ಬೆಂಗಳೂರು: ಸ್ಯಾಂಡಲ್‌ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರವರು ಅಭಿನಯಿಸುತ್ತಿರುವ ಜೇಮ್ಸ್ ಚಿತ್ರದ ಶೂಟಿಂಗ್ ಕೆಲಸಗಳು ಭರದಿಂದ ಸಾಗಿದ್ದು, ಇದೀಗ ಮುಂದಿನ ಶೂಟಿಂಗ್ ಗಾಗಿ ಕಾಶ್ಮೀರಕ್ಕೆ ಚಿತ್ರತಂಡ ತೆರಳಿದೆ.
ಜೇಮ್ಸ್ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಉತ್ತರ ಕರ್ನಾಟಕದ ಕೆಲವೊಂದಯ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಇಂದಿನಿಂದ ಕಾಶ್ಮೀರದಲ್ಲಿ ಚಿತ್ರಕರಣ ಪ್ರಾರಂಭಿಸಲು ಜೇಮ್ಸ್ ತಂಡ ಪ್ಲಾನ್ ಮಾಡಿದ್ದು, ಅದರಂತೆ ನಿನ್ನೆಯೇ ಕಾಶ್ಮೀರಕ್ಕೆ ತೆರಳಿದೆ ಜೇಮ್ಸ್ ಚಿತ್ರತಂಡ. ಕಾಶ್ಮೀರದಲ್ಲಿಯೇ ಪುನೀತ್ ರವರ ಕೆಲವೊಂದು ಆಕ್ಷನ್ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತದೆ ಎನ್ನಲಾಗುತ್ತಿದೆ.
ನಿನ್ನೆಯಷ್ಟೆ ಈ ಕುರಿತು ಅಧಿಕೃತವಾಗಿ ಜೇಮ್ಸ್ ಚಿತ್ರತಂಡ ಫೇಸ್‌ಬುಕ್ ಖಾತೆಯಲ್ಲಿ ವಿವರ ಹಂಚಿಕೊಂಡಿದೆ. ನಾಳೆಯಿಂದ ಕಾಶ್ಮೀರದ ಸುಂದರ ತಾಣಗಳಲ್ಲಿ ಜೇಮ್ಸ್ ಚಿತ್ರದ ಶೂಟಿಂಗ್ ನಡೆಯಲಿದೆ. ಅಲ್ಲಿ ಹರ್ಷ ನೃತ್ಯ ನಿರ್ದೇಶನದಲ್ಲಿ ಹಾಡುಗಳು ಹಾಗೂ ವಿಜಯ್ ನೇತೃತ್ವದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲಾಗುತ್ತದೆ ಎಂದು ಪೋಸ್ಟ್ ಮಾಡಿದ್ದರು.
ಇನ್ನೂ ಅನಾರೋಗ್ಯದ ನಿಮಿತ್ತ ರಾಘವೇಂದ್ರ ರಾಜ್‌ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಸಹೋದರನ ಆರೋಗ್ಯ ವಿಚಾರಿಸಿದ ಬಳಿಕ ಪುನೀತ್ ರಾಜ್‌ಕುಮಾರ್ ಕಾಶ್ಮೀರಕ್ಕೆ ತೆರಳುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇನ್ನೂ ಈ ಚಿತ್ರದಲ್ಲಿ ನಾಯಕಿಯಾಗಿ ಪ್ರಿಯಾ ಆನಂದ್ ಬಣ್ಣಹಚ್ಚಲಿದ್ದು, ಅನುಪ್ರಭಾಕರ್ ಹಾಗೂ ಟಾಲಿವುಡ್ ನಟ ಶ್ರೀಕಾಂತ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 1 ರಂದು ಅಪ್ಪು ಅಭಿನಯದ ಯುವರತ್ನ ಸಿನೆಮಾ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಕಾಯುತ್ತಿದ್ದಾರೆ.