Film News

ಟೀಕಾಕಾರರಿಗೆ ಖಾರವಾಗಿ ಉತ್ತರ ನೀಡಿದ ಜಗ್ಗೇಶ್

ಬೆಂಗಳೂರು: ಇತ್ತೀಚಿಗಷ್ಟೆ ತಮ್ಮ 40 ವರ್ಷಗಳ ಸಿನಿರಂಗದ ಪ್ರವೇಶ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಪ್ರೆಸ್ ಮೀಟ್‌ನಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಹೇಳಿಕೆ ಯಶ್ ಬಗ್ಗೆ ಹೇಳಿದ್ದಾರೆ ಯಶ್ ಅಭಿಮಾನಿಗಳು ತಿರುಗಿಬಿದ್ದಿದ್ದು, ಅವರಿಗೆ ಖಾರವಾಗಿಯೇ ಟ್ವೀಟ್ ಮೂಲಕ ಉತ್ತರವನ್ನು ಜಗ್ಗೇಶ್ ನೀಡಿದ್ದಾರೆ.

ಜಗ್ಗೇಶ್ ಟ್ವೀಟ್: ಸಾಮಾಜಿಕ ಜಾಲತಾಣದಲ್ಲಿ ಲೈಕ್‌ಗಳಿಗಾಗಿ ಜೀವಿಸಿ ಮೊಬೈಲ್‌ನಲ್ಲೇ ಬದುಕುವ ಹಾಗೂ ಯೂಟ್ಯೂಬ್ ಖಾತೆ ತೆರೆದು ಹಿಂಬಾಲಕರಿಗಾಗಿ ಅಲೆಯುವ ತಂತ್ರವಾದಿಗಳಿಗೆ ಅರಿವಾಗದು ಎಂದು ಟ್ವೀಟಿಸುವ ಮೂಲಕ ತಮ್ಮನ್ನು ಟೀಕಿಸಿದವರಿಗೆ ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ.

ಅಂದಹಾಗೇ ಜಗ್ಗೇಶ್ ರವರು ಪ್ರೆಸ್‌ಮೀಟ್‌ನಲ್ಲಿ ಪ್ಯಾನ್ ಇಂಡಿಯಾ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದು ನಿಜ. ಆದರೆ ಅವರ ಹೇಳಿಕೆ ಯಶ್ ಬಗ್ಗೆ ಯಾಗಲಿ ಅಥವಾ ಬೇರೆಯವರ ಬಗ್ಗೆಯಾಗಲಿ ಇರಲಿಲ್ಲ. ಪ್ಯಾನ್ ಇಂಡಿಯಾ ಸಿನೆಮಾ ಬಂದು ನಮ್ಮನ್ನು ಉದ್ದಾರ ಮಾಡೊಲ್ಲ. ಇದರಿಂದಾಗಿ ಕನ್ನಡಿಗರಿಗೆ ಕೆಲಸವಿಲ್ಲ. ಬೇರೆ ಯಾರನ್ನೋ ಮೆಚ್ಚಿಸೋಕೆ ಪ್ಯಾನ್ ಇಂಡಿಯಾ ಸಿನೆಮಾ ಮಾಡೋ ಹಾಗಿದೆ. ಎಂದು ಕಡಿಕಾರಿದ್ದರು. ಆದರೆ ಇದು ಯಶ್ ಬಗ್ಗೆ ಹೇಳಿದ್ದು ಎಂದು ಅಭಿಮಾನಿಗಳ ನವರಸ ನಾಯಕ ಜಗ್ಗೇಶ್ ವಿರುದ್ದ ಕಿಡಿ ಕಾರಿದ್ದರು. ಆದರೆ ಜಗ್ಗೇಶ್ ಅವರು ಹೇಳಿರುವುದರ ಹಿಂದಿನ ಮರ್ಮವನ್ನು ಅರಿಯದೇ ಈ ರೀತಿ ಟೀಕಾ ಪ್ರಹಾರ ನಡೆಸುವುದ ಸರಿಯಲ್ಲ. ಈ ಹಿಂದೆ ಯಶ್ ಅವರ ಬಗ್ಗೆ ಹಾಗೂ ಕೆಜಿಎಫ್ ಸಿನೆಮಾ ಮಾರುವೇಶದಲ್ಲಿ ನೋಡಿ ಬಹಿರಂಗವಾಗಿಯೇ ಮೆಚ್ಚುಗೆ ವ್ಯಕ್ತಪಡಿಸದ್ದನ್ನು ನಾವು ಇಲ್ಲಿ ನೆನಪಿಸಿಕೊಳ್ಳಬೇಕಿದೆ.

Trending

To Top