ತೆಲುಗು ಕಿರುತೆರೆಯಲ್ಲಿ ತುಂಬಾನೆ ಫೇಮ್ ಪಡೆದುಕೊಂಡ ಶೋಗಳಲ್ಲಿ ಜಬರ್ದಸ್ತ್ ಒಂದಾಗಿದೆ. ಕಳೆದ 9 ವರ್ಷಗಳಿಂದ ಈ ಶೋ ತೆಲುಗು ಪ್ರೇಕ್ಷಕರೂ ಸೇರಿದಂತೆ ಅನೇಕರಿಗೆ ಸಂತಸ ನೀಡುತ್ತಿದೆ. ಈ ಶೋ ಮೂಲಕ ಎಂಟ್ರಿ ಕೊಟ್ಟ ಅನೇಕರು ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಂಡಿದ್ದಾರೆ. ಇದೀಗ ಜಬರ್ದಸ್ತ್ ಶೋಗೆ ಹೊಸ ಹೊಸ ಕಲಾವಿದರು, ಆಂಕರ್ ಗಳು ಹಾಗೂ ಜಡ್ಜ್ ಗಳು ಸಹ ಬಂದಿದ್ದಾರೆ. ಅನಸೂಯ ಜಬರ್ದಸ್ತ್ ಶೋ ನಿಂದ ಹೊರ ಹೋದ ಬಳಿಕ ಸೌಮ್ಯಾ ರಾವ್ ಎಂಬಾಕೆ ಆಕೆಯ ಸ್ಥಾನಕ್ಕೆ ಬಂದಿದ್ದಾರೆ. ಇನ್ನೂ ಎಲ್ಲರನ್ನೂ ನಕ್ಕು ನಲಿಸುವಂತಹ ಈ ಕಲಾವಿದರ ಜೀವನದಲ್ಲಿ ಒಂದೊಂದು ದುಃಖದ ಸಂಗತಿ ಇರುತ್ತದೆ. ಇದೀಗ ಹೊಸ ಆಂಕರ್ ಸೌಮ್ಯಾ ರಾವ್ ಜೀವನದಲ್ಲಿ ಸಹ ಕೆಲವೊಂದು ವಿಷಾದಗಳಿದ್ದು, ಅದು ಇದೀಗ ರಿವೀಲ್ ಆಗಿದೆ.
ಆಂಕರ್ ಸೌಮ್ಯಾ ರಾವ್ ಈಗಾಗಲೇ ಜಬರ್ದಸ್ತ್ ಎರಡು ಎಪಿಸೋಡ್ ಗಳನ್ನು ಮಾಡಿದ್ದಾರೆ. ಇದೀಗ ಮೂರನೇ ಎಪಿಸೋಡ್ ಸಿದ್ದವಾಗುತ್ತಿದ್ದು, ಈ ಸಮಯದಲ್ಲಿ ಆಕೆಗೆ ಸಂಬಂಧಪಟ್ಟ ವಿಡಿಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ನೋವಿನ ಬಗ್ಗೆ ರಿವೀಲ್ ಆಗಿದೆ. ತನ್ನ ಜೀವನದ ಅನೇಕ ವಿಚಾರಗಳನ್ನು ಆಕೆ ಹಂಚಿಕೊಂಡಿದ್ದಾರೆ. ಜೊತೆಗೆ ತಾನು ಅನಾಥೆ ತನಗೆ ಯಾರು ಇಲ್ಲ ಎಂದು ಹೇಳಿದ್ದು, ಈ ವಿಚಾರ ಜಬರ್ದಸ್ತ್ ಅಭಿಮಾನಿಗಳನ್ನು ಶಾಕ್ ಮಾಡಿದೆ. ಇತ್ತೀಚಿಗೆ ಸೌಮ್ಯಾ ಈಟಿವಿ ಟೆಲೆವಿಷನ್ ಮಾಡಿದ ಕಾರ್ಯಕ್ರಮವೊಂದರಲ್ಲಿ ಹೈಪರ್ ಆದಿಯೊಂದಿಗೆ ಆಕೆ ಮಾಡಿದ ನಟನೆ ತುಂಬಾನೆ ಆಕರ್ಷಣೆಯಾಗಿತ್ತು. ಇದರ ಭಾಗವಾಗಿಯೇ ಆಕೆಗೆ ಜಬರ್ದಸ್ತ್ ಶೋಗೆ ಆಯ್ಕೆ ಆದರು ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಇನ್ನೂ ಅದೇ ಶೋ ನಲ್ಲಿ ಆಂಕರ್ ಪ್ರದೀಪ್ ನಿಮ್ಮ ಬಗ್ಗೆ ಏನಾದರೂ ಹೇಳಿ ಎಂದು ಕೇಳಿದ್ದು, ಅದಕ್ಕೆ ಸೌಮ್ಯಾ ನಾನು ನನ್ನ ಲೈಫ್ ಬಗ್ಗೆ ಹೇಳುವುದಿಲ್ಲ ಆದರೆ ನಾನೊಬ್ಬ ಅನಾಥೆ ಎಂದು ಹೇಳಿದ್ದಾರೆ.
ಆಂಕರ್ ಪ್ರದೀಪ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸೌಮ್ಯಾ, ನಾನು ನನ್ನ ಜೀವನದ ಬಗ್ಗೆ ಹೇಳುವುದಿಲ್ಲ. ಆದರೆ ನನಗೆ ತಂದೆ ತಾಯಿಯಿಲ್ಲ. ನಾನು ಅನಾಥೆ, ನನಗೆ ಯಾರೂ ಇಲ್ಲ. ಇಲ್ಲಿರುವ ಎಲ್ಲರಿಗೂ ಯಾರೋ ಒಬ್ಬರು ಇರುತ್ತಾರೆ ಆದರೆ ನನಗೆ ಯಾರೂ ಇಲ್ಲ. ಇಂತಹ ಫ್ಯಾಮಿಲಿ ದೊರೆತಾಗ ನಾನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಕಣ್ಣಿರಾಕಿದ್ದಾರೆ. ಜೊತೆಗೆ ಅಲ್ಲಿದ್ದ ಎಲ್ಲರಿಗೂ ಸಹ ಕಣ್ಣಿರು ಬರುವಂತೆ ಮಾಡಿದ್ದಾರೆ. ಇನ್ನೂ ಸೌಮ್ಯಾ ರಾವ್ ಕನ್ನಡ ಮೂಲದವರಾಗಿದ್ದು, ಮಾಡಲಿಂಗ್ ಮೂಲಕ ಕೆರಿಯರ್ ಪ್ರಾರಂಭಿಸಿದ್ದರು. ಬಳಿಕ ಟಿ.ವಿ ಶೋಗಳಿಗೆ ಆಂಕರ್ ಆಗಿ, ಕೆಲವೊಂದು ಸೀರಿಯಲ್ ಗಳಲ್ಲೂ ಸಹ ಆಕೆ ನಟಿಸಿದ್ದರು. ಇದೀಗ ಆಕೆ ಫೇಮಸ್ ಜಬರ್ದಸ್ತ್ ಶೋಗೆ ಆಂಕರ್ ಆಗಿ ಆಯ್ಕೆ ಆಗಿದ್ದು, ಇಲ್ಲಿಂದ ಆಕೆಯ ಕರಿಯರ್ ಸಹ ಬದಲಾಗಲಿದೆ ಎನ್ನಲಾಗುತ್ತಿದೆ.
ಇನ್ನೂ ಸೌಮ್ಯಾ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಹಾಟ್ ಪೊಟೋಶೂಟ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಆಕೆಯ ಕಿಲ್ಲಿಂಗ್ ಲುಕ್ಸ್ ನೊಂದಿಗೆ ಅನೇಕ ಯುವಕರ ಕ್ರಷ್ ಆಗುತ್ತಿದ್ದಾರೆ. ಇನ್ನೂ ಆಕೆ ಹಂಚಿಕೊಳ್ಳುವ ಪೊಟೊಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿದೆ.
