ಇಂದು ಉಪೇಂದ್ರ ಹಾಗು ರಚಿತಾ ರಾಮ್ ಅವರ ಐ ಲವ್ ಯು ಚಿತ್ರದ ಆಡಿಯೋ ಬಿಡುಗಡೆ ಆಗುತ್ತಿದೆ!

uppi5
uppi5

ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯು ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು ಹಾಗು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನ ಈ ಟ್ರೇಲರನ್ನು ಯೂಟ್ಯೂಬ್ ನಲ್ಲಿ ನೋಡಿದ್ದರು. ಇವತ್ತು ನಮ್ಮ R ಚಂದ್ರು ನಿರ್ದೇಶನದ ಐ ಲವ್ ಯು ಧ್ವನಿಸುರುಳಿ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರ ನಿರ್ದೇಶಕ R ಚಂದ್ರು ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ತಿಳಿದು ಬಂದಿದೆ! ಹೌದು ಐ ಲವ್ ಯು ಒಂದು ಸತ್ಯ ಕಥೆ ಮೇಲೆ ಆಧಾರಿತ ಚಿತ್ರ! ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಚನ್ನಾಗಿ ಹೇಳಿದ್ದಾರಂತೆ. ಬಹಳ ವರ್ಷಗಳ ನಂತರ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರೀತಿ ಪ್ರೇಮ ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐ ಲವ್ ಯು ಚಿತ್ರದ ಆಡಿಯೋ ಇಂದು ಬಿಡುಗಡೆ ಆಗಲಿದೆ. ಐ ಲವ್ ಯು ಚಿತ್ರ ಇದೆ ತಿಂಗಳು ಪ್ರೇಯಿಮಗಳ ದಿನಾಚರಣೆಯ ದಿನದಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.
ಐ ಲವ್ ಯು ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ರಚಿತಾ ರಾಮ್ ಅವರು ಬಹಳ ಬೋಲ್ಡ್ ಆಗಿ ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೋಲ್ಡ್ ಡೈಲಾಗ್ ಗಳು, ಇರುವ ಪಾತ್ರವನ್ನು ಕೊಡಲಾಗಿದೆ. ಇತ್ತೀಚಿಗೆ ಐ ಲವ್ ಯು ಚಿತ್ರದ ಟ್ರೇಲರನ್ನು ನಮ್ಮ ಶಿವಣ್ಣ ಅವರು ಬಿಡುಗಡೆ ಮಾಡಿದ್ದರು. ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರ ಗಳಲ್ಲಿ R ಚಂದ್ರು ಅವರ ಐ ಲವ್ ಯು ಚಿತ್ರ ಕೂಡ ಒಂದು!
ಈ ಹಿಂದೆ R ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಬ್ರಹ್ಮ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಬ್ರಹ್ಮ ಚಿತ್ರ 2014 ರಲ್ಲಿ ತೆರೆ ಕನ್ನಡ ಸೂಪರ್ ಹಿಟ್ ಕನ್ನಡ ಚಿತ್ರಗಳಲ್ಲಿ ಒಂದು. ಐ ಲವ್ ಯು ಚಿತ್ರದ ಪೋಸ್ಟರ್ ಗಳನ್ನೂ, ಟ್ರೇಲರ್ ಅನ್ನು, ಡೈಲಾಗ್ ಗಳನ್ನೂ ನೋಡಿದ್ರೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ A ಮತ್ತು ಉಪೇಂದ್ರ ಚಿತ್ರಗಳು ನೆನಪಾಗುತ್ತದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Previous articleಬಜಾರಲ್ಲಿ ಸಕತ್ ಸದ್ದು ಮಾಡುತ್ತಿದೆ Bazaar ಚಿತ್ರ! ಚಿತ್ರ ನೋಡಿ ಕನ್ನಡಿಗರು ಫುಲ್ ಖುಷ್! Exclusive Bazaar Review
Next article(video)ವೇದಿಕೆ ಮೇಲೆ ಹನುಮಂತ ಹಾಗು ಅವನ ತಂಗಿ ಹಾಡನ್ನು ಕೇಳಿದ್ರೆ ಕಣ್ಣೀರು ಬರುತ್ತೆ ಕಣ್ರೀ! ವಿಡಿಯೋ ವೈರಲ್