ಆಂಕರ್ ಆಗಿ, ನಟಿಯಾಗಿ ಕ್ರೇಜ್ ಪಡೆದುಕೊಂಡ ಅನಸೂಯ ಆ ಸಿನೆಮಾದಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ…!

ನಟಿ ಅನಸೂಯ ಭಾರಧ್ವಜ್ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಸೋಷಿಯಲ್ ಮಿಡಿಯಾದ ಮೂಲಕ ಗ್ಲಾಮರಸ್ ಧಾಳಿಯನ್ನು ಮಾಡುತ್ತಿದ್ದಾರೆ. ಜಬರ್ದಸ್ತ್ ಕಾಮಿಡಿ ಶೋ ಮೂಲಕ ಪಾಪ್ಯುಲರ್‍ ಆದ ಅನಸೂಯ ಸಿನೆಮಾಗಳಲ್ಲೂ ಸಹ ಪುಲ್ ಬ್ಯುಸಿಯಾಗಿದ್ದಾರೆ. ಆಕೆಗೆ ತುಂಬಾ ಕ್ರೇಜ್ ತಂದುಕೊಟ್ಟ ಜಬರ್ದಸ್ತ್ ಶೋ ನಿಂದ ಇತ್ತೀಚಿಗಷ್ಟೆ ದೂರವಾದರು. ಇದೀಗ ಆಕೆ ಪುಲ್ ಪೋಕಸ್ ಸಿನೆಮಾಗಳ ಮೇಲೇಯೇ ಇಟ್ಟಿದ್ದಾರೆ. ಇದೀಗ ಆಕೆ ಸಿನೆಮಾ ಒಂದರಲ್ಲಿ ಐಟಂ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ.

ಕಿರುತೆರೆಯಲ್ಲಿ ಆಂಕರ್‍ ಆಗಿ ಕೆರಿಯರ್‍ ಸಾಗಿಸಿದ ಅನಸೂಯ ಸದ್ಯ ಸಿನೆಮಾಗಳ ಮೇಲೆ ಪೋಕಸ್ ಇಟ್ಟಿದ್ದಾರೆ. ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಾ ಮತಷ್ಟು ಆಫರ್‍ ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನೂ ಆಕೆಗೆ ಬಿಗ್ ಬ್ರೇಕ್ ಕೊಟ್ಟಿದ್ದು ಮಾತ್ರ ಪುಷ್ಪಾ ಎಂದು ಹೇಳಬಹುದಾಗಿದೆ, ಸದ್ಯ ಆಕೆ ಪುಷ್ಪಾ-2 ಸಿನೆಮಾದಲ್ಲಿ ಬ್ಯುಸಿಯಾಗಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್‍ ರವರ ರಂಗಸ್ಥಳಂ ಸಿನೆಮಾದಲ್ಲೂ ಸಹ ಅನಸೂಯ ನಟಿಸಿದ್ದರು. ಈ ಸಿನೆಮಾದಲ್ಲಿ ರಂಗಮತ್ತ ಎಂಬ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಸಿನೆಮಾದ ಬಳಿಕ ಆಕೆ ಸುಕುಮಾರ್‍ ನಿರ್ದೇಶನದಲ್ಲಿ ಮೂಡಿಬಂದ ಪುಷ್ಪಾ ಸಿನೆಮಾದಲ್ಲಿ ಸಹ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡರು. ಇದೀಗ ಸಿನೆಮಾ ಒಂದರಲ್ಲಿ ನಟಿ ಅನಸೂಯ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ನಟಿ ಅನಸೂಯ ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರಂತೆ.  ಅನೇಕ ಸಿನೆಮಾ ರೆಕಾರ್ಡ್‌ಗಳನ್ನು ಮುರಿದಂತಹ ಪುಷ್ಪಾ ಸಿನೆಮಾದ ಸೀಕ್ವೇಲ್ ಮೇಲೆ ತುಂಬಾ ನಿರೀಕ್ಷೆ ಹುಟ್ಟಿದೆ. ಈಗಾಗಲೇ ಈ ಸಿನೆಮಾ ಶೂಟಿಂಗ್ ಸಹ ಶುರುವಾಗಿದೆ. ಪುಷ್ಪಾ-1 ರಲ್ಲಿ ಅನಸೂಯ ನೆಗಟೀವ್ ರೋಲ್ ಪೋಷಿಸಿದ್ದರು. ಸುನೀಲ್ ಪತ್ನಿಯಾಗಿ ಕಾಣಿಸಿಕೊಂಡರು. ಇದೀಗ ಅನಸೂಯ ಬಗ್ಗೆ ಮತ್ತೊಂದು ರೂಮರ್‍ ಕೇಳಿಬರುತ್ತಿದೆ. ಪುಷ್ಪಾ-2 ಸಿನೆಮಾ ಘೋಷಣೆಯಾದಾಗಿನಿಂದ ಸಿನೆಮಾದಲ್ಲಿ ಆ ನಟರಿರುತ್ತಾರೆ, ನಟಿಯರಿರುತ್ತಾರೆ ಎಂಬೆಲ್ಲಾ ರೂಮರ್‍ ಗಳು ಕೇಳಿಬಂದವು. ಇದೀಗ ಅನಸೂಯ ಪುಷ್ಪಾ-2 ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕುಣಿಯಲಿದ್ದಾರೆ ಎಂಬ ರೂಮರ್‍ ಗಳು ಹರಿದಾಡುತ್ತಿವೆ.

ಪುಷ್ಪಾ-1 ಸಿನೆಮಾದಲ್ಲಿ ಹೂ ಅಂಟವಾ ಮಾವ ಎಂಬ ಹಾಡು ತುಂಬಾನೆ ಸದ್ದು ಮಾಡಿತ್ತು. ಈ ಹಾಡಿನಲ್ಲಿ ಸಮಂತಾ ಭರ್ಜರಿಯಾಗಿ ನೃತ್ಯ ಮಾಡಿದ್ದರು. ಇಡೀ ಸಿನೆಮಾಗೆ ಈ ಹಾಡು ತುಂಬಾನೆ ಹೈಲೈಟ್ ಆಗಿದೆ ಎಂದು ಹೇಳಬಹುದಾಗಿದೆ. ಅನೇಕ ಸೆಲೆಬ್ರೆಟಿಗಳೂ ಸಹ ಈ ಹಾಡಿಗೆ ಕುಣಿದಿದ್ದರು. ಇದೀಗ ಪುಷ್ಪಾ-2 ಸಿನೆಮಾದಲ್ಲೂ ಸಹ ಅದೇ ಮಾದರಿಯಲ್ಲಿ ಸ್ಪೇಷಲ್ ಸಾಂಗ್ ಇಡಲು ಚಿತ್ರತಂಡ ಪ್ಲಾನ್ ಮಾಡಿದೆ. ಇದೀಗ ಈ ಹಾಡಿನಲ್ಲಿ ನಟಿ ಅನಸೂಯ ರವರನ್ನು ಆಯ್ಕೆ ಮಾಡಲಾಗಿದೆ ಎಂಬ ರೂಮರ್‍ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಸುದ್ದಿ ಮಾತ್ರ ಭಾರಿ ಹರಿದಾಡುತ್ತಿದೆ.

Previous articleಅಡಿವಿ ಶೇಷ್ ಅಕ್ಕಿನೇನಿ ಫ್ಯಾಮಿಲಿಯೊಂದಿಗೆ ಕ್ರಿಸ್ ಮಸ್ ಸೆಲಬ್ರೇಷನ್ಸ್, ಆಕೆಯೊಂದಿಗೆ ರಿಲೇಷನ್ ಶಿಪ್ ಎಂಬ ರೂಮರ್ ಶುರು…!
Next articleಹಾಟ್ ಲಿಪ್ಸ್ ನೊಂದಿಗೆ ಯುವಕರ ನಿದ್ದೆ ಕದ್ದ ಹಾಟ್ ಬ್ಯೂಟಿ ಹೆಬ್ಬಾ ಪಟೇಲ್…!