Film News

ಜಗ್ಗೇಶ್ ಅಭಿನಯಿಸುವ ರಂಗನಾಯಕ ಚಿತ್ರ ಪ್ರಾರಂಭ

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಹಾಗೂ ಖ್ಯಾತ ನಿರ್ದೇಶಕ ಗುರುಪ್ರಸಾದ್ ರವರ ಕಾಂಬಿನೇಷನ್ ನಲ್ಲಿ 11 ವರ್ಷಗಳ ನಂತರ ರಂಗನಾಯಕ ಚಿತ್ರದ ಮೂಲಕ ಬರಲಿದ್ದು, ಚಿತ್ರೀಕರಣ ಸಹ ಪ್ರಾರಂಭವಾಗಿದೆ.

ಸ್ಯಾಂಡಲ್ ವುಡ್ ನ ಯಶಸ್ವಿ ಜೋಡಿ ಎಂದೇ ಕರೆಯಲಾಗುವ ಜಗ್ಗೇಶ್ ಹಾಗೂ ಗುರುಪ್ರಸಾದ್ ರವರ ಸಾರಥ್ಯದಲ್ಲಿ ರಂಗನಾಯಕ ಚಿತ್ರದ ಮುಹೂರ್ತ ಬಸವನಗುಡಿಯ ರಾಯರ ಮಠದಲ್ಲಿ ನೆರವೇರಿದೆ. ಜೊತೆಗೆ ಚಿತ್ರದ ಶೂಟಿಂಗ್ ಸಹ ಆರಂಭವಾಗಿದೆ. ಮಠ, ಎದ್ದೇಳು ಮಂಜುನಾಥ ಸಿನೆಮಾಗಳ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಬರಲಿರುವ ಚಿತ್ರವೇ ರಂಗನಾಯಕ.

ಇನ್ನೂ ಈ ಕುರಿತು ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ಜಗ್ಗೇಶ್ ಬ್ರಾಹ್ಮೀ ಮುಹೂರ್ತದ ಶುಭಸಮಯ ರಂಗನಾಯಕ ಚಿತ್ರ ಬಸವನಗುಡಿ ರಾಯರಮಠದಲ್ಲಿ ಪ್ರಥಮ ಆರಂಭ ಪಲಕ ಹಾಗೂ ರಾಯರ ಬೃಂದಾವನದ ಚಿತ್ರೀಕರಣ ಮಾಡಿ ಶೂಟಿಂಗ್ ಕಾರ್ಯ ಆರಂಭವಾಗಿದೆ. ಮಠ, ಎದ್ದೇಳು ಮಂಜುನಾಥ ಚಿತ್ರಗಳ ನಂತರ ಗುರುಪ್ರಸಾದ್ ನನ್ನ ಸಮ್ಮಿಲನ, ನಾವು ನಗಿಸಲು ರೆಡಿ, ಶುಭ ಹಾರೈಸಿ ಎಂದು ಟ್ವೀಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಈ ಚಿತ್ರ 2020 ರಲ್ಲಿಯೇ ಆರಂಭವಾಗಬೇಕಿತ್ತು, ಕೊರೋನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ಮುಂದೂಡಲಾಗಿತ್ತು. ಇದೀಗ ವಿಖ್ಯಾತ್ ಪ್ರೊಡಕ್ಷನ್ ನಲ್ಲಿ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆಯ ಜೊತೆಗೆ ನಿರ್ದೇಶನ ಕೂಡ ಗುರುಪ್ರಸಾದ್ ರವರೇ ಮಾಡಲಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಜಗ್ಗೇಶ್ ರವರನ್ನು ಹೊರತುಪಡಿಸಿ ಬೇರೆ ಯಾವ ನಟರು ಅಭಿನಯಿಸಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.

Trending

To Top