ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ ಪಡೆದುಕೊಂಡ ಅಲ್ಲು ಅರ್ಜುನ್, ಸೌತ್ ಇಂಡಿಯನ್ ಆಕ್ಟರ್ ಆಗಿ ಬನ್ನಿ….!

ಟಾಲಿವುಡ್ ನ ಖ್ಯಾತ ನಟರಲ್ಲಿ ಅಲ್ಲು ಅರ್ಜುನ್ ಸಹ ದೊಡ್ಡ ಕ್ರೇಜ್ ಹೊಂದಿರುವ ನಟರಾಗಿದ್ದಾರೆ. ಅದರಲ್ಲೂ ನಟ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಸಿನಿರಂಗದಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ರವರಿಗೆ ಇದೀಗ ಇಂಡಿಯನ್ ಆಫ್ ದಿ ಇಯರ್‍ ಅವಾರ್ಡ್ ದಕ್ಕಿಸಿಕೊಂಡಿದ್ದಾರೆ. ಇನ್ನೂ ಸೌತ್ ಇಂಡಿಯನ್ ಆಕ್ಟರ್‍ ಗಳಲ್ಲಿ ಈ ಅವಾರ್ಡ್ ಪಡೆದುಕೊಂಡ ಸ್ಟಾರ್‍ ಆಗಿದ್ದಾರೆ ಅಲ್ಲು ಅರ್ಜುನ್. ಇನ್ನೂ ಅಲ್ಲು ಅರ್ಜುನ್ ಅಭಿಮಾನಿಗಳೂ ಸಹ ಪುಲ್ ಖುಷಿಯಾಗಿದ್ದು, ಸೋಷಿಯಲ್ ಮಿಡಿಯಾ ಮೂಲಕ ಶುಭಾಷಯಗಳನ್ನು ಕೋರುತ್ತಿದ್ದಾರೆ.

ಸಿನಿರಂಗದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿರುವ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಪುಷ್ಪಾ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆದರು. ಈ ಸಿನೆಮಾದ ಬಳಿಕ ಅಲ್ಲು ಅರ್ಜುನ್ ವಿಶ್ವ ಮಟ್ಟದಲ್ಲಿ ಫೇಮ್ ಪಡೆದುಕೊಂಡರು. ಜೊತೆಗೆ ಕೇವಲ ತೆಲುಗು ರಂಗದಲ್ಲಿ ಮಾತ್ರವಲ್ಲೇ ಇಡೀ ದೇಶದಾದ್ಯಂತ ಅಭಿಮಾನಿಗಳನ್ನು ಗಳಿಸಿಕೊಂಡರು. ಕಳೆದ ಡಿಸೆಂಬರ್‍ ಮಾಹೆಯಲ್ಲಿ ಈ ಸಿನೆಮಾ ಬಿಡುಗಡೆಯಾಗಿದ್ದು, ತುಂಬಾನೆ ಕ್ರೇಜ್ ಪಡೆದುಕೊಂಡಿದೆ. ಇಂದಿಗೂ ಸಹ ಈ ಸಿನೆಮಾದ ಹಾಡುಗಳು, ಡೈಲಾಗ್ ಗಳು ಎಲ್ಲರ ಬಾಯಲ್ಲೇ ಇರುತ್ತವೆ. ಅನೇಕ ಅವಾರ್ಡ್‌ಗಳನ್ನು ಸಹ ಈ ಸಿನೆಮಾ ಪಡೆದುಕೊಂಡಿದೆ. ಪುಷ್ಪಾ ಸಿನೆಮಾದಲ್ಲಿನ ಅಲ್ಲು ಅರ್ಜುನ್ ಅಭಿನಯಕ್ಕೆ ಇಂದಿಗೂ ಸಹ ಎಲ್ಲರೂ ಪ್ರಶಂಸೆಗಳ ಸುರಿಮಳೆಗೈದಿದ್ದಾರೆ. ಸಿನೆಮಾದ ಮ್ಯೂಸಿಕ್ ಗಾಗಿ ಮಿರ್ಚಿ ಮ್ಯೂಸಿಕ್ ಅವಾರ್ಡ್, ಕೆಲವೊಂದು ವಿಭಾಗಗಳಲ್ಲಿ ಸೈಮಾ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದೆ. ಇದೀಗ ಅಲ್ಲು ಅರ್ಜುನ್ ಇಂಡಿಯನ್ ಆಫ್ ದಿ ಇಯರ್‍ ಅವಾರ್ಡ್ ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ದಕ್ಷಿಣದ ಒಬ್ಬ ನಟ ಈ ಅವಾರ್ಡ್ ಪಡೆದುಕೊಂಡಿದ್ದು, ಅದು ಅಲ್ಲು ಅರ್ಜುನ್ ರವರು.

ಇನ್ನೂ ಈ ಅವಾರ್ಡ್ ಅನ್ನು CNN-News18 ಸಂಸ್ಥೆ ನೀಡುವಂತಹ ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ ಅನ್ನು ಅಲ್ಲು ಅರ್ಜುನ್ ಪಡೆದುಕೊಂಡಿದ್ದಾರೆ. ಚಲನಚಿತ್ರ ಪರಿಶ್ರಮದಲ್ಲಿ ಸುಮಾರು 20 ವರ್ಷಗಳ ಬಳಿಕ ಸೌತ್ ಸಿನಿರಂಗದ ಒಬ್ಬ ನಟ ಈ ಅವಾರ್ಡ್‌ಗೆ ಪಾತ್ರರಾಗಿದ್ದಾರೆ. ಕಳೆದ ಬುಧವಾರ ದೆಹಲಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ರವರ ಕೈಯಿಂದ ಈ ಅವಾರ್ಡ್‌ ಅನ್ನು ಅಲ್ಲು ಅರ್ಜುನ್ ಸ್ವೀಕರಿಸಿದ್ದಾರೆ. ಇನ್ನೂ ಅವಾರ್ಡ್ ಸ್ವೀಕರಿಸಿ ಮಾತನಾಡಿದ ಅಲ್ಲು ಅರ್ಜುನ್ ಇಂಡಿಯನ್ ಸಿನೆಮಾ, ಇಂಡಿಯಾ ಕಭಿ ಝಕೇಗಾ ನಹಿ ಎಂದು ಡೈಲಾಗ್ ಹೊಡೆದರು. ಅಂದರೇ ಭಾರತೀಯ ಸಿನೆಮಾ, ಭಾರತದೇಶ ಎಂದಿಗೂ ತಗ್ಗೇದೆ ಲೇ ಎಂಬ ಡೈಲಾಗ್ ಹೊಡೆದಿದ್ದಾರೆ. ನಾನು ಸಿನಿರಂಗದಲ್ಲಿ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಅನೇಕ ಅವಾರ್ಡ್‌ಗಳನ್ನು ಸಹ ಪಡೆದುಕೊಂಡಿದ್ದೇನೆ. ಈ ಬಾರಿ ಇಂಡಿಯನ್ ಆಫ್ ದಿ ಇಯರ್‍ ಅವಾರ್ಡ್ ಪಡೆದುಕೊಂಡಿದ್ದು ತುಂಬಾ ಖುಷಿಯಾಗಿದೆ ಎಂದಿದ್ದಾರೆ.

ಇನ್ನೂ ಪುಷ್ಪಾ ಸಿನೆಮಾದ ಬಳಿಕ ಸಿನೆಮಾದಲ್ಲಿ ಪ್ರತಿಯೊಬ್ಬರು ತುಂಬಾನೆ ಫೇಮಸ್ ಆದರು. ಈ ಸಿನೆಮಾದಲ್ಲಿ ನಟಿಸಿದ ಅನೇಕರಿಗೆ ಸಾಲು ಸಾಲು ಅವಕಾಶಗಳೂ ಸಹ ಹರಿದು ಬರುತ್ತಿವೆ. ಇನ್ನೂ ಅಲ್ಲು ಅರ್ಜುನ್ ಈ ಅವಾರ್ಡ್ ಅನ್ನು ಕೋವಿಡ್ ಸಮಯದಲ್ಲಿ ಕೆಲಸ ಮಾಡಿದಂತಹ. ಫ್ರಂಟ್ ಲೈನ್ ವಾರಿಯರ್‍ ಗಳಾದ ವೈದ್ಯರು, ನರ್ಸ್‌ಗಳು, ಆರೋಗ್ಯ ಕಾರ್ಯಕರ್ತರೂ ಸೇರಿದಮತೆ ಅನೇಕರಿ ಈ ಅವಾರ್ಡ್ ಅನ್ನು ಅರ್ಪಿಸಿದ್ದಾರೆ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್.

Previous articleಮಹೇಶ್ ಬಾಬು ನ್ಯೂ ಆಲ್ಟ್ರಾ ಲುಕ್ಸ್, ವೈರಲ್ ಆಗುತ್ತಿವೆ ಪ್ರಿನ್ಸ್ ನ್ಯೂ ಲುಕ್ ಪೊಟೋಸ್….!
Next articleನಿನ್ನ ದೇಹದಲ್ಲಿ ಆ ಭಾಗ ದೊಡ್ಡದಾಗಿದೆ ಕಡಿಮೆ ಮಾಡಿಕೊ ಎಂದು ಹನ್ಸಿಕಾಗೆ ಸಲಹೆ ನೀಡಿದ್ದು ಅವರೇನಾ?