Film News

ನಾನು ತಲೆ ಹಿಡಿದು ಬೆಳೆದಿಲ್ಲ, ಕನ್ನಡಿಗರ ಅಭಿಮಾನದಿಂದ ಬೆಳೆದವನು!

ಬೆಂಗಳೂರು: ಸ್ಯಾಂಡಲ್‌ವುಡ್‌ನ ನಟ ನವರಸನಾಯಕ ಜಗ್ಗೇಶ್ ನಟ ದರ್ಶನ್ ರವರಿಗೆ ಆಡಿಯೋ ಸಂಭಾಷಣೆಯಲ್ಲಿ ನಿಂದಿಸಿದ್ದಾರೆಂದು ದರ್ಶನ್ ಅಭಿಮಾನಿಗಳು ಹಾಗೂ ಜಗ್ಗೇಶ್ ನಡುವೆ ವಾಗ್ವಾದ ನಡೆಯುತ್ತಿದ್ದು, ನಿನ್ನೆಯಷ್ಟೆ ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಮುತ್ತಿಗೆ ಹಾಕಿ ಜಗ್ಗೇಶ್ ರವರಿಗೆ ದಿಕ್ಕಾರಗಳನ್ನು ಸಹ ಕೂಗಿದ್ದರು.

ಈ ಘಟನೆಗೆ ಮನನೊಂದ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಅಸಮಧಾನ ಹೊರಹಾಕಿದ್ದಾರೆ. ನಾನು ಸುಮಾರು ೪೦ ವರ್ಷದಿಂದ ಊಟ ನಿದ್ದೆ ಇಲ್ಲದೇ ಚಾಪೆ ಹಾಸಿಕೊಂಡು ಬೆಳೆದವನು. ಯಾರ ತಲೆ ಹಿಡಿದು ಬೆಳೆದವನಲ್ಲ. ಬದಲಿಗೆ ನಾನು ಕನ್ನಡಿಗರ ಅಭಿಮಾನದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ. ದಯಮಾಡಿ ನನ್ನ ಬಗ್ಗೆ ಮಾತನಾಡಬೇಡಿ. ನನ್ನ ಪಾಡಿಗೆ ನನ್ನನ್ನು ಬಿಡಿ, ನಾನು ಕನ್ನಡದ ಕೆಲಸ ಮಾಡುತ್ತಿದ್ದೇನೆ. ಇನ್ನೂ ಅನೇಕ ವರ್ಷಗಳ ಕಾಲ ನಾನು ಕನ್ನಡದ ಕೆಲಸ ಮಾಡಬೇಕು, ನನಗೆ ಮಸಿ ಬಳಿಯಬೇಡಿ ಎಂದು ಮನವಿ ಮಾಡುವುದರ ಜೊತೆಗೆ ಅಸಮಧಾನ ತೋಡಿಕೊಂಡಿದ್ದಾರೆ.

ನಾನು ಕನ್ನಡ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗ ಬಕೆಟ್ ಹಿಡಯುವಂತವರು ಯಾರು ಇರಲಿಲ್ಲ. ೮೦ರ ದಶಕದಲ್ಲಿ ನಾನು ಸಿನೆಮಾ ರಂಗಕ್ಕೆ ಬಂದವನು. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಪ್ರಭಾಕರ್ ಮೊದಲಾದ ದೊಡ್ಡ ನಟರ ಜೊತೆ ಬಣ್ಣ ಹಚ್ಚಿದವನು. ಜೊತೆಗೆ ಅವರ ಜೊತೆ ನಕ್ಕು, ಅತ್ತು ಬದುಕಿದವನು. ಅನ್ಯ ಭಾಷಿಕರ ಹಾವಳಿ ಹೆಚ್ಚಾಗುತ್ತಿದ್ದು, ಕನ್ನಡ ಇಂಡಸ್ಟ್ರಿಯಲ್ಲಿ ದೊಡ್ಡ ಮಟ್ಟದಲ್ಲಿ ರಾಜಕೀಯ ನಡೆಯುತ್ತಿದೆ ಎಂದಿದ್ದಾರೆ.

ಅಷ್ಟೇ ಅಲ್ಲದೇ ನಾನು ಇನ್ನು ಮುಂದೆ ಯಾವುದೇ ಸಿನೆಮಾ ಕಾರ್ಯಕ್ರಮಗಳ್ಳಾಗಲೀ, ಹುಟ್ಟುಹಬ್ಬ ಕಾರ್ಯಕ್ರಮಗಳ್ಳಾಗಲೀ, ಸಮಾರಂಭಗಳಿಗೆ ನಾನು ಹೋಗುವುದಿಲ್ಲ. ನನಗೆ ರೌಡಿಸಂ ಎಲ್ಲ ಬೇಕಿಲ್ಲ. ರಾಜ್‌ಕುಮಾರ್, ಅಂಬರೀಶ್, ವಿಷ್ಣುವರ್ಧನ್ ರವರುಗಳು ಮೃತಪಟ್ಟ ನಂತರದ ದಿನಗಳಿಂದ ಕನ್ನಡದ ಸ್ವಾಬಿಮಾನವೂ ಸಹ ಸಾಯುತ್ತಿದೆ. ಇನ್ನೂ ನಾವಿರೋದು ನಾಲ್ಕೈದು ನಟರು (ಶಿವರಾಜ್‌ಕುಮಾರ್, ರವಿಚಂದ್ರನ್, ರಮೇಶ್ ಅರವಿಂದ್, ನಾನೊಬ್ಬ) ಮಾತ್ರ, ನಾವು ಸತ್ತ ಮೇಲೆ ತಿಥಿ ಮಾಡಿ ಸಂತೋಷ ಪಡಿ ಎಂದು ಆಕ್ರೋಷ ಹೊರಹಾಕಿದ್ದಾರೆ.

Trending

To Top