ಅಮೀರ್ ಖಾನ್ ಪುತ್ರಿಯ ಬಾಯ್ ಫ್ರೆಂಡ್ ಪೊಟೋ ವೈರಲ್!

ಮುಂಬೈ: ಬಾಲಿವುಡ್‌ನ ಖ್ಯಾತ ಸ್ಟಾರ್ ನಟ ಅಮೀರ್‌ಖಾನ್ ಪುತ್ರಿ ಇರಾ ಖಾನ್ ತನ್ನ ಬಾಯ್‌ಫ್ರೆಂಡ್ ಜೊತೆಗಿನ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಲವರ್‍ಸ್ ಡೇ ಹತ್ತಿರ ಬರುತ್ತಿದ್ದಂತೆ ಅಮೀರ್‌ಖಾನ್ ಪುತ್ರಿ ಇರಾಖಾನ್ ತನ್ನ ಗೆಳಯನ ಜೊತೆಗಿನ ಪೊಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತನ್ನ ಪ್ರೀತಿಯ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಸಿನೆಮಾ ನಿರ್ದೇಶಕಿಯಾಗಲಿರುವ ಇರಾಖಾನ್ ತನ್ನ ಜಿಮ್ ತರಬೇತುದಾರನ ಜೊತೆ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಇದೀಗ ಆತನ ಜೊತೆಗಿರುವ ರೊಮ್ಯಾಂಟಿಕ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

ಅಂದಹಾಗೆ ಇರಾಖಾನ್ ರವರ ಜಿಮ್ ತರಬೇತುದಾರ ನೂಪುರ್ ಶಿಕಾರೆ ಎನ್ನುವ ವ್ಯಕ್ತಿಯೊಂದಿಗೆ ಇರಾಖಾನ್ ಪ್ರೀತಿಯಲ್ಲಿದ್ದಾರೆ. ಇನ್ನೂ ಈ ಕುರಿತು ಇನ್ಸ್ಟಾಗ್ರಾಂ ನಲ್ಲಿ ಪೊಟೋಗಳನ್ನು ಶೇರ್ ಮಾಡಿ, ನಿನ್ನ ಜೊತೆಗೆ, ನಿನಗಾಗಿ ಜೊತೆಯಾಗಿರುವ ಪ್ರತಿಜ್ಞೆ ಮಾಡುವುದಕ್ಕೆ ತುಂಬಾ ಹೆಮ್ಮೆ ಪಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಮೈ ಡ್ರೀಮ್ ಭಾಯ್, ಮೈ ವಾಲೆಂಟೈನ್ ಎಂಬ ಹ್ಯಾಷ್‌ಟ್ಯಾಗ್ ಸಹ ಹಾಕಿ ಶೇರ್ ಮಾಡಿದ್ದಾರೆ.

ಇನ್ನೂ ನಟ ಅಮೀರ್ ಖಾನ್ ಹಾಗೂ ರೀನಾ ದತ್ತಾ ಅವರ ಮುದ್ದು ಕುಮಾರಿ ಇರಾಖಾನ್, ರೀನಾ ದತ್ತಾ ಜೊತೆ ಇರಾಖಾನ್ ವಾಸಿಸುತ್ತಿದ್ದು, ಅಮೀರ್ ಖಾನ್ ರೊಂದಿಗೆ ಆತ್ಮೀಯ ಬಾಂದವ್ಯ ಹೊಂದಿದ್ದಾರೆ. ಯುವರಾಜ್ ಸಿಂಗ್ ಪತ್ನಿ ಹೇಜಲ್ ಕೀಚ್ ರವರು ಅಭಿನಯಿಸಲಿರುವ ಚಿತ್ರವೊಂದಕ್ಕೆ ನಿರ್ದೇಶನ ಮಾಡಲಿದ್ದಾರೆ ಇರಾಖಾನ್.

Previous articleಡಿ-ಬಾಸ್ ಹುಟ್ಟುಹಬ್ಬಕ್ಕೆ ಎರಡು ಗುಡ್ ನ್ಯೂಸ್!
Next articleಸಿಲ್ಕ್ ಸ್ಮಿತಾ ಪಾತ್ರದಲ್ಲಿ ಶ್ರೀರೆಡ್ಡಿ ನಟನೆ!