Film News

ಫೈಟರ್ ಸಿನೆಮಾದಲ್ಲಿ ಒಂದಾಗಲಿದ್ದಾರೆ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್

ಮುಂಬೈ: ಬಾಲಿವುಡ್ ನ ಸ್ಟಾರ್ ನಟರಾದ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ರವರ ಕಾಂಬಿನೇಷನ್ ನಲ್ಲಿ ಹೊಸ ಸಿನೆಮಾ ಮೂಡಿಬರುತ್ತಿದ್ದು, ಆ ಸಿನೆಮಾಗೆ ಫೈಟರ್ ಎಂದು ಹೆಸರಿಡಲಾಗಿದೆ.

ಮೊಟ್ಟಮೊದಲ ಬಾರಿಗೆ ನಟ ಹೃತಿಕ್ ಹಾಗೂ ದೀಪಿಕಾ ಒಟ್ಟಿಗೆ ನಟಿಸಲು ಮುಂದಾಗಿದ್ದು, ಈ ಚಿತ್ರದ ಮೇಳೆ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿದೆ. ಇಂದು ಹೃತಿಕ್ ರವರ ಹುಟ್ಟುಹಬ್ಬವಾಗಿದ್ದು, ಇವರಿಬ್ಬರ ಕಾಂಬಿನೇಷನ್ ನಲ್ಲಿ ಹೊರಬರಲಿರುವ ಚಿತ್ರದ ಟೈಟಲ್ ಸಹ ಘೋಷಣೆ ಮಾಡಲಾಗಿದೆ. ಬಾಲಿವುಡ್ ನ ಸ್ಟಾರ್ ನಿರ್ದೇಶಕ ಸಿದ್ದಾರ್ಥ್ ಆನಂದ್ ರವರು ಈ ಚಿತ್ರವನ್ನು ನಿರ್ದೇಶಿಸಲಿದ್ದು, ಈ ಹಿಂದೆ ಹೃತಿಕ್ ರವರ ವಾರ್ ಹಾಗೂ ಬ್ಯಾಂಗ್ ಬ್ಯಾಂಗ್ ಚಿತ್ರಗಳನ್ನು ಸಹ ಇವರೇ ನಿರ್ದೇಶಿಸಿದ್ದಾರೆ.

ಪ್ರಸ್ತುತ ದೀಪಿಕಾ ಹಾಗೂ ಹೃತಿಕ್ ಬೇರೆ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದು, ಆ ಸಿನೆಮಾಗಳ ನಂತರ ಫೈಟರ್ ಸಿನೆಮಾದ ಶೂಟಿಂಗ್ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 2022ನೇ ವರ್ಷದಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಇನ್ನೂ ಹೃತಿಕ್ ರೋಷನ್ ಈ ಚಿತ್ರದಲ್ಲಿ ಜೆಟ್ ಪೈಲೆಟ್ ಪಾತ್ರದಲ್ಲಿ ನಟಿಸಲಿದ್ದಾರಂತೆ. ಮತ್ತೊಂದು ವಿಚಾರ ಈ ಚಿತ್ರದ ಮೂಲಕ ಮೊದಲ ಬಾರಿಗೆ ಸಿದ್ದಾರ್ಥ್ ಆನಂದ್ ನಿರ್ಮಾಪಕರಾಗುತ್ತಿದ್ದಾರಂತೆ.

Trending

To Top