Film News

ಪವನ್ ಜೊತೆ ನಟಿಸುವುದು ನನ್ನ ಕನಸು ಎಂದ ಟಾಲಿವುಡ್ ನಟ!

ಹೈದರಾಬಾದ್: ದೇಶದ ನಾನಾ ಕಡೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಪವನ್ ಕಲ್ಯಾಣ್ ಸಹ ಒಬ್ಬರು. ಪ್ರೇಕ್ಷಕರು ಮಾತ್ರವಲ್ಲದೇ ಸಿನೆಮಾ ಕಲಾವಿದರು ಸಹ ಪವನ್ ಅಭಿಮಾನಿಗಳಾಗಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರೊಂದಿಗೆ ತೆರೆ ಹಂಚಿಕೊಳ್ಳುವ ಆಸೆಯನ್ನು ಈ ಪಾಪ್ಯುಲರ್ ಟಾಲಿವುಡ್ ನಟ ಹೊಂದಿದ್ದಾರಂತೆ.

ಹೌದು ಟಾಲಿವುಡ್ ನ ನಿತಿನ್ ಪವರ್ ಸ್ಟಾರ್ ಪವನ್ ಕಲ್ಯಾಣ್ ರವರೊಂದಿಗೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ ಜೊತೆಗೆ ಅದು ನನ್ನ ಕನಸು ಎಂದು ಸಹ ಹೇಳಿದ್ದಾರೆ. ಸುಮಾರು ೨೦ ವರ್ಷಗಳಿಂದ ಸಿನಿರಂಗದಲ್ಲಿ ಅನೇಕ ಚಿತ್ರಗಳ ಮೂಲಕ ರಂಜಿಸುತ್ತಿರುವ ನಿತಿನ್ ಪವನ್ ಕಲ್ಯಾಣ್ ರೊಂದಿಗೆ ತೆರೆ ಹಂಚಿಕೊಳ್ಳಬೇಕು. ಸುಮಾರು ವರ್ಷಗಳಿಂದ ಆ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ.

ಜೊತೆಗೆ ವಕೀಲ್ ಸಾಭ್ ಚಿತ್ರದ ಕುರಿತು ಮಾತನಾಡಿದ್ದು, ಮೂರು ವರ್ಷಗಳ ನಂತರ ನಮ್ಮ ಬಾಸ್ ಸಿನೆಮಾ ತೆರೆಗೆ ಬರುತ್ತಿದೆ. ಸಿನೆಮಾ ಸೂಪರ್ ಆಗಿರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಡ ಎಂದು ನಿತಿನ್ ತಿಳಿಸಿದ್ದಾರೆ.

ಇನ್ನೂ ನಿತಿನ್ ಮದುವೆ ಸಮಾರಂಭಕ್ಕೂ ಸಹ ಪವನ್ ಕಲ್ಯಾಣ್ ಭೇಟಿ ನೀಡಿ ದಂಪತಿಗೆ ಶುಭ ಹಾರೈಸಿದ್ದರು. ಚಿಕ್ಕಂದಿನಿಂದಲೂ ಪವನ್ ಕಲ್ಯಾಣ್ ರವರ ಕಟ್ಟಾ ಅಭಿಮಾನಿಯಂತೆ ನಿತಿನ್. ಸದ್ಯ ನಿತಿನ್ ನಾಯಕನಾಗಿ ನಟಿಸಿರುವ ಚೆಕ್ ಸಿನೆಮಾ ಫೆ.೨೬ ರಂದು ತೆರೆಗೆ ಬರಲಿದೆ.

Trending

To Top