ನಂದಮೂರಿ ಬಾಲಕೃಷ್ಣ ರವರ NBK107 ಸಿನೆಮಾದಲ್ಲಿ ಹಾಟ್ ಬ್ಯೂಟಿಯೊಂದಿಗೆ ಸ್ಪೇಷಲ್ ಸಾಂಗ್…!

ಟಾಲಿವುಡ್ ನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ರವರ ಮುಂದಿನ ಸಿನೆಮಾದಲ್ಲಿ ಹಾಟ್ ಬ್ಯೂಟಿಯೊಬ್ಬರ ಸ್ಪೇಷಲ್ ಸಾಂಗ್ ಇರಲಿದೆ ಎಂದು ತಿಳಿದು ಬಂದಿದೆ. ಬಾಲಕೃಷ್ಣ ರವರ ಎನ್.ಬಿ.ಕೆ 107 ಸಿನೆಮಾದಲ್ಲಿ ಹಾಟ್ ನಟಿ ಡಿಂಪುಲ್ ಹಯಾತಿ ಐಟಂ ಸಾಂಗ್ ನಲ್ಲಿ ಬಾಲಕೃಷ್ಣ ಜೊತೆ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗುತ್ತಿದೆ.

ಸದ್ಯ ಬಾಲಕೃಷ್ಣ ರವರು ಎನ್.ಬಿ.ಕೆ 107 ಸಿನೆಮಾವನ್ನು ಯುವ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಈಗಾಗಲೇ ಈ ಸಿನೆಮಾ ಪೋಸ್ಟರ್‍ ಗಳ ಮೂಲಕವೇ ಹೆಚ್ಚು ಹೈಪ್ ಕ್ರಿಯೇಟ್ ಮಾಡಿದೆ. ಅಖಂಡ ಬ್ಲಾಕ್ ಬಸ್ಟರ್‍ ಹಿಟ್ ಆದ ಮೇಲೆ ಈ ಸಿನೆಮಾ ಮೇಲೆ ಎಲ್ಲರೂ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಈ ಸಿನೆಮಾದಲ್ಲಿ ಮತಷ್ಟು ಹೈಪ್ ಕ್ರಿಯೇಟ್ ಮಾಡಲು ಐಟಂ ಸಾಂಗ್ ಒಂದನ್ನು ಪ್ಲಾನ್ ಮಾಡಿದ್ದಾರೆ. ಈ ಸ್ಪೇಷಲ್ ಸಾಂಗ್ ನಲ್ಲಿ ಹೆಜ್ಜೆ ಹಾಕಲು ನಟಿ ಡಿಂಪುಲ್ ಹಯಾತಿ ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ.

ನಟಿ ಹಯಾತಿ ಮಾಸ್ ಮಹಾರಾಜ ರವಿತೇಜ ಅಭಿನಯದ ಖಿಲಾಡಿ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಸಿನೆಮಾದಲ್ಲಿ ಅವರ ಹಾಟ್ ಲುಕ್ ಎಲ್ಲರನ್ನೂ ಆಕರ್ಷಣೆ ಮಾಡಿತ್ತು. ಆದರೆ ಈ ಸಿನೆಮಾ ಅಂದುಕೊಂಡಷ್ಟು ಹಿಟ್ ಆಗಲಿಲ್ಲ. ಇದೀಗ ಬಾಲಕೃಷ್ಣ ರವರ ಎನ್.ಬಿ.ಕೆ 107 ಸಿನೆಮಾದಲ್ಲಿ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕಲು ನಿರ್ದೇಶಕ ನಟಿಯನ್ನು ಸಂಪರ್ಕ ಮಾಡಿದ್ದಾರೆ ಎನ್ನಲಾಗಿದೆ. ಆಕೆ ಒಪ್ಪಿಗೆ ನೀದಿದ್ದು ಐಟಂ ಸಾಂಗ್ ನ ಶೂಟಿಂಗ್ ಕೆಲಸಗಳು ಪ್ರಾರಂಭವಾಗಿದೆಯಂತೆ. ಇನ್ನೂ ಹೈದರಾಬಾದಿನ್ ರಾಮೋಜಿ ಫಿಲಂ ಸಿಟಿಯಲ್ಲಿ ಈ ಹಾಡಿನ ಶೂಟಿಂಗ್ ಕೆಲಸಗಳು ನಡೆಯುತ್ತಿವೆಯಂತೆ. ಸಾಂಗ್ ಚಿತ್ರೀಕರಣಕ್ಕಾಗಿ ಸ್ಪೇಷಲ್ ಸೆಟ್ ಸಹ ಹಾಕಲಾಗಿದೆಯಂತೆ. ಶೀಘ್ರದಲ್ಲೇ ಈ ಹಾಡಿಗೆ ಸಂಬಂಧಿಸಿದ ಅಪ್ಡೇಟ್ ಸಹ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಸಿನೆಮಾದಲ್ಲಿ ಈ ಐಟಂ ಸಾಂಗ್ ವಿಶೇಷವಾಗಿರಲಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಬಾಲಯ್ಯ ನೊಂದಿಗೆ ಶೃತಿ ಹಾಸನ್ ನಾಯಕಿಯಾಗಿ ನಟಿಸಲಿದ್ದಾರೆ. ಜೊತೆಗೆ ಸ್ಯಾಂಡಲ್ ವುಡ್ ಹಿರೋ ದುನಿಯಾ ವಿಜಯ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ವರಲಕ್ಷ್ಮೀ ಶರತ್ ಕುಮಾರ್‍ ರವರು ಸಹ ಕಾಣಿಸಿಕೊಳ್ಳಿದ್ದಾರೆ. ಸಿನೆಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದಾರೆ.

Previous articleಬಿಕಿನಿಯಲ್ಲಿ ದರ್ಶನ ಕೊಟ್ಟ ಕಿರಿಕ್ ಹುಡುಗಿ ಸಂಯುಕ್ತಾ.. ಅಭಿಮಾನಿಗಳು ಫಿದಾ… ವೈರಲ್ ಆಯ್ತು ಪೊಟೋಸ್..
Next articleಸೌಂದರ್ಯ ಪ್ರದರ್ಶನದಲ್ಲಿ ತಾನೂ ಕಡಿಮೆಯಿಲ್ಲ ಎಂದು ಹಾಟ್ ಪೋಸ್ ಕೊಟ್ಟ ಆಂಕರ್…