Film News

ಮಾಲಾಶ್ರೀ ಅವರಿಗೆ ಕ್ಷಮೆ ಕೇಳಿದ ನವರಸನಾಯಕ ಜಗ್ಗೇಶ್ !

ಕನ್ನಡ ಚಿತ್ರರಂಗದ ಕೋಟಿ ನಿರ್ಮಾಪಕ ಎಂದೇ ಖ್ಯಾತಿ ಪಡೆದಿದ್ದ ನಿರ್ಮಾಪಕ ರಾಮು ಇಹಲೋಕ ತ್ಯಜಿಸಿದ್ದಾರೆ.ಮಹಾಮಾರಿ ಕೊರೋನ ವೈರಸ್ ಸೋಂಕಿಗೆ ತುತ್ತಾಗಿದ್ದ ನಿರ್ಮಾಪಕ ರಾಮು ಏಪ್ರಿಲ್ 26 ರಂದು ಕೊನೆ ಉಸಿರು ಎಳೆದರು.ಸರ್ಕಾರದ ಅನುಮತಿ ಪಡೆದು ಕೋವಿಡ್ ನಿಯಮಾನುಸಾರ ರಾಮು ಸ್ವಗ್ರಾಮವಾದ ಕೊಡಿಗೇನಹಳ್ಳಿಯಲ್ಲಿ ರಾಮು ಅವರ ಅಂತ್ಯ ಸಂಸ್ಕಾರ ನಡೆದಿದೆ.ಅಂತ್ಯಸಂಸ್ಕಾರದಲ್ಲಿ ರಾಮು ಪತ್ನಿ ಮಾಲಾಶ್ರೀ ಇಬ್ಬರೂ ಮಕ್ಕಳು ಸೇರಿದಂತೆ ಕುಟುಂಬದ ಕೆಲವೇ ಕೆಲವು ಮಂದಿ ಮಾತ್ರ ಬಾಗಿಯಾಗಿದ್ದರು.

ಕೋವಿಡ್ ಕಾರಣದಿಂದ ರಾಮು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಚಿತ್ರರಂಗದವರಿಂದ ಸಾಧ್ಯವಾಗಲಿಲ್ಲ.ಆದರೆ ಇದೀಗ ರಾಮು ಅವರನ್ನ ಸ್ವಂತ ತಮ್ಮನಂತೆ ನೋಡಿದ್ದ ಜಗ್ಗೇಶ್ ಅವರು ಮಾಲಾಶ್ರೀ ಬಳಿ ಕೈ ಮುಗಿದು ಕ್ಷಮೆ ಕೇಳಿದ್ದು ಮಾಲಾಶ್ರೀ ಪರಿಸ್ಥಿತಿ ನೋಡಿ ಕಣ್ಣೀರು ಹಾಕಿದ್ದಾರೆ.

ಮಾಲಾಶ್ರೀ ಮೇಡಮ್ ನಿಮ್ಮ ಸಂಕಷ್ಟದಲ್ಲಿ ಬಾಗಿಯಾಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆಬಾಗಿ ಕ್ಷಮೆ ಕೋರುವೆ, ತಮ್ಮ ನೋವಿಗೆ ಸ್ವಂತ್ವನ ಹೇಳುವ ಶಕ್ತಿ ಮಾತ್ರ ಉಳಿದಿದೆ, ಚಿತ್ರರಂಗಕ್ಕೆ ಅನೇಕ ಸೇವೆ ಮಾಡಿ ಅನೇಕ ಚಿತ್ರರಂಗದ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು ಅವನ ಆತ್ಮಕ್ಕೆ ಶಾಂತಿ ಕೋರಿ ನಿಮ್ಮ ಮನೆಯಲ್ಲೇ ರಾಮು ಹುಟ್ಟಿ ಬರಲಿ ಎಂದು ರಾಯರಲ್ಲಿ ಪ್ರತಿಸುತ್ತೇನೆ.ದಯಮಾಡಿ ನೀವು ಧೈರ್ಯದಿಂದ ಈ ಸಂಕಷ್ಟ ಎದುರಿಸಿ ಮಕ್ಕಳನ್ನ ರಾಮು ಎತ್ತರಕ್ಕೆ ಬೆಳೆಸಿ ನಿಮ್ಮ ಜೊತೆಗೆ ನಾವು ಉದ್ಯಮದ ಎಲ್ಲಾ ಸ್ನೇಹಿತರು ಇರುತ್ತೇವೆ ಮುಂದಿನ ಸಾಂಸಾರಿಕ ಜೀವನ ನಿಬಾಯಿಸುವ ಶಕ್ತಿ ರಾಯರು ನಿಮಗೆ ನೀಡಲಿ ಇನ್ನು ಮುಂದಿನ ನಿಮ್ಮ ಜೀವನಕ್ಕೆ ಯಾವುದೇ ಸಹಾಯ ಬೇಕಿದ್ದರೂ ನಾವು ಮಾಡಲು ರೆಡಿ ಎಂದು ನಟ ಜಗ್ಗೇಶ್ ಬರೆದುಕೊಂಡಿದ್ದಾರೆ.

Trending

To Top