ಸೆಂಟಿಮೆಂಟ್ ಡೈಲಾಗ್ ಹೊಡೆದ ಗೋವಾ ಬ್ಯೂಟಿ ಇಲಿಯಾನಾ, 15 ಮಿಲಿಯನ್ ಫಾಲೋವರ್ಸ್ ಹೊಂದಿದ ನಟಿ…!

ಟಾಲಿವುಡ್ ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೆ ಸ್ಟಾರ್‍ ಡಮ್ ದಕ್ಕಿಸಿಕೊಂಡ ನಟಿಯರಲ್ಲಿ ಇಲಿಯಾನಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ದೇವದಾಸ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಅನೇಕ ಹಿಟ್ ಸಿನೆಮಾಗಳನ್ನು ನೀಡಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಸಾಕಷ್ಟು ಹಿಟ್ ಸಿನೆಮಾಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡು ದೇಶವ್ಯಾಪಿ ಖ್ಯಾತಿ ಗಳಿಸಿಕೊಂಡರು.  ಸೋಷಿಯಲ್ ಮಿಡೀಯಾದಲ್ಲೂ ಸಹ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ಇಲಿಯಾನಾ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಸಿನೆಮಾಗಳಿಂದ ದೂರವುಳಿದರೂ ಸಹ ಆಕೆ ಮಾತ್ರ ಸೋಷಿಯಲ್ ಮಿಡಿಯಾ ಮೂಲಕ ತನ್ನ ಅಭಿಮಾನಿಗಳೊಂದಿಗೆ ಟಚ್ ನಲ್ಲೇ ಇದ್ದಾರೆ. ಸದಾ ಹಾಟ್ ಪೊಟೋಸ್ ಹಂಚಿಕೊಳ್ಳುವ ಮೂಲಕ ಆಕೆ ತನ್ನ ಫಾಲೋಯಿಂಗ್ ಬೆಳೆಸಿಕೊಂಡಿದ್ದಾರೆ. ಪ್ರತಿನಿತ್ಯ ಒಂದಲ್ಲ ಒಂದು ಪೋಸ್ಟ್ ಹಂಚಿಕೊಳ್ಳುತ್ತಾ ಫ್ಯಾನ್ ಗಳನ್ನು ಖುಷಿಪಡಿಸುತ್ತಿರುತ್ತಾರೆ. ಅದರಲ್ಲೂ ಆಕೆ ಸದಾ ಬಿಕಿನಿಯಲ್ಲಿ ನೀಡುವ ಪೋಸ್ ಗಳಿಗೆ ಪಡ್ಡೆ ಹುಡುಗರು ಫಿದಾ ಆಗುತ್ತಿರುತ್ತಾರೆ. ಸೌಂದರ್ಯ ಪ್ರದರ್ಶನದಲ್ಲಿ ಆಕೆ ಮಾತ್ರ ಬೇರೆ ಲೆವೆಲ್ ನಲ್ಲಿಯೇ ಪ್ರದರ್ಶಿಸುತ್ತಾರೆ ಎನ್ನಲಾಗುತ್ತದೆ. ಸದ್ಯ ಇಲಿಯಾನಾ ತನ್ನ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಹೊಸ ದಾಖಲೆಯನ್ನು ಮಾಡಿದ್ದಾರೆ. ಆಕೆ ಬರೊಬ್ಬರಿ 15 ಮಿಲಿಯನ್ ಫಾಲೋವರ್ಸ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಈ ಸಂತಸದ ವಿಚಾರವನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಸೆಂಟಿಮೆಂಟ್ ಡೈಲಾಗ್ ಸಹ ಹೊಡೆದಿದ್ದು, ವಿಶೇಷವಾಗಿದೆ ಎನ್ನಲಾಗಿದೆ.

ನಟಿ ಇಲಿಯಾನಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೊಬ್ಬರಿ 15 ಮಿಲಿಯನ್ಸ್ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಸಂತಸದ ವಿಚಾರವನ್ನು ಆಕೆ ಹಂಚಿಕೊಳ್ಳುತ್ತಾ ಎಮೋಷನಲ್ ಪೋಸ್ಟ್ ಸಹ ಹಾಕಿದ್ದಾರೆ. ಸೆಲೆಬ್ರೇಟ್ ಮಾಡಿಕೊಳ್ಳಲು ನನ್ನ ಬಳಿ ಬಲೂನ್ ಗಳಿಲ್ಲ. ಬೇರೆನೂ ಇಲ್ಲ. ಆದರೂ ಐ ಲವ್ ಯೂ ಗಾಯ್ಸ್, ನನ್ನನ್ನು ಫಾಲೋ ಮಾಡುತ್ತಿರುವ 15 ಮಿಲಿಯನ್ ಮಂದಿಗೂ ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾರೆ. ಈ ಕುರಿತು ಆಕೆ ಹಂಚಿಕೊಂಡ ವಿಡಿಯೋ ಇದೀಗ ವೈರಲ್ ಆಗುತ್ತಿದೆ.  ಇನ್ನೂ ಆಕೆಯ ಅಭಿಮಾನಿಗಳೂ ಸಹ ಶುಭಾಷಯಗಳನ್ನು ಕೋರುತ್ತಿದ್ದಾರೆ. ಜೊತೆಗೆ ಆಕೆಯನ್ನು ಮತ್ತೆ ದೊಡ್ಡ ಪರದೆಯ ಮೇಲೆ ಕಾಣಲು ಉತ್ಸುಕರಾಗಿದ್ದಾರೆ.

ಇನ್ನೂ ಇಲಿಯಾನಾ ಗೆ ಬಿಗ್ ಬ್ರೇಕ್ ಕೊಟ್ಟಂತಹ ಸಿನೆಮಾ ಮಹೇಶ್ ಬಾಬು ಅಭಿನಯದ ಪೋಕಿರಿ. ಈ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕೆಲಕ್ಷನ್ ಮಾಡಿತ್ತು. ಮತ್ತೊಮ್ಮೆ ಈ ಸಿನೆಮಾ ಥಿಯೇಟರ್‍ ಗಳಲ್ಲಿ ಮಹೇಶ್ ಬಾಬು ಹುಟ್ಟುಹಬ್ಬದಂದು ಬಿಡುಗಡೆಯಾಗಲಿದೆ. ಈ ಸಿನೆಮಾದಲ್ಲಿ ಆಕೆಯ ಅಭಿನಯಕ್ಕೆ ಹಾಗೂ ಸೌಂದರ್ಯ ಪ್ರದರ್ಶನಕ್ಕೆ ಅನೇಕ ಮಂದಿ ಆಕೆಗೆ ಫ್ಯಾನ್ಸ್ ಆಗಿಬಿಟ್ಟರು. ಇದೀಗ ಮತ್ತೊಮ್ಮೆ ಈ ಸಿನೆಮಾ ಥಿಯೇಟರ್‍ ಗಳಲ್ಲಿ ಬಿಡುಗಡೆಯಾಗುತ್ತಿದ್ದು, ಯಾವ ರೀತಿಯ ರೆಸ್ಪಾನ್ಸ್ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Previous articleಶರ್ಟ್ ತೆಗೆದು ಹಾಟ್ ಪೋಸ್ ಕೊಟ್ಟ ಸಮೀರಾ ರೆಡ್ಡಿ, ಬಾಡಿ ಶೇಮಿಂಗ್ ಬಗ್ಗೆ ಸಹ ಆಕೆ ಏನು ಹೇಳಿದ್ರು ಗೊತ್ತಾ?
Next articleತನ್ನ ಎದೆಯ ಸೌಂದರ್ಯವನ್ನು ಡೀಪ್ ಆಗಿ ಪ್ರದರ್ಶನ ಮಾಡಿದ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್…!