Cinema

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ! ಮತ್ತೆ ವೈರಲ್ ಆಯಿತು ಡಿಬಾಸ್ ಜೈ ಶ್ರೀ ರಾಮ್ ಹಾಡು! ವಿಡಿಯೋ

ಇಂದು ಅಯೋಧ್ಯೆ ಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ಮಾಡಲಾಗುತ್ತಿದೆ. ಇದು ಕೋಟ್ಯಂತರ ಜನರ ಕನಸು! ಇಂದು ಮೋದಿ ಸರ್ಕಾರದಿಂದ ಇದೆ ನನಸಾಗುತ್ತಿದೆ. ಇಂದು ಮಧ್ಯಾಹ್ನ ಭೂಮಿ ಪೂಜೆ ನಡೆಯಲಿದೆ. ನಮ್ಮ ಡಿಬಾಸ್ ಅವರ ಬಹು ನಿರೀಕ್ಷೆಯ ಚಿತ್ರವಾದ ರಾಬರ್ಟ್ ಚಿತ್ರದ ಒಂದು ಹಾಡು, ಜೈ ಶ್ರೀ ರಾಮ್, ತಿಂಗಳ ಹಿಂದೆ ಈ ಹಾಡು ಬಿಡುಗಡೆ ಆಗಿ ಸಕತ್ ಸದ್ದು ಮಾಡಿತ್ತು. ಇವತ್ತು ರಾಮ್ ಮಂದಿರದ ಭೂಮಿ ಪೂಜೆಯ ದಿನ , ಮತ್ತೆ ಡಿಬಾಸ್ ಜೈ ಶ್ರೀ ರಾಮ್ ವಿಡಿಯೋ ಸಾಂಗ್ ಸಕತ್ ವೈರಲ್ ಆಗಿದೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಬರ್ಟ್. ಚೌಕ ಚಿತ್ರದ ಮೂಲಕ ಮಾಸ್ ಎಲಿಮೆಂಟ್ಸ್ ಜೊತೆ ಅರ್ಥಪೂರ್ಣವಾದ ಕಥೆ ಹೇಳಿದ್ದ ತರುಣ್ ಸುಧೀರ್ ನಿರ್ದೇಶಿಸುತ್ತಿರುವ ಸಿನಿಮಾ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಎರಡು ಬೇರೆ ಬೇರೆ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಸಣ್ಣದಾದ ಟೀಸರ್ ಹಾಗೂ ಎರಡು ಹಾಡುಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಹಳ ಕ್ರೇಜ್ ಸೃಷ್ಟಿಸಿತ್ತು ರಾಬರ್ಟ್. ಡಿಬಾಸ್ ದರ್ಶನ್ ಎಂದರೆ ಅಭಿಮಾನಿಗಳಿಗೆ ವಿಶೇಷವಾದ ಪ್ರೀತಿ ಹಾಗೂ ಕ್ರೇಜ್ ಇದೆ. ಅವರ ಸಿನಿಮಾ ವಿಚಾರವಾಗಿ ಸಿಗುವ ಪ್ರತಿಯೊಂದು ಮಾಹಿತಿಯನ್ನು ಅಭಿಮಾನಿಗಳೆಲ್ಲಾ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಮಾಡುತ್ತಾರೆ.
ಇದೀಗ ಈ ಕರೊನಾ ವೈರಸ್ ಸಮಯದಲ್ಲಿ ಡಿಬಾಸ್ ಅಭಿಮಾನಿಗಳು ಹೊಸದಾದ ಟ್ರೆಂಡ್ ಒಂದನ್ನು ಸೃಷ್ಟಿಸಿದ್ದಾರೆ. ಈಗಿನ ಸಮಯದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ. ಮಾಸ್ಕ್ ಇಲ್ಲದೆ ಹೊರಹೋಗುವ ಹಾಗಿಲ್ಲ. ಹಾಗಾಗಿ ಡಿಬಾಸ್ ಅಭಿಮಾನಿಗಳು ರಾಬರ್ಟ್ ಪೋಸ್ಟರ್ ಪ್ರಿಂಟ್ ಇರುವ ಮಾಸ್ಕ್ ಗಳನ್ನು ತಯಾರಿಸಿದ್ದಾರೆ. ಅದನ್ನು ಧರಿಸಿ ಎಲ್ಲರೂ ಫೋಟೋಗೆ ಪೋಸ್ ನೀಡಿದ್ದಾರೆ. ಡಿಬಾಸ್ ಅಭಿಮಾನಿಗಳಿಂದ ಇದೊಂದು ವಿಶೇಷವಾದ ಐಡಿಯಾ ಆಗಿದ್ದು ಎಲ್ಲರಿಂದ ಬಹಳ ಮೆಚ್ಚುಗೆ ಗಳಿಸುತ್ತಿದೆ. ಇದೀಗ ಮಾರ್ಕೆಟ್ ನಲ್ಲಿ ರಾಬರ್ಟ್ ಮಾಸ್ಕ್ ಗಳ ಹವಾ ಶುರುವಾಗಿದ್ದು, ಡಿಬಾಸ್ ಅಭಿಮಾನಿಗಳ ಮುಖದ ಮೇಲೆ ರಾಬರ್ಟ್ ಮಾಸ್ಕ್ ಗಳ ವೈಭವವನ್ನು ಕಾಣಬಹುದು.
ಜನವರಿಯಲ್ಲೇ ಚಿತ್ರೀಕರಣ ಮುಗಿಸಿದ್ದ ರಾಬರ್ಟ್ ತಂಡ, ಪೋಸ್ಟ್ ಪ್ರೊಡಕ್ಷನ್ ಸೇರಿದಂತೆ ಎಲ್ಲಾ ಕೆಲಸಗಳನ್ನು ಮುಗಿಸಿ ಬಿಡುಗಡೆ ಸಿದ್ಧವಾಗಿತ್ತು. ಎಲ್ಲವೂ ಸರಿಯಾಗಿದ್ದಿದ್ದರೆ ಮೇ ತಿಂಗಳಿನಲ್ಲೇ ಅಭಿಮಾನಿಗಳಿಗೆ ರಾಬರ್ಟ್ ದರ್ಶನ ನೀಡಬೇಕಿತ್ತು. ಮಾರ್ಚ್ ತಿಂಗಳಿನಿಂದ ಕರೊನಾ ಸೋಂಕು ಹರಡುವುದು ಶುರುವಾದ್ದರಿಂದ ರಾಬರ್ಟ್ ರಿಲೀಸ್ ಡೇಟ್ ಕೂಡ ಪೋಸ್ಟ್ ಪೋನ್ ಆಗಿದೆ. ರಾಬರ್ಟ್ ಚಿತ್ರದಲ್ಲಿ ಮೂವರು ನಾಯಕಿಯರು. ಹಾಗೂ ಬಾಲಿವುಡ್ ನಟ ರವಿಕಿಶನ್, ಟಾಲಿವುಡ್ ನಟ ಜಗಪತಿ ಬಾಬು, ವಿನೋದ್ ಪ್ರಭಾಕಟ್, ರವಿಶಂಕರ್, ಅವಿನಾಶ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

Trending

To Top