News

(video)ನಮ್ಮ ಅಂಬರೀಷ್ ಮಾಡಿರುವ ಸಾಧನೆ ಹಾಗು ಜನರ ಅಭಿಮಾನ ಸುಮಲತಾ ಕೈ ಹಿಡಿಯುತ್ತೆ ಎಂದ ಜಗ್ಗೇಶ್! ವಿಡಿಯೋ ನೋಡಿ

sumalata-jaggesh

ನೆನ್ನೆ ನಮ್ಮ ಕರುನಾಡ ನವರಸ ನಾಯಕರಾದ ಜಗ್ಗೇಶ್ ಅವರ ಹುಟ್ಟು ಹಬ್ಬ. ನಿಮಗೆಲ್ಲ ಗೊತ್ತಿರೋ ಹಾಗೆ ನಮ್ಮ ಜಗ್ಗೇಶ್ ಅವರು ರಾಜಕೀಯ ದಲ್ಲಿ ಕೂಡ ಇದ್ದಾರೆ. ಸುಮಲತಾ ಅವರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಪರ್ದಿ ಆಗಿ ಪಾಲ್ಗೊಳ್ಳುತ್ತಿದ್ದಾರೆ! ನೆನ್ನೆ ಜಗ್ಗೇಶ್ ಸರ್ ಅವರ ಹುಟ್ಟು ಹಬ್ಬದ ಸಮಯದಲ್ಲಿ ಸುಮಲತಾ ಅಂಬರೀಷ್ ಅವರು ಚುನಾವಣೆಯಲ್ಲಿ ನಿಲ್ಲುವುದರ ಬಗ್ಗೆ ಕೇಳಿದಾಗ, ಜಗ್ಗೇಶ್ ಅವರು “ನಮ್ಮ ರೆಬೆಲ್ ಸ್ಟಾರ್, ಕರುನಾಡ ಕರ್ಣ, ಅಂಬರೀಷ್ ಅವರು ಮಾಡಿರುವ ಸಾಧನೆ, ಅವರ ಒಳ್ಳೆಯ ವ್ಯಕ್ತಿತ್ವ, ಜನರ ಪ್ರೀತಿ ಮತ್ತು ಅಭಿಮಾನ, ಸುಮಲತಾ ಅವರ ಕೈ ಬಿಡುವುದಿಲ್ಲ” ಎಂದು ಹೇಳಿದ್ದಾರೆ. ಜಗ್ಗೇಶ್ ಅವರು ಸುಮಲತಾ ಅವರ ಬಗ್ಗೆ, ತಮ್ಮ ರಾಜಕೀಯ ಜರ್ನಿ ಬಗ್ಗೆ, ತಮ್ಮ ಹುಟ್ಟು ಹಬ್ಬದ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋ ನೋಡಿರಿ
ನವೆಂಬರ್ 24 , 2018 , ಇಡೀ ಕರ್ನಾಟಕಕ್ಕೆ ಒಂದು ಕರಾಳ ದಿನ. ಆ ದಿನ ನಮ್ಮ ಕರುನಾಡ ಕರ್ಣ ರೆಬೆಲ್ ಸ್ಟಾರ್ ಅಂಬರೀಷ್ ಅವರ ತೀರಿಕೊಂಡರು. ಇವರನ್ನು ಕೊನೆಯದಾಗಿ ನೋಡಲು ಅದೆಷ್ಟೋ ಲಕ್ಷ ಜನ ಬೆಂಗಳೂರಿಗೆ ಬಂದಿದ್ದರು. ಇತ್ತೀಚಿಗೆ ಅಂಬಿ ನಿಧನದ ಸುಮಾರು 3 ತಿಂಗಳ ನಂತರ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅಂಬಿ ನಮನ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಕನ್ನಡದ ಹಿರಿಯ ನಟರು, ನಿರ್ಮಾಪಕರು, ತಾರೆಯರು ಬಂದಿದ್ದರು. ಈ ಕಾರ್ಯಕ್ರಮದಲ್ಲಿ SPB ಅವರು ಕುಚ್ಚಿಕ್ಕು ಕುಚ್ಚಿಕ್ಕು ಹಾಡನ್ನು ಹಾಡಿದಾಗ ಸುಮಲತಾ ಅವರು ಅಂಬಿ ಹಾಗು ವಿಷ್ಣುವನ್ನು ನೆನೆದು ಕಣ್ಣೀರಿಟ್ಟರು! ಇದಲ್ಲದೆ ಅಲ್ಲಿ ನೆರೆದಿದ್ದ ಹಿರಿಯ ನಟರೂ ಕೂಡ SPB ಹಾಡು ಕೇಳಿ ಕಣ್ಣೀರಿಟ್ಟಿದ್ದಾರೆ! ಈ ಭಾವುಕದ ಕ್ಷಣವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಳವಳ್ಳಿ ಹುಚ್ಚೇಗೌಡ ಅಮರನಾಥ್ (29 ಮೇ 1952 – 24 ನವೆಂಬರ್ 2018), ಅವರ ಸಿನೆಮಾ ರಂಗದ ಹೆಸರು ಅಂಬರೀಶ್ , ಒಬ್ಬ ಭಾರತೀಯ ಚಲನಚಿತ್ರ ನಟ ಅವರು, ಮಾಧ್ಯಮದ ವ್ಯಕ್ತಿ ಮತ್ತು ಕರ್ನಾಟಕ ಕಂಡ ರಾಜಕಾರಣಿ. ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮದ್ದೂರು ತಾಲ್ಲೂಕ್ನ ನಲ್ಲಿ ಹುಟ್ಟಿದ ಅವರನ್ನು ಇಂಗ್ಲಿಷ್ ಮ್ಯಾನ್ ಆಫ್ ಮಂಡ್ಯ ಎಂದು ಪ್ರೀತಿಯಿಂದ ಮಂಡ್ಯದ ಜನ ಕರೆಯಲ್ಪಡುತ್ತಾರೆ. ಪುಟ್ಟಣ್ಣ ಕಣಗಾಲ್ ಅವರ ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರ ನಾಗರಾಹವು (1972) ನಲ್ಲಿ ಚೊಚ್ಚಲ ನಟನೆಯ ನಂತರ, ಅವರ ನಟನಾ ವೃತ್ತಿಯು ಕನ್ನಡ ಚಿತ್ರಗಳಲ್ಲಿ ವಿರೋಧಾಭಾಸ ಮತ್ತು ಪೋಷಕ ಪಾತ್ರಗಳನ್ನು ಚಿತ್ರಿಸುವ ಒಂದು ಸಂಕ್ಷಿಪ್ತ ಹಂತದೊಂದಿಗೆ ಪ್ರಾರಂಭವಾಯಿತು. ವಾಣಿಜ್ಯಿಕವಾಗಿ ಯಶಸ್ಸು ಗಳಿಸಿದ ಅನೇಕ ಚಿತ್ರಗಳಲ್ಲಿ ಪ್ರಮುಖ ಪಾತ್ರ ವಹಿಸುವ ನಟನಾಗಿ ತನ್ನನ್ನು ತಾನೇ ಸ್ಥಾಪಿಸಿದ ನಂತರ, ಅವರು “ಬಂಡಾಯದ ತಾರೆ” ಎಂಬ ಪದಕ್ಕೆ ಸಮಾನಾರ್ಥಕರಾದರು ಮತ್ತು ನಂತರ ಕರ್ನಾಟಕದ ಜನಪ್ರಿಯ ಸಂಸ್ಕೃತಿಯಲ್ಲಿ ಮಧ್ಯಾಹ್ನದ ವಿಗ್ರಹ ಸ್ಥಾನಮಾನವನ್ನು ಮುಂದುವರೆಸಿದರು. ಸುಮಲತಾ ಅವರು ಹೇಳುತ್ತಾರೆ ಅಂಬಿ ಅವರನ್ನು ಮೊದಲ ಬಾರಿ ಬೇಟಿ ಮಾಡಿದ್ದು ಆಹುತಿ ಚಿತ್ರದ ಶೂಟಿಂಗ್‌ ಸಮಯದಲ್ಲಿ. ಅದಕ್ಕಿಂತ ಮುಂಚೆ ಅವರನ್ನು ಫಂಕ್ಷನ್‌ ಒಂದರಲ್ಲಿ ನೋಡಿದ್ದೆ. ಅಲ್ಲಿ ಅವರನ್ನು ಬೇಟಿ ಹಾಗಿರಲಿಲ್ಲ ಪರಿಚಯ ಕೂಡ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ದೂರದಿಂದ ನೋಡಿದ್ದೆ ಅಷ್ಟೆ. ತುಂಬಾನೇ ಭಯ ಇತ್ತು ನಂಗೆ, ಅವರ ಜೊತೆ ಅಭಿನಯ ಮಾಡೋಕೆ. ಆವಾಗ್ಲೇ ಅದು ಇದು ಏನೇನೋ ಗಾಳಿಸುದ್ದಿ, ಗಾಸಿಫ್ಸ್‌ ಇತ್ತು. ಸಿನೆಮಾ ರಂಗದಲ್ಲಿ ಇರುವ ಎಲ್ಲರ ಬಗೆಗೂ ಇದ್ದೆ ಇರುತ್ತೆ. ಆದ್ರೆ ನಾನು ಆ ಸಮಯದಲ್ಲಿ ಕನ್ನಡ ಚಿತ್ರರಂಗಕ್ಕೆ ತುಂಬಾ ಹೊಸಬಳು. ಹಾಗಾಗಿ ಭಯ ಇತ್ತು ಸ್ವಲ್ಪ ದಿನದ ಶೂಟಿಂಗ್‌ ನಂತರ ನನಗೆ ತಿಳಿದ ವಿಷಯ ವೆಂದರೆ ಅವರ ಬಗೆಗೆ ಭಯ ಪಡಬೇಕಾಗಿಲ್ಲ ಅನ್ನೋದು. ವಾಸ್ತವವಾಗಿ ನಮ್ಮದು ಅಂತ ಔಪಚಾರಿಕ ಪ್ರೊಪೋಸಲ್‌ ಏನೂ ಆಗಿರಲಿಲ್ಲ. ಫಸ್ಟ್‌ ಟೈಮ್‌ ಮೀಟ್‌ ಮಾಡಿದ್ದು 1984 ರಲ್ಲಿ ಇರಬೇಕು ನಮ್ಮ ಮದುವೆ ಆಗಿದ್ದು 1991ರಲ್ಲಿ. ಆ ಸಮಯದಲ್ಲಿ ಎರಡು ಮೂರು ವರ್ಷಗಳಲ್ಲಿ ನಾವು ಯಾವುದೇ ಸಿನಿಮಾ ಮಾಡಿರಲಿಲ್ಲ. ಆಗ ನಾನು ಚೆನ್ನೈನಲ್ಲಿದ್ದೆ. ಅವರು ಬೆಂಗಳೂರಲ್ಲಿದ್ರು. ಆವಾಗ ಮೊಬೈಲ್‌ ಫೋನ್ ಇರಲಿಲ್ಲ. ಹಾಗಾಗಿ ಇಬ್ಬರಿಗೂ ಸಂಪರ್ಕ ಅಂತ ಏನೂ ಇರಲಿಲ್ಲ.
ಯಾವಾಗ್ಲಾದ್ರೂ ಇವ್ರು ಬೆಂಗಳೂರಿಂದ ಚೆನ್ನೈಗೆ ಬಂದಾಗ ಫೋನ್‌ ಮಾಡೋರು, ಹೆಗಿದಿಯ ಅಂತ. ಅಷ್ಟೇ. ನಾನು ಬೆಂಗಳೂರು ಬಂದಾಗ ಎಲ್ಲಾದ್ರೂ ಇದ್ದಾಗ, ಪಾರ್ಟಿ ಇದ್ದಾಗ, ಅಥವಾ ಪಕ್ಕದಲ್ಲಿ ಶೂಟಿಂಗ್‌ ಇದ್ದಾಗ ಹೋಗಿ ಹಲೋ ಹೇಳಿ ಬರುತ್ತಿದ್ದೆ. ಈ ರೀತಿ ಇದ್ದವು ನಮ್ಮ ಅಂದಿನ ದಿನಗಳು.ಆರಂಭದಲ್ಲಿ ನಾವು ಅಷ್ಟು ಕ್ಲೋಸ್‌ ಆಗಿರಲಿಲ್ಲ ಸಮಯ ಕಳೆದಂತೆಲ್ಲ ಸ್ವಲ್ಪ ಕ್ಲೋಸ್‌ ಆಗ್ತಾ ಬಂದ್ವಿ. ನನಗೆ ಅರ್ಥವಾಗಿತ್ತಲ್ಲ, ಇವ್ರು ಫ್ರೆಂಡ್ಲಿ ಮನೋಭಾವದವರು, ತೆರೆದ ಹೃದಯ ವ್ಯಕ್ತಿತ್ವ ಅವರದು ಅಂತ. ಇಂಥವರು ತುಂಬಾ ಅಪರೂಪ. ಅದರಲ್ಲೂ ಚಿತ್ರರಂಗದಲ್ಲಿ ಇಂತಹ ವ್ಯಕ್ತಿತ್ವವನ್ನು ನೋಡುವುದು ತುಂಬಾ ಅಪರೂಪ, ಹಾಗಾಗಿ ನಾನು ಅವರನ್ನು ಇಷ್ಟಪಟ್ಟೆ ಅವರೂ ನನ್ನನ್ನು ತುಂಬಾ ಪ್ರೀತಿ ಮಾಡುತಿದ್ದರು ಯಾಕೆ ಅಂದ್ರೆ ಸಿನೆಮಾ ಮಂದಿ ಜೊತೆ ಇರುವಾಗ ಅವರದೇ ಒಂದು ನಡತೆ, ಸ್ವಭಾವ, ಹವ್ಯಾಸಗಳಿರತ್ತೆ. ನಾನು ಅವರೆಲ್ಲರಿಗಿಂತ ಭಿನ್ನವಾಗಿದ್ದೆ, ತುಂಬಾ ಸೈಲೆಂಟ್‌. ನನ್‌ ಪಾಡಿಗೆ ನಾನು ಒಂದು ಕಡೆ ಕೂತು ಪುಸ್ತಕ ಓದ್ತಿದ್ದೆ. ಯಾರ ಹತ್ರಾನೂ ಅಷ್ಟೊಂದು ಮಿಂಗಲ್‌ ಆಗ್ತಿರಲಿಲ್ಲ. ಬಟ್‌ ಇವರು ಸೆಟ್‌ಗೆ ಬಂದ್ಬಿಟ್ರೆ ಅದೆಲ್ಲಾ ಬದಲಾಗ್ತಿತ್ತು. ಎಲ್ಲರ ಜೊತೆ ಮಾತಾಡಬೇಕು ಅನ್ನೋ ಸ್ವಭಾವ ಇವರದು. ನಮ್ಮ ಇಬ್ಬರದೂ ವಿರುದ್ದವಾದ ಪರ್ಸನಾಲಿಟಿ ಎಲ್ಲಾ ವಿಷಯದಲ್ಲೂ ಅಷ್ಟೇ. ನಂಗೆ ಬುಕ್ಸ್‌ ಓದೋದು ತುಂಬಾ ಇಷ್ಟ. ಅವರು ಬುಕ್ಸ್‌ ಓದೋದೇ ಇಲ್ಲ. ಅವರು ತುಂಬಾ ಆ್ಯಕ್ಟಿವ್‌ ಪರ್ಸನ್‌. ನಾನು ಸ್ವಲ್ಪ ಬಿಗುಮಾನ ವ್ಯಕ್ತಿತ್ವ.
ಫ್ರೆಂಡ್‌ಗಳ ಜೊತೆ ನಾನು ಓಪನ್‌ ಆಗ್ತೀನೇ ಹೊರತು ಹೊರಗಡೆ ಜನರಿಗೆ ನನ್ನ ನಿಜ ರೂಪ ಗೊತ್ತಾಗೋ ಚಾನ್ಸೇ ಇಲ್ಲ. ಯಾಕಂದ್ರೆ ನಾನು ಓಪನ್ ಆಗಿ ಎಲ್ಲರ ಆತ್ತಿರ ಮಾತನಾಡಲು ಬಯಸುವುದಿಲ್ಲ. ಆದ್ರೆ ಅಂಬಿ ಅತ್ರ ಮಾತ್ರ ತುಂಬಾ ಓಪನ್ ಆಗಿ ಇರ್ತಿದ್ದೆ ನಾನು. ನಾನು ನೋಡಿರೋದರಲ್ಲಿ ಸ್ವಲ್ಪ ಡಿಫರೆಂಟ್‌ ಪರ್ಸನಾಲಿಟಿ ಅಂತ ನನ್ನ ನೋಡಿ ಅವರಿಗೆ ಅನ್ನಿಸಿರಬಹುದು. ಕಾಲ ಕ್ರಮೇಣ ನಾವು ಇಬ್ರೂ ಕ್ಲೋಸ್ ಆಗ್ತಾ ಬಂದ್ವಿ ಪ್ರೀತಿ ಏನು ಇಷ್ಟುದಿನದ್ದು ಅಂತ ನಿರ್ದಿಷ್ಟವಾಗಿ ಹೇಳಲು ಆಗುವುದಿಲ್ಲ. 8 ರಿಂದ 10 ಸಿನೆಮಾ ಗಳನ್ನು ಮಾಡಿದೀವಿ ಜೊತೇಲಿ, ನ್ಯೂಡೆಲ್ಲಿ ಆದ್ಮೇಲೆ ಕ್ಲೋಸ್‌ ಆದ್ವಿ. ಆಗಾಗ ಮಾತಾಡ್ಕೋತಿದ್ವಿ. ಈಗಲ್ಲ ಒಂದೆರಡು ವರ್ಷ ಬಿಟ್ಟು ಮದ್ವೆ ಮಾಡ್ಕೊಳೋಣ ಅಂತ ಮಾತಾಡ್ತಿದ್ವಿ. ಈ ಥರ ಒಬ್ಬರು ಔಪಚಾರಿಕ ವಾಗಿ ಪ್ರೊಪೋಸಲ್‌ ಮಾಡಿದ್ದು ಅಂತ ಇಲ್ಲ. ನಮ್‌ ಮದ್ವೆಯಾದಾಗ ಅವರಿಗೆ 39 ವರ್ಷ. ಅಷ್ಟು ವಯಸ್ಸಾದರೂ ಇನ್ನು ಮದುವೆ ಆಗದ ಕಾರಣ ಅವರ ಮನೆಯವರು ಕಾಯ್ತಾ ಇದ್ರು. ಒಮ್ಮೆ ಮದ್ವೆ ಆಗ್ಬಿಡ್ಲಿ ಅಂತ. ಮದ್ವೆಯಾದ್ರೆ ಸಾಕು ಅಂತ ಅವರ ತಾಯೀ ಹೇಳುತ್ತಿದ್ದರು. ಹಾಗೂ ಅವರಮ್ಮ ತುಂಬಾ ಆಸೆ ಇಟ್ಕೊಂಡಿದ್ರು. ಅಂಬರೀಷ್‌ ಮದ್ವೆ ಮಾಡ್ಬೇಕು. ನಮ್ ಇಬ್ರಿಗೆ ಗಂಡು ಮಗು ಆಗುತ್ತೆ ಅಂತ, ಅಂಬರೀಷ್‌ ಮಗು ಆಗಿ, ಆ ಮಗು ನೋಡಿದ ಮೇಲೇನೆ ಈ ಜಗತ್ತನ್ನು ತೊರೆಯಬೇಕು ಅನ್ನೋ ಆಸೆ ಇತ್ತು ಅವರಿಗೆ. ಆಗೆ ಆಯ್ತು.

Trending

To Top