Film News

ವಿಭಿನ್ನ ಶೈಲಿಯಲ್ಲಿ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಪ್ರೊಮೋಷನ್!

ಬೆಂಗಳೂರು: ಯವ ಚಿತ್ರತಂಡವೊಂದರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಪ್ರೊಮೋಷನ್ ವಿಭಿನ್ನ ಶೈಲಿಯಲ್ಲಿ ಬಿಡುಗಡೆ ಮಾಡಿದ್ದು, ಇದಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‍ಸ್ ಬೆರಗಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸಿನೆಮಾ ತೆಗೆಯುವುದೇ ಕಷ್ಟದ ಕೆಲಸ ಅದರಲ್ಲೂ ಕೊರೋನಾ ಸಂಕಷ್ಟದ ನಡುವೆ ಅನೇಕ ಚಿತ್ರಗಳು ಅರ್ಧದಲ್ಲೇ ನಿಂತಿವೆ. ಇದೀಗ ಯುವ ನಿರ್ದೇಶಕ ನಿತಿನ್ ಕೃಷ್ಣಮೂರ್ತಿ ನಿರ್ದೇಶನದಲ್ಲಿ ಮೂಡಿಬಂದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಎಂಬ ಚಿತ್ರವನ್ನು ನಿರ್ದೇಶನ ಮಾಡಿದ್ದು, ಪ್ರಮೊಷನ್ ಮೂಲಕವೇ ಭಾರಿ ಸದ್ದು ಮಾಡುತ್ತಿದೆ. ಈ ಹಿಂದೆ ಈ ಚಿತ್ರದ ಪೋಸ್ಟರ್ ಪವರ್ ಸ್ಟಾರ್ ಪುನಿತ್ ರಾಜ್‌ಕುಮಾರ್ ಬಿಡುಗಡೆ ಮಾಡಿ ಫಿದಾ ಆಗಿದ್ದರು. ಇದೀಗ ಕಿಚ್ಚ ಸುದೀಪ್ ರವರು ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ.

ಅಂದಹಾಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರದ ಟೀಸರ್ ದುಬೈನ ಅತೀ ಎತ್ತರದ ಕಟ್ಟಡ ಬುರ್ಜಾ ಖಲೀಫಾ ಕಟ್ಟಡದ ಮೇಲೆ ಬಿಡುಗಡೆ ಮಾಡುವುದಾಗಿ ಇದನ್ನು ಕಿಚ್ಚ ಸುದೀಪ್ ರವರೇ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಿಸಿತ್ತು ಚಿತ್ರತಂಡ. ಇದನ್ನು ಕೇಳಿದ ಸಿನಿರಸಿಕರು ಕೂತೂಹಲದಿಂದ ಕಾಯುತ್ತಿದ್ದರು.

ಚಿತ್ರತಂಡ ಹೇಳಿರುವಂತೆ ಬುರ್ಜಾ ಖಲೀಫಾ ಕಟ್ಟಡಕ್ಕಿಂತ ಎತ್ತರ ಭೂಮಿ ಬಿಟ್ಟು ಬೇರೆ ಗ್ರಹಕ್ಕೆ ಹೋಗಿರುವ ಹಾಗೆ ಕ್ರಿಯೇಟ್ ಮಾಡಿ ಟೀಸರ್ ಬಿಡುಗಡೆ ಮಾಡಲಾಗಿದೆ. ಇನ್ನೂ ಚಿತ್ರತಂಡದ ಈ ವಿಭಿನ್ನ ಪ್ರಯತ್ನಕ್ಕೆ ಕಿಚ್ಚ ಸುದೀಪ್ ಫಿದಾ ಆಗಿದ್ದು, ಅಭಿನಂದನೆ ತಿಳಿಸಿದ್ದಾರೆ. ಇನ್ನೂ ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯದ ಹಂತದಲ್ಲಿದ್ದು, ಬಿಡುಗಡೆ ದಿನಾಂಕ ಘೋಷಣೆ ಮಾಡಿಲ್ಲ. ಕೆಲವೊಂದು ಮೂಲಗಳ ಪ್ರಕಾರ ಮೇ ಮಾಹೆಯಲ್ಲಿ ಬಿಡುಗಡೆಯಾಗಬಹುದಾಗಿದೆ ಎಂದು ಹೇಳಲಾಗುತ್ತಿದೆ.

Trending

To Top