ರಾಮ್ ಚರಣ್ ಜೊತೆ ಡೇಟಿಂಗ್ ಮಾಡಬೇಕು ಎಂದು ಹಾಟ್ ಬ್ಯೂಟಿ ಅನ್ವೇಷಿ…!

ಟಾಲಿವುಡ್ ನಲ್ಲಿ ದೊಡ್ಡ ಕ್ರೇಜ್ ಹೊಂದಿದ ನಟರಲ್ಲಿ ಮೆಗಾ ಫ್ಯಾಮಿಲಿಯ ರಾಮ್ ಚರಣ್ ತೇಜ್ ಸಹ ಒಬ್ಬರಾಗಿದ್ದಾರೆ. ಸ್ಟಾರ್‍ ಕಿಡ್ ಆಗಿ ಸಿನಿರಂಗಕ್ಕೆ ಪರಿಚಯವಾದ ಈತ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟರಾದರು. ಸಾಲು ಸಾಲು ಹಿಟ್ ಸಿನೆಮಾಗಳಲ್ಲಿ ಕಾಣಿಸಿಕೊಂಡರು. ಮೆಗಾ ಕುಟುಂಬದಿಂದ ಬಂದ ಕಾರಣಕ್ಕೆ ಈತ ದೊಡ್ಡ ಫಾಲೊಯಿಂಗ್ ದಕ್ಕಿಸಿಕೊಂಡರು. ಸ್ಟಾರ್‍ ಕಿಡ್ ಎಂದು ಮಾತ್ರವಲ್ಲದೇ ಆತ ತನ್ನ ಅಭಿನಯದಿಂದಲೇ ಹೆಚ್ಚು ಫೇಮ್ ದಕ್ಕಿಸಿಕೊಂಡ ಎನ್ನಬಹುದಾಗಿದೆ. ಈಗಾಗಲೇ ರಾಮ್ ಚರಣ್ ಉಪಾಸನಾ ಜೊತೆ ವೈವಾಹಿಕ ಜೀವನ ಸಾಗಿಸುತ್ತಿದ್ದಾರೆ.

ನಟ ರಾಮ್ ಚರಣ್ ಆರ್‍.ಆರ್‍.ಆರ್‍ ಸಿನೆಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್‍ ಆಗಿ ಮುನ್ನುಗ್ಗುತ್ತಿದ್ದಾರೆ. ಜೊತೆಗೆ ನಾರ್ತ್ ಸಿನಿರಂಗದಲ್ಲಿ ರಾಮ್ ಚರಣ್ ಗೆ ಲೇಡಿಸ್ ಫಾಲೋಯಿಂಗ್ ಸಹ ತುಂಬಾನೆ ಹೆಚ್ಚಾಗಿದೆ. ಸದ್ಯ ಖ್ಯಾತ ನಿರ್ದೇಶಕ ಶಂಕರ್‍ ಹಾಗೂ ರಾಮ್ ಚರಣ್ ಕಾಂಬಿನೇಷನ್ ನಲ್ಲಿ ಬಿಗ್ ಬಜೆಟ್ ಸಿನೆಮಾ RC15 ಹೆಸರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಇತ್ತೀಚಿಗೆ ಪಂಜಾಬ್ ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಅಲ್ಲಿ ರಾಮ್ ಚರಣ್ ರವರನ್ನು ಅಲ್ಲಿನ ಲೇಡಿ ಫ್ಯಾನ್ಸ್ ಸುತ್ತುವರೆದಿದ್ದರು. ರಾಮ್ ಚರಣ್ ರವರ ಫಿಜಿಕ್ ಹಾಗೂ ಹಾಟ್ ಲುಕ್ಸ್ ನೊಂದಿಗೆ ಎಲ್ಲರನ್ನೂ ಮಾಯೆ ಮಾಡಿದ್ದಾರೆ ಎನ್ನಬಹುದಾಗಿದೆ. ಇದೀಗ ಹಾಟ್ ನಟಿಯೊಬ್ಬರು ರಾಮ್ ಚರಣ್ ಜೊತೆಗೆ ಡೇಟಿಂಗ್ ಮಾಡಬೇಕು ಎಂದು ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ನಟ ರಾಮ್ ಚರಣ್ ಜೊತೆ ಡೇಟಿಂಗ್ ಮಾಡಬೇಕೆಂದು ಆಸೆ ಪಟ್ಟಿರೋದು ಹಾಟ್ ನಟಿ ಅನ್ವೇಷಿ ಜೈನ್. ಟಾಲಿವುಡ್ ನಲ್ಲಿ ಮಾಸ್ ಮಹಾರಾಜ ರವಿತೇಜ ಅಭಿನಯದ ರಾಮಾರಾವು ಆನ್ ಡ್ಯೂಟಿ ಎಂಬ ಸಿನೆಮಾದಲ್ಲಿ ನಟಿಸಿದ್ದ ಅನ್ವೇಷಿ ಜೈನ್ ರಾಮ್ ಚರಣ್ ಜೊತೆ ಡೇಟಿಂಗ್ ಮಾಡಬೇಕೆಂದು ಹೇಳಿದ್ದಾರೆ. ರಾಮಾರಾವು ಆನ್ ಡ್ಯೂಟಿ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳು ಜೋರಾಗಿಯೇ ನಡೆಯುತ್ತಿದೆ. ಇತ್ತೀಚಿಗೆ ಆಕೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲೇ ಅನ್ವೇಷಿ ರಾಮ್ ಚರಣ್ ಜೊತೆ ಡೇಟಿಂಗ್ ಮಾಡುವ ಬಯಕೆಯನ್ನು ಹೊರಹಾಕಿದ್ದಾರೆ.

ಸಂದರ್ಶನದಲ್ಲಿ ಆಂಕರ್‍ ಅನ್ವೇಷಿಯನ್ನು ರಾಮ್ ಚರಣ್ ರವರ ಬಗ್ಗೆ ಮಾತನಾಡಿದ್ದಾರೆ.  ಈ ವೇಳೆ ಅನ್ವೇಷಿ ಚರಣ್ ಜೊತೆ ಡೇಟಿಂಗ್ ಮಾಡಲು ತುಂಬಾ ಆಸೆ ಹೊಂದಿದ್ದೇನೆ ಎಂದು ತಮ್ಮ ಮನಸ್ಸಲ್ಲಿನ ಬಯಕೆಯನ್ನು ಹೊರಹಾಕಿದ್ದಾರೆ. ಸದ್ಯ ಆಕೆಯ ಈ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಶರತ್ ಮಂಡವ ಹಾಗೂ ರವಿತೇಜ ಕಾಂಬಿನೇಷನ್ ನಲ್ಲಿ ಮೂಡಿಬಂದ ರಾಮರಾವು ಆನ್ ಡ್ಯೂಟಿ ಎಂಬ ಸಿನೆಮಾದಲ್ಲಿ ಅನ್ವೇಷಿ ಜೈನ್ ಸ್ಪೇಷಲ್ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜು.29 ರಂದು ಈ ಸಿನೆಮಾ ಅದ್ದೂರಿಯಾಗಿ ತೆರೆಗೆ ಬರಲಿದೆ.

Previous articleರಣವೀರ್ ಬೆತ್ತಲೆ ಅವತಾರಕ್ಕೆ ಸುಸ್ತಾದ ಜನತೆ, ಬಟ್ಟೆ ದಾನ ಮಾಡಿದ್ರು, ಪೊಟೋ ವೈರಲ್…!
Next articleಪವನ್ ಕಲ್ಯಾಣ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ಕೊಟ್ಟ ಸಂಯುಕ್ತಾ ಮಿನನ್…!