂದೆ ಬೋನಿ ಕಪೂರ್‍ ಸಹ ತಿಳಿಸಿದ್ದರು. ಇದೀಗ ಶೀಘ್ರದಲ್ಲೇ ಆಕೆ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಡುವ ಸೂಚನೆಗಳು ಸಿಕ್ಕಿದೆ. ಈ ಹಿಂದೆ ಜಾನ್ವಿ ರವರನ್ನು RRR ಸಿನೆಮಾಗೆ ಆಯ್ಕೆ ಮಾಡಿತ್ತು ಎನ್ನಲಾಗಿದೆ. ಈ ಸಿನೆಮಾದಲ್ಲಿ ಅಲಿಯಾ ಭಟ್ ಮಾಡಿದ ಪಾತ್ರಕ್ಕೆ ಮೊದಲಿಗೆ ಜಾನ್ವಿಗೆ ಅವಕಾಶ ಕೊಡಲಾಗಿತ್ತಂತೆ. ಆದರೆ ಜಾನ್ವಿ ಆ ಪಾತ್ರದಲ್ಲಿ ನಟಿಸಲು ಒಲ್ಲೆ ಎಂದಿದ್ದರಂತೆ. ಇದೀಗ ಟಾಲಿವುಡ್ ಗೆ ಎಂಟ್ರಿ ನೀಡುವ ಬಗ್ಗೆ ಸುದ್ದಿ ಹರಿದಾಡುತ್ತಿದ್ದು, ಯಾವ ನಟನೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಎಂಬುದರ ಕುರಿತು ದೊಡ್ಡ ಚರ್ಚೆಗಳು ಸಹ ಶುರುವಾಗಿದೆ.

ಇನ್ನೂ ಈ ಹಿಂದೆ ಜೂನಿಯರ್‍ ಎನ್.ಟಿ.ಆರ್‍ ರವರ ಮುಂದಿನ ಚಿತ್ರಕ್ಕೆ ಜಾನ್ವಿ ಕಪೂರ್‍ ನಾಯಕಿಯಾಗಲಿದ್ದಾರೆ. ಈ ಕುರಿತು ಚಿತ್ರತಂಡ ಜಾನ್ವಿ  ಜೊತೆ ಮಾತುಕಥೆ ನಡೆಸುತ್ತಿದೆ ಎಂದು ಸಹ ಸುದ್ದಿ ಹರಿದಾಡಿತ್ತು. ಆದರೆ ಈ ಕುರಿತು ಜಾನ್ವಿಯಾಗಲೀ ಅಥವಾ ಅವರ ತಂದೆಯಾಗಲಿ ಸ್ಪಷ್ಟನೆ ನೀಡಿರಲಿಲ್ಲ. ಇದೀಗ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಟಾಲಿವುಡ್ ನ ರೌಡಿ ಹಿರೋ ವಿಜಯ್ ದೇವರಕೊಂಡ ಸಿನೆಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎಂದು ಕೇಳಿಬರುತ್ತಿದೆ. ಆದರೆ ಈ ಕುರಿತು ಸಹ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಸದ್ಯ ನಟಿ ಜಾನ್ವಿ ಬವಾಲ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದ ಪೋಸ್ಟರ್‍ ಸಹ ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ.

Previous articleಜಾಕ್ ಪಾಟ್ ಹೊಡೆದ ರಶ್ಮಿಕಾ ಮಂದಣ್ಣ, ಸಲ್ಲು ಭಾಯ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ರಶ್…!
Next articleನಾಳೆ ಬಹುನಿರೀಕ್ಷಿತ ವಿಕ್ರಾಂತ್ ರೋಣ ಟ್ರೈಲರ್ ಬಿಡುಗಡೆ.. ಭಾರಿ ನಿರೀಕ್ಷೆ ಮೂಡಿಸಿದ ವಿಕ್ರಾಂತ್ ರೋಣ ಟ್ರೈಲರ್….!