Film News

ನನ್ನ ಮೇಲೆ ಆಸಿಡ್ ಧಾಳಿ ಸಹ ಆಗಬಹುದು, ಕಾಂಟ್ರವರ್ಸಿ ಕ್ವೀನ್ ಕಂಗನಾ ಶಾಕಿಂಗ್ ಕಾಮೆಂಟ್ಸ್.…!

ಒಂದಲ್ಲ ಒಂದು ವಿಚಾರದಿಂದ ಸದಾ ಸುದ್ದಿಯಾಗಿರುವ ನಟಿಯರಲ್ಲಿ ಕಂಗನಾ ರಾಣವತ್ ಸಹ ಒಬ್ಬರಾಗಿದ್ದಾರೆ. ಆಕೆಗೆ ಸಂಬಂಧವಿದ್ದರೂ, ಇಲ್ಲದೇ ಇದ್ದರೂ ಸಹ ಕೆಲವೊಂದು ವಿಚಾರಗಳ ಬಗ್ಗೆ ಹೇಳಿಕೆಗಳನ್ನು ಕೊಡುತ್ತಾ ವಿವಾದಗಳನ್ನು ಸೃಷ್ಟಿಸುತ್ತಾ ಸುದ್ದಿಯಾಗುತ್ತಿರುತ್ತಾರೆ. ಬಾಲಿವುಡ್ ಸಿನಿರಂಗದಲ್ಲಿ ಸದಾ ವಿವಾದಗಳ ಮೂಲಕವೇ ಪ್ರಚಲಿತದಲ್ಲಿರುವ ಕಂಗನಾ ಇದೀಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಆಕೆ ನೇರವಾಗಿ ಹೇಳುವಂತಹ ಗುಣವುಳ್ಳವರಾಗಿದ್ದಾರೆ.

ಬಾಲಿವುಡ್ ಸಿನಿರಂಗದಲ್ಲಿ ಖ್ಯಾತ ನಟಿಯಾಗಿ ಅನೇಕ ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ಆಕೆ ಸ್ಟಾರ್‍ ನಟರಿಂದ ದೊಡ್ಡ ದೊಡ್ಡ ರಾಜಕಾರಣಿಗಳನ್ನು ಸಹ ಟೀಕೆ ಮಾಡಿದ್ದಾರೆ. ಯಾವುದೇ ವಿಚಾರವಿರಲಿ ಕಡ್ಡಿ ಮುರಿದಂತೆ ಹೇಳುವ ಜೊತೆಗೆ ಅನೇಕ ವಿವಾದಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಪ್ರತಿಯೊಂದು ವಿಚಾರವನ್ನೂ ಸಹ ನೇರವಾಗಿ ಧೈರ್ಯವಾಗಿ ಹೇಳುವಂತಹ ಕಂಗನಾ ಸದಾ ಒಂದು ವಿಚಾರದಿಂದ ಭಯಬೀತರಾಗುತ್ತಿರುತ್ತಾರಂತೆ. ಇನ್ನೂ ಆ ವಿಚಾರ ಏನು, ಸ್ಟಾರ್‍ ನಟಿ, ಫೈರ್‍ ಬ್ರಾಂಡ್ ಎಂಬ ಖ್ಯಾತಿಯ ಕಂಗಾನರವರನ್ನು ಭಯಪಡಿಸುವಂತಹದ್ದಾದರೂ ಏನು ಎಂಬ ವಿಚಾರವನ್ನು ಆಕೆ ಸೋಷಿಯಲ್ ಮಿಡಿಯಾ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಹಾಟ್ ಟಾಪಿಕ್ ಆಗಿದೆ.

ಈಗಿನ ಸಮಾಜದಲ್ಲಿ ಒಬ್ಬ ಹುಡುಗಿ ತನ್ನ ಪ್ರೀತಿಗೆ ನೋ ಹೇಳಿದರೇ ಅವರ ಮೇಲೆ ಆಸಿಡ್ ಧಾಳಿಗಳು ನಡೆಯುತ್ತಿರುವುದನ್ನು ನಾವು ನೋಡಿದ್ದೇವೆ. ಇದೇ ಹಾದಿಯಲ್ಲೇ ಈ ಆಸಿಡ್ ಧಾಳಿಯ ಭೀತಿ ಸಹ ಕಂಗನಾಗೆ ಕಾಡುತ್ತಿದೆಯಂತೆ. ಈ ಬಗ್ಗೆ ಆಕೆ ಮಾತನಾಡುತ್ತಾ, ನನ್ನ ಸಹೋದರಿ ಮೇಲೆ ಆಸಿಡ್ ಧಾಳಿ ನಡೆದಿದ್ದು, ಆಕೆಗೆ 52 ಬಾರಿ ಸರ್ಜರಿ ಮಾಡಲಾಗಿದೆ. ಈ ಕಾರಣದಿಂದ ತನ್ನ ಸಹೋದರಿ ಶಾರೀರಕವಾಗಿಯೂ ಹಾಗೂ ಮಾನಸೀಕವಾಗಿಯೂ ಸಹ ತುಂಬಾ ನೊಂದಿದ್ದಾರೆ. ಈ ಸಂಘಟನೆ ನನ್ನನ್ನು ಸದಾ ಕಾಡುತ್ತಿರುತ್ತದೆ. ಈ ಕಾರಣದಿಂದಲೇ ನನ್ನ ಪಕ್ಕದಿಂದ ಯಾರಾದರೂ ಹೋದರೇ ಸಾಕು ನನ್ನ ಮೇಲೂ ಸಹ ಆಸಿಡ್ ಧಾಳಿ ಮಾಡುತ್ತಾರೇನೋ ಎಂಬ ಭಯ ನನನ್ನು ಕಾಡುತ್ತಲೇ ಇರುತ್ತದೆ. ನನ್ನ ಪಕ್ಕ ಯಾರಾದರೂ ಹೋದರೇ ನನ್ನ ಮುಖವನ್ನು ಸಹ ಮುಚ್ಚಿಕೊಳ್ಳುತ್ತೇನೆ ಎಂದಿದ್ದಾರೆ.

ಇನ್ನೂ ಸದ್ಯ ಕಂಗನಾ ಮಾಡಿದ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಯಾವುದೇ ವಿಚಾರದಲ್ಲಿ ಕಂಗನಾ ನೇರವಾಗಿಯೇ ಮಾತನಾಡುತ್ತಿರುತ್ತಾರೆ. ಇದೀಗ ಆಕೆ ಆಸಿಡ್ ಧಾಳಿಯ ಬಗ್ಗೆ ಮಾತನಾಡಿದ್ದು, ಈ ಹೇಳಿಕೆಗಳೂ ಸಹ ವೈರಲ್ ಆಗುತ್ತಿರುತ್ತವೆ. ಇನ್ನೂ ಕಂಗನಾ ಚಂದ್ರಮುಖಿ 2 ಸಿನೆಮಾದ ಮೂಲಕ ಮತ್ತೊಮ್ಮೆ ಸೌತ್ ಸಿನಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

Trending

To Top