Film News

ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ಜಗಳಕ್ಕೆ ಸುಖಾಂತ್ಯ!

ಬೆಂಗಳೂರು: ಕೆಲವು ದಿನಗಳಿಂದ ದರ್ಶನ್ ಅಭಿಮಾನಿಗಳು ಹಾಗೂ ನಟ ಜಗ್ಗೇಶ್ ನಡುವೆ ನಡೆಯುತ್ತಿರುವ ಜಗಳ ಸುಖ್ಯಾಂತವಾಗಿದೆ. ನಟ ದರ್ಶನ್ ತಮ್ಮ ಅಭಿಮಾನಿಗಳ ಪರವಾಗಿ ಜಗ್ಗೇಶ್ ರವರನ್ನು ಕ್ಷಮೆ ಕೇಳಿದು ವಿವಾದ ಸುಖಾಂತ್ಯವಾಗಿದೆ.

ನಟ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಕುರಿತು ಆಡಿಯೋ ಕ್ಲಿಪ್ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಜಗ್ಗೇಶ್ ರವರು ಶೂಟಿಂಗ್ ನಲ್ಲಿದ್ದಾಗ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದರು. ಈ ಘಟನೆಯನ್ನು ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದರು. ಜೊತೆಗೆ ಈ ಕುರಿತು ಜಗ್ಗೇಶ್ ಸಹ ಪತ್ರಿಕಾಗೋಷ್ಟಿಯನ್ನು ಸಹ ಕರೆದು ಈ ವಿವಾದ ಇಲ್ಲಿಗೇ ನಿಲ್ಲಿಸಿ ಬಿಡೋಣ. ಆಡಿಯೋ ಕ್ಲಿಪ್ ನಲ್ಲಿನ ಮಾತುಗಳಿಗೆ ಸ್ಪಷ್ಟನೆಯನ್ನು ಸಹ ನೀಡಿದರು.

ಇನ್ನೂ ಈ ಕುರಿತು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಟ ದರ್ಶನ್ ಅವರ ಅಭಿಮಾನಿಗಳ ಪರವಾಗಿ ಜಗ್ಗೇಶ್ ರವರಿಗೆ ಕ್ಷಮೆ ಕೇಳಿದ್ದಾರೆ. ಜಗ್ಗೇಶ್ ರವರು ನಮ್ಮ ಹಿರಿಯರು, ಅವರು ಮುಂದೆ ನಾವು ಅವರ ಹಿಂದೆ. ನಮ್ಮ ಅಭಿಮಾನಿಗಳಿಂದ ಆದ ತಪ್ಪಿಗೆ ಕ್ಷಮೆ ಕೋರುತ್ತೇನೆ. ಆಡಿಯೋ ವಿಚಾರವನ್ನು ನಾನೊಂದು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಜೊತೆಗೆ ನಾನು ಆಡಿಯೋ ರಿಲೀಸ್ ಆದಾಗ ತಿರುಪತಿಯಲ್ಲಿದೆ. ನನಗೆ ಮಾರನೆ ದಿನ ವಿಷಯ ಗೊತ್ತಾಯಿತು. ಹಿರಿಯರು ಏನೊ ಮಾತಾನಾಡಿದ್ದಾರೆ ಬಿಡಿ ಎಂದು ಸುಮ್ಮನಿದ್ದೆ. ಆದರೆ ಈ ಮಟ್ಟಿಗೆ ಜಗಳ ಆಗುತ್ತೆ ಅಂದುಕೊಂಡಿರಲಿಲ್ಲ.

ಅಷ್ಟೇ ಅಲ್ಲದೇ ನಾನು ಜಗ್ಗೇಶ್ ರವರಿಗೆ ಕರೆ ಮಾಡಲು ಪ್ರಯತ್ನ ಮಾಡಿದೆ. ಆದರೆ ಕರೆ ಸಿಗಲಿಲ್ಲ. ಒಂದು ವೇಳೆ ಕರೆಗೆ ಸಿಕ್ಕಿದ್ದರೇ ವಿಷಯ ತಿಳಿದು ನಾನೇ ಮಾದ್ಯಮದವರಿಗೆ ಸ್ಪಷ್ಟನೆ ನೀಡುತ್ತಿದ್ದೆ. ಆದರೆ ಕರೆ ಸಿಗಲಿಲ್ಲ. ಜಗ್ಗೇಶ್ ರವರ ಮೇಲೆ ಜಗಳಕ್ಕೆ ಹೋದ ಅಭಿಮಾನಿಗಳಿಗೆ ಕರೆ ಮಾಡಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದೇನೆ ಎಂದರು.

Trending

To Top