health-Kannada

Health Tips: ಮಧುಮೇಹ ಕಂಟ್ರೋಲ್ ಮಾಡುವ ಮನೆಮದ್ದುಗಳು…

ಮಧುಮೇಹ ನಿಯಂತ್ರಿಸುವ ಮನೆ ಮದ್ದುಗಳು…

ಒಂದೇ ವಾರದಲ್ಲಿ ಮಧುಮೇಹ ನಿಯಂತ್ರಿಸುವ ಮನೆಮದ್ದುಗಳು:

ಮಧುಮೇಹ ವಂಶವಾಹಿನಿಯ ಮೂಲಕ ಬರುವ ಕಾಯಿಲೆಯಾಗಿದ್ದು ತಂದೆ ತಾಯಿ ತಾತ ಅಜ್ಜಿಯರಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮಕ್ಕಳಿಗೂ ಆವರಿಸುವ ಸಾಧ್ಯತೆ ಹೆಚ್ಚಿರುತ್ತದೆ.

ಆದ್ದರಿಂದ ವಂಶವಾಹಿನಿಯಲ್ಲಿ ಮಧುಮೇಹದ ಇತಿಹಾಸವಿರುವ ಮಕ್ಕಳು ತಮಗೆ ಯಾವಾಗ ಮಧುಮೇಹ ಆವರಿಸುತ್ತದೋ ಎಂಬ ಆತಂಕದಲ್ಲಿಯೇ ಇರುತ್ತಾರೆ. ಮಧುಮೇಹದ ಬಗ್ಗೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಲಭ್ಯವಿರುವ ಮಾಹಿತಿಯ ಪರಿಣಾಮವಾಗಿ ಇದರ ಬಗ್ಗೆ ಎಲ್ಲರೂ ಅರಿತಿದ್ದಾರೆ.

ಹಿಂದೆಲ್ಲಾ ಸಕ್ಕರೆ ತಿಂದೇ ಮಧುಮೇಹ ಬರುತ್ತದೆ ಎಂದೇ ಹೆಚ್ಚಿನ ಜನರು ತಿಳಿದಿದ್ದರು. ಆದರೆ ಈ ಭ್ರಾಂತಿ ಈಗ ಹೆಚ್ಚೂ ಕಡಿಮೆ ಅಳಿದಿದೆ. ಮಧುಮೇಹಕ್ಕೆ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗದಿರುವುದು ಅಥವಾ ಉತ್ಪತ್ತಿಯಾದರೂ ಬಳಸಲ್ಪಡದಿರುವುದು ಮಧುಮೇಹಕ್ಕೆ ಕಾರಣವಾಗಿದೆ.

ಈ ಎರಡೂ ಕಾರಣಗಳನ್ನು ಆಧರಿಸಿ ಟೈಪ್ 1 ಮತ್ತು ಟೈಪ್ 2 ಮಧುಮೇಹವೆಂದು ವರ್ಗೀಕರಿಸಲಾಗಿದೆ. ಈ ಎರಡೂ ಸಂದರ್ಭಗಳಲ್ಲಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ.

ಮಧುಮೇಹದಿಂದ ಹತ್ತು ಹಲವು ಇತರ ಅಡ್ಡಪರಿಣಾಮಗಳಿವೆ. ಮಧುಮೇಹ ಬಂದ ಬಳಿಕ ಇದನ್ನು ಮತ್ತೆ ಇಲ್ಲವಾಗಿಸಲು ಸಾಧ್ಯವಿಲ್ಲ. ಆದರೆ ಇದನ್ನು ನಿಯಂತ್ರಣದಲ್ಲಿರಿಸಿ ಅಡ್ಡಪರಿಣಾಮಗಳಿಗೆ ಎದುರಾಗದಂತೆ ನೋಡಿಕೊಳ್ಳುವುದೇ ಜಾಣತನದ ಮತ್ತು ಆರೋಗ್ಯಕರ ಕ್ರಮ.

1.ಜೀರಿಗೆ :
ಮಧುಮೇಹಕ್ಕೆ ನೈಸರ್ಗಿಕ ಮದ್ದು ಒಂದು ವೇಳೆ ಮಧುಮೇಹ ಆವರಿಸಿದ್ದರೆ ಕೆಲವು ಲಕ್ಷಣಗಳ ಮೂಲಕ ಇದನ್ನು ಅರಿಯಬಹುದು.

ಸತತವಾಗಿ ಮೂತ್ರಕ್ಕೆ ಅವಸರವಾಗುವುದು, ಅತೀವ ಸುಸ್ತು, ಅತಿ ಹೆಚ್ಚಿನ ಹಸಿವು, ಅಕಾರಣವಾದ ತೂಕದಲ್ಲಿ ಇಳಿಕೆ ಅಥವಾ ಏರಿಕೆ, ಲೈಂಗಿಕ ಕ್ರಿಯೆಯಲ್ಲಿ ತೀವ್ರ ನಿರಾಸಕ್ತಿ, ಗಾಯಗಳಾದರೆ ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಇತ್ಯಾದಿಗಳು ಮಧುಮೇಹದ ಲಕ್ಷಣಗಳಾಗಿವೆ.

ಒಂದು ವೇಳೆ ಅರಿವಿನ ಕೊರತೆ ಅಥವಾ ನಿರ್ಲಕ್ಷ್ಯದ ಕಾರಣ ಮಧುಮೇಹಕ್ಕೆ ಸರಿಯಾದ ಕ್ರಮ ಕೈಗೊಳ್ಳದೇ ಹೋದರೆ ಇದು ನಿಧಾನವಾಗಿ ಹೆಚ್ಚಾಗುತ್ತಾ ಒಂದೊಂದಾಗಿ ಶರೀರದ ಅಂಗಗಳನ್ನೆಲ್ಲಾ ನಿಷ್ಕ್ರಿಯಗೊಳಿಸುತ್ತಾ ಬರುತ್ತದೆ.

2.ತುಳಸಿ ಎಲೆಗಳು :

ತುಳಸಿ ಎಲೆಗಳಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು ಮತ್ತು ಅತ್ಯಾವಶ್ಯಕ ತೈಲ (essential oils) ಗಳಿವೆ. ಇವುಗಳ ಸೇವನೆಯಿಂದ ದೇಹದಲ್ಲಿ eugenol, methyl eugenol ಮತ್ತು caryophyllene ಎಂಬ ಮೂರು ಪ್ರಮುಖ ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ.

ಈ ಮೂರೂ ರಾಸಾಯನಿಕಗಳು ಕಲೆತಾಗ ಮೇದೋಜೀರಕ ಗ್ರಂಥಿಯ ಬೀಟಾ ಜೀವಕೋಶಗಳು (ಈ ಜೀವಕೋಶಗಳಿಂದ ಇನ್ಸುಲಿನ್ ಸಂಗ್ರಹವಾಗುತ್ತದೆ ಮತ್ತು ಅಗತ್ಯವಿದ್ದಷ್ಟು ಬಿಡುಗಡೆಯಾಗುತ್ತದೆ) ಹೆಚ್ಚಿನ ಪೋಷಕಾಂಶಗಳನ್ನು ಪಡೆಯುತ್ತದೆ. ಪರಿಣಾಮವಾಗಿ ರಕ್ತದಲ್ಲಿ ಹೆಚ್ಚಿನ ಇನ್ಸುಲಿನ್ ಬಿಡುಗಡೆಯಾಗುತ್ತದೆ.

ಜೊತೆಗೇ oxidative stress ಎಂಬ ಒತ್ತಡವನ್ನೂ ಕಡಿಮೆಗೊಳಿಸುತ್ತದೆ.ಈ ವಿಧಾನ ಟೈಪ್-1 ಮಧುಮೇಹಕ್ಕೆ ಸೂಕ್ತವಾಗಿದೆ. (ಟೈಪ್-1 ಮಧುಮೇಹಕ್ಕೆ ನಮ್ಮ ಜೀವನ ಪ್ರತಿರೋಧ ವ್ಯವಸ್ಥೆಯೇ ಪರೋಕ್ಷವಾಗಿ ಕಾರಣವಾಗಿದೆ.
ಇಲ್ಲಿ ಜೀವನ ಪ್ರತಿರೋಧ ವ್ಯವಸ್ಥೆ ಮೇದೋಜೀರಕ ಗ್ರಂಥಿಯ ಜೀವಕೋಶಗಳನ್ನು ಶತ್ರುಗಳೆಂದು ಪರಿಗಣಿಸಿ ನಿಶ್ಕ್ರಿಯಗೊಳಿಸುತ್ತದೆ.

3. ದಾಲ್ಚಿನ್ನಿ :

ದಾಲ್ಚಿನ್ನಿ ಸೇವನೆಯಿಂದ ಕಡಿಮೆ ಇರುವ ರಕ್ತದೊತ್ತಡ ಮತ್ತು ಇನ್ಸುಲಿನ್ ಪ್ರಮಾಣದಲ್ಲಿ ಸುಧಾರಣೆ ಕಂಡುಬರುತ್ತದೆ. ಜೊತೆಗೇ ತೂಕ ಏರುವುದನ್ನು ನಿಯಂತ್ರಿಸಿ ಹೃದಯಾಘಾತದ ಸಂಭವಗಳಿಂದ ಕಾಪಾಡುತ್ತದೆ.

ಪ್ರತಿದಿನಕ್ಕೆ ಅರ್ಧ ಚಿಕ್ಕ ಚಮಚದಷ್ಟು ಪ್ರಮಾಣ ಅಧ್ಬುತಗಳನ್ನೇ ಸಾಧಿಸಬಲ್ಲುದು. ಉಪಯೋಗಿಸುವ ವಿಧಾನ ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ. ಇದು ಟೈಪ್ 1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

4. ಬೇವಿನ ಎಲೆಗಳು (ಕಹಿಬೇವು):

ಕಹಿಬೇವಿನ ಎಲೆಗಳು ವಿವಿಧ ರೀತಿಯಲ್ಲಿ ನಮ್ಮ ದೇಹಕ್ಕೆ ಉತ್ತಮ ಆರೋಗ್ಯವನ್ನು ನೀಡುತ್ತವೆ. ಮುಖ್ಯವಾಗಿ ಇನ್ಸುಲಿನ್ ಬಳಕೆಯನ್ನು ಗರಿಷ್ಟಗೊಳಿಸಲು ನೆರವಾಗುತ್ತದೆ.

ಇದರಿಂದ ನಿಧಾನವಾಗಿ ಟೈಪ್ -2 ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಜೊತೆಗೇ ನರಗಳು ಸೆಳೆದುಕೊಂಡಿದ್ದರೆ ಅವುಗಳನ್ನು ಸಡಿಲಗೊಳಿಸಿ ರಕ್ತಸಂಚಾರ ಸುಗಮವಾಗಲು ಸಹಕರಿಸುತ್ತದೆ.

ಇನ್ನೂ ಮುಖ್ಯವಾಗಿ ದೇಹ ಮಧುಮೇಹದ ಕಾರಣದಿಂದಾಗಿ hypoglycaemic ಔಷಧಿಗಳ ಮೇಲಿನ ಅವಲಂಬನೆಯನ್ನು ಮುಕ್ತಗೊಳಿಸುತ್ತದೆ.

ಉಪಯೋಗಿಸುವ ವಿಧಾನ ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.
ಬಳಿಕ ಸುಮಾರು ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು.

5.ಸಿಪ್ಪೆಯ ಸಹಿತ ದಿನಕ್ಕೊಂದು ಸೇಬು ಹಣ್ಣು ಸೇವಿಸಿ:

‘ದಿನಕ್ಕೊಂದು ಸೇಬು ತಿನ್ನಿ, ವೈದ್ಯರನ್ನು ದೂರವಿಡಿ’ ಎಂಬ ನಾಣ್ಣುಡಿಯಿದೆ.ನಿಜ ಸೇಬನ್ನು ತಿನ್ನುವುದರಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ಅದರಲ್ಲೂ ಸೇಬಿನಲ್ಲಿ ಕ್ಯಾಲೊರಿ ಪ್ರಮಾಣ ಕಡಿಮೆಯಿದೆ, ಹೆಚ್ಚಿನ ನಾರಿನಂಶವಿದೆ.

ಇದು ಕೊಲೆಸ್ಟ್ರಾಲ್‍ಗಳ ಜೊತೆಗೆ ಹೊಡೆದಾಡುವುದರ ಜೊತೆಗೆ, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದರ ಸಿಪ್ಪೆಯನ್ನು ತೆಗೆಯದೆ ಹಾಗೆಯೇ ತಿನ್ನಿ, ಹೆಚ್ಚಿನ ಲಾಭವನ್ನು ಪಡೆಯಿರಿ.

ಸೇಬಿನಲ್ಲಿರುವ ಕ್ವೆರ್ಸೆಟಿನ್ ಎಂಬ ಅಂಶವು ಒಂದು ಸಮೃದ್ಧವಾದ ಅಂಟಿ ಬಯೋಟಿಕ್ ಆಗಿದ್ದು, ಇದು ಮಧುಮೇಹವನ್ನು ನಿಯಂತ್ರಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ.

6.ಮೆಂತೆ ಸೊಪ್ಪು ಹೆಚ್ಚಾಗಿ ಸೇವಿಸಿ:

ರಕ್ತದಲ್ಲಿ ಸಕ್ಕರೆಯ ಪ್ರಮಾಣವನ್ನು ಆರೋಗ್ಯಕರ ಮಟ್ಟದಲ್ಲಿ ಇರಿಸಲು ಮೆಂತೆ ಅತ್ಯುತ್ತಮ ಆಯ್ಕೆಯಾಗಿದೆ. ವಿಶೇಷವಾಗಿ ಟೈಪ್ 2 ಮಧುಮೇಹಿಗಳಿಗೆ ಇದು ಉತ್ತಮ ಪರಿಹಾರವಾಗಿದ್ದು ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಪ್ರಮಾಣವನ್ನು ಜೀವಕೋಶಗಳು ಹೀರಿಕೊಳ್ಳಲು ನೆರವಾಗುತ್ತದೆ.

ಮೆಂತೆಸೊಪ್ಪಿನ ದೋಸೆ, ಸಾರು ಹಾಗೂ ಮೆಂತೆಕಾಳುಗಳನ್ನು ನೆನೆಸಿ ಅರೆದು ಸೇರಿಸಿ ಮಾಡಿದ ಖಾದ್ಯಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಉತ್ತಮ ಪರಿಣಾಮ ಕಂಡುಕೊಳ್ಳಬಹುದು.

7.ಸೀತಾಫಲ ಹಣ್ಣು ಸೇವಿಸಿ :

ಸೀತಾಫಲವು ಮಧುಮೇಹಿ ಪ್ರತಿರೋಧಕ ಗುಣಲಕ್ಷಣಗಳನ್ನು ಹೊ೦ದಿದೆ ಸೀತಾಫಲಗಳಲ್ಲಿ ಅನೇಕ ಮಧುಮೇಹಿ ಪ್ರತಿಬ೦ಧಕ ಗುಣಲಕ್ಷಣಗಳಿವೆ.

ಸೀತಾಫಲದ ಈ ವಿಶಿಷ್ಟವಾದ ಗುಣವಿಶೇಷವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯ೦ತ್ರಿಸಲು ಸಹಕರಿಸುತ್ತದೆ ಹಾಗೂ ಶರೀರದ ಮಾ೦ಸಖ೦ಡಗಳು ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳುವ೦ತೆ.

ಮಾಡುವುದರ ಮೂಲಕ ರಕ್ತದ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗೂ ತನ್ಮೂಲಕ ಶರೀರದ ಸಕ್ಕರೆಯ ಪ್ರಮಾಣದ ಬಳಕೆಯನ್ನು ನಿಯಮಿತಗೊಳಿಸಿ ನಿಯ೦ತ್ರಿಸಲು ಸಹಕರಿಸುತ್ತದೆ.

ಆದ್ದರಿ೦ದ, ಸೀತಾಫಲಗಳನ್ನು ದಿನನಿತ್ಯವೂ ಸ್ವಲ್ಪ ಪ್ರಮಾಣದಲ್ಲಿ ಸೇವಿಸುವುದರಿ೦ದ ಅವುಗಳಲ್ಲಿರುವ ಮಧುಮೇಹ ಸ೦ಬ೦ಧಿ ಪ್ರಯೋಜನಗಳು, ಮಧುಮೇಹಿಗಳಿಗೆ ಮಧುಮೇಹದ ನಿಯ೦ತ್ರಣದಲ್ಲಿ ಸಹಕಾರಿಯಾಗುತ್ತವೆ.

8. ಹಾಗಲಕಾಯಿ ಜ್ಯೂಸ್ ಮಾಡಿ ಕುಡಿಯಿರಿ:

ತಾಜಾ ಹಾಗಲಕಾಯಿಯನ್ನು ಚೆನ್ನಾಗಿ ತೊಳೆದು ಅದರ ಮೇಲ್ಭಾಗದ ಸಿಪ್ಪೆಯನ್ನು ತೆಗೆಯಿರಿ ಹಾಗೂ ಇದನ್ನು ಮಧ್ಯಭಾಗದಲ್ಲಿ ಕತ್ತರಿಸಿ ಬೀಜವನ್ನು ಚಮಚದ ಮೂಲಕ ತೆಗೆಯಿರಿ.

ಸಿಪ್ಪೆಯ ಕಹಿಯನ್ನು ನೀವು ಸಹಿಸಿಕೊಳ್ಳಬಲ್ಲಿರೆ೦ದಾದಲ್ಲಿ ಅದನ್ನು ತೆಗೆಯುವ ಅಗತ್ಯವಿಲ್ಲ.
ಅನೇಕರು ಹಾಗಲಕಾಯಿಯ ಮೇಲ್ಭಾಗದ ಸಿಪ್ಪೆಯನ್ನು ತೆಗೆಯುವ ಗೋಜಿಗೇ ಹೋಗುವುದಿಲ್ಲ. ಇನ್ನು ಹರಿತವಾದ ಚಾಕುವನ್ನು ಬಳಸಿ ಹಾಗಲಕಾಯಿಯನ್ನು ಸಣ್ಣದಾಗಿ ತುಂಡರಿಸಿಕೊಳ್ಳಿ.

ನಂತರ ಇದನ್ನು ಒಂದು ಪಾತ್ರೆಗೆ ಹಾಕಿ ಮತ್ತು ನೀರಿನಲ್ಲಿ 30 ನಿಮಿಷಗಳ ಕಾಲ ಹಾಗಲಕಾಯಿಯನ್ನು ಮುಳುಗಿಸಿಡಿ.
ಬೇಕಾದಲ್ಲಿ ಸ್ವಲ್ಪ ಉಪ್ಪು ಅಥವಾ ಲಿಂಬೆ ರಸವನ್ನು ಸೇರಿಸಿ ಇದರಿಂದ ಇದರ ಕಹಿ ನಿವಾರಣೆಯಾಗುತ್ತದೆ.

ಅನ೦ತರ ಇವುಗಳನ್ನು ಮಿಕ್ಸರ್‌ನಲ್ಲಿ ಹಾಕಿರಿ ಜೊತೆಗೆ ಅದಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿರಿ.
ಬಳಿಕ ಮಿಕ್ಸಿಯನ್ನು ಮಧ್ಯಮ ವೇಗದಲ್ಲಿ ತಿರುಗಿಸುವುದರ ಮೂಲಕ ಕಹಿ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

9.ನೆಲ್ಲಿಕಾಯಿ ಆಮ್ಲ :

ಎಂದೇ ಕರೆಯಿಲ್ಪಡುವ ನೆಲ್ಲಿಕಾಯಿ, ಅಜ್ಜಿ ಔಷಧಿ ಎಂದೇ ಕರೆಯಲಾಗಿದೆ. ಇದು 2 ನೇ ವಿಧದ ಮಧುಮೇಹವನ್ನು ನಿಯಂತ್ರಿಸಲು ಉತ್ತಮವಾದುದು.
ವಿಟಮಿನ್ ಸಿ ಅಂಶಗಳು ಇದರಲ್ಲಿದ್ದು, ಇನ್ಸುಲಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ.

ಇದನ್ನು ಜ್ಯೂಸ್ ಅಥವಾ ಹುಡಿಯನ್ನು ತಣ್ಣೀರಿನಲ್ಲಿ ಕರಗಿಸಿಕೊಂಡು ಬೆಳಗ್ಗಿನ ಹೊತ್ತು ಸೇವಿಸಬೇಕು.

10. ಸೀಬೆ ಎಲೆ :

ಭಾರತದಲ್ಲಿ ಹೆಚ್ಚು ಸುಲಭವಾಗಿ ದೊರೆಯುವ ಮತ್ತು ಜನಪ್ರಿಯ ಎಂದೇ ಪ್ರಸಿದ್ಧವಾಗಿರುವ ಸೀಬೆ ರೋಗನಿರೋಧಕ ಶಕ್ತಿಯನ್ನು ಒಳಗೊಂಡಿದೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಂಡಿದೆ.
ಇನ್ನು ಸೀಬೆ ಎಲೆಗಳೂ ಕೂಡ ಔಷಧೀಯ ಅಂಶಗಳನ್ನು ಹೊಂದಿರುವುದು ನಮ್ಮಲ್ಲಿ ಹಲವರಿಗೆ ಗೊತ್ತಿಲ್ಲ.

ಸೀಬೆ ಎಲೆಗಳನ್ನು ಜ್ವರಕ್ಕಾಗಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದು ಇದು ಉರಿಯೂತವನ್ನು ನಿವಾರಿಸುವುದರ ಜೊತೆಗೆ ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಗೆ ತರುತ್ತದೆ.

ಸೀಬೆ ಎಲೆಯ ಸಾರವನ್ನು ತಯಾರಿಸುವುದು ಹೇಗೆ? ನೀರಿನಲ್ಲಿ ಚೆನ್ನಾಗಿ ಸೀಬೆ ಎಲೆಯನ್ನು ತೊಳೆದುಕೊಳ್ಳಿ ಮತ್ತು ಅದರಲ್ಲಿರುವ ಕೊಳೆ ಧೂಳನ್ನು ನಿವಾರಿಸಿಕೊಂಡು, ಒಂದು ಲೀಟರಿನಲ್ಲಿ ಎಂಟು ಪೇರಳೆ ಎಲೆಗಳನ್ನು ಜಜ್ಜಿ ಬೇಯಿಸಬೇಕು.

ಸುಮಾರು ಐದು ನಿಮಿಷ ಕುದಿದ ಬಳಿಕ ತಣಿಯಲು ಬಿಟ್ಟು ಈ ನೀರನ್ನು ದಿನಕ್ಕೆ ಮೂರು ಬಾರಿ ಕುಡಿಯಬೇಕು. ಖಾಲಿಹೊಟ್ಟೆಯಲ್ಲಿ ಕುಡಿದರೆ ಒಳ್ಳೆಯದು. ಹಸಿರು ಟೀ ಹಸಿರು ಟೀ ರುಚಿಯಲ್ಲಿ ಮತ್ತು ಪೋಷಕಾಂಶಗಳಲ್ಲಿ ಸಾಮಾನ್ಯ ಟೀ ಗಿಂತ ಭಿನ್ನವಾಗಿದೆ.

ಇದರ ಮುಖ್ಯ ಅಂಶವೆಂದರೆ ಪಾಲಿಫಿನಾಲ್ (polyphenol) ಎಂಬ ಪೋಷಕಾಂಶವಾಗಿದೆ. ಇದೊಂದು ಪ್ರಬಲವಾದ ಆಂಟಿ ಆಕ್ಸಿಡೆಂಟು ಮತ್ತು hypo-glycaemic compound ಆಗಿದ್ದು ರಕ್ತದಲ್ಲಿನ ಸಕ್ಕರೆ ಅಂಶವನ್ನು ದೇಹ ಬಳಸಿಕೊಳ್ಳಲು ಸಹಕರಿಸುತ್ತದೆ.
ಇದು ಟೈಪ್ -2 ಮಧುಮೇಹಕ್ಕೆ ಸೂಕ್ತವಾಗಿದೆ.

ಉಪಯೋಗಿಸುವ ವಿಧಾನ ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು).
ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಗಂಟೆ ಮೊದಲು ಕುಡಿಯಬೇಕು.

11.ನುಗ್ಗೇಕಾಯಿ ಮರದ ಎಲೆಗಳು:

(moringa leaf) ನುಗ್ಗೆ ಮರದ ಎಲೆಗಳು ಚಿಕ್ಕದಾಗಿದ್ದರೂ ಪೋಷಕಾಂಶಗಳ ಪಟ್ಟಿ ಜೋರಾಗಿದೆ. ಈ ಎಲೆಗಳು ಆಹಾರವನ್ನು ಜೀರ್ಣೀಸಿಕೊಳ್ಳುವ ಗತಿಯನ್ನು ಕೊಂಚ ನಿಧಾನಗೊಳಿಸಿ ಸಕ್ಕರೆಯ ಬಳಕೆಯನ್ನು ಹೆಚ್ಚು ಸಮರ್ಥಗೊಳಿಸಲು ಸಹಕರಿಸುತ್ತದೆ.

ಉಪಯೋಗಿಸುವ ವಿಧಾನ ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ.
ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

12.ಅಡುಗೆಗೆ ಹೆಚ್ಚಾಗಿ ಆಲಿವ್ ಎಣ್ಣೆಯನ್ನೇ ಬಳಸಿ:

ಆಲಿವ್ ಎಣ್ಣೆ ಆಲಿವ್ ಎಣ್ಣೆ ಪ್ರಯತ್ನಿಸಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಲಿವ್ ತೈಲ ಮಧುಮೇಹವನ್ನು ತಡೆಯಲು ಉತ್ತಮ ರೀತಿಯಲ್ಲಿ ನೆರವಾಗುತ್ತದೆ.

ಆಲಿವ್ ಎಣ್ಣೆಯಲ್ಲಿರುವ ಉತ್ತಮ ಕೊಬ್ಬು ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿ ನೀಡಲು ಆಲಿವ್ ತೈಲವನ್ನು ಬಳಸಿ.

13.ಒಣ ಹಣ್ಣುಗಳು :

ಒಣ ಹಣ್ಣುಗಳು ‘ ನಿಧಾನವಾಗಿ ಜೀರ್ಣವಾಗುವ’ ಆಹಾರವಾಗಿದೆ. ಇವು ತಮ್ಮಲ್ಲಿರುವ ಹೆಚ್ಚಿನ ಪ್ರಮಾಣದ ನಾರು ಮತ್ತು ಪ್ರೊಟೀನ್‍ಗಳಿಂದಾಗಿ ರಕ್ತದಲ್ಲಿರುವ ಸಕ್ಕರೆ ಅಂಶದ ಸ್ನೇಹಿಯಾಗಿ ಕೆಲಸ ಮಾಡುತ್ತವೆ.

ಅಧ್ಯಯನಗಳ ಪ್ರಕಾರ ನಿಯಮಿತವಾಗಿ ಪ್ರತಿದಿನ ಒಣ ಹಣ್ಣುಗಳನ್ನು ಸೇವಿಸುವುದರಿಂದಾಗಿ ಹೃದಯದ ಬೇನೆಯನ್ನು ತಡೆಯಬಹುದಂತೆ.
ಒಣ ಹಣ್ಣುಗಳಲ್ಲಿರುವ ಟೊಕೊಟ್ರೈಯೆನೊಲ್‍ಗಳು ನಮಗೆ ಉತ್ತಮ ಆರೋಗ್ಯವನ್ನು ನೀಡುತ್ತವೆ.

ಆದರೆ ಒಣ ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕೆಂಬುದನ್ನು ಮರೆಯಬೇಡಿ ಸಿಟ್ರಸ್ ಹಣ್ಣುಗಳು ಕಡಿಮೆ ಕೊಬ್ಬು ,ಸಮೃದ್ಧ ನಾರಿನಂಶದಿಂದ ಕೂಡಿರುವ ಸಿಟ್ರಸ್ ಹಣ್ಣುಗಳು ತಮ್ಮಲ್ಲಿರುವ ಉತ್ತಮ ಪೋಷಕಾಂಶಗಳಿಂದಾಗಿ ಆರೋಗ್ಯಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತವೆ.

14. ಕಿತ್ತಳೆ ಹಣ್ಣಿನಲ್ಲಿ(ಸಿಟ್ರಸ್ ಹಣ್ಣುಗಳು) :

ಫ್ಲವೊನೊಯ್ಡ್ಸ್, ಕ್ಯಾರೊಟೆನೊಯ್ಡ್ಸ್, ಟರ್ಪೈನ್ಸ್, ಪೆಕ್ಟಿನ್ಸ್ ಮತ್ತು ಗ್ಲುಟತಿಯೊನ್ ಮತ್ತು ಫೋಟೊನ್ಯೂಟ್ರಿಯೆಂಟ್‍ಗಳ ಸಮೃದ್ಧ ಆಗರವಿದೆ. ಇವುಗಳೆಲ್ಲವು ಸೇರಿ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಕರಿಸುತ್ತವೆ.

ಪ್ರಪಂಚದ ನಾನಾ ಮೂಲೆಗಳಲ್ಲಿ ನಡೆದ ಅಧ್ಯಯನಗಳಲ್ಲಿ ತಿಳಿದು ಬಂದ ವಿಚಾರದ ಪ್ರಕಾರ ಮಧುಮೇಹಿಗಳಲ್ಲಿ ವಿಟಮಿನ್ ಸಿಯ ಪ್ರಮಾಣ ಕಡಿಮೆ ಇರುತ್ತದೆ. ಹಾಗಾಗಿ ನಿಮ್ಮ ತಿಂಡಿಯಲ್ಲಿ ಅಂಟಿ ಆಕ್ಸಿಡೆಂಟ್ ಹೆಚ್ಚಾಗಿರುವ ಸಿಟ್ರಸ್ ಹಣ್ಣುಗಳನ್ನು ಸೇರಿಸುವುದನ್ನು ಮರೆಯಬೇಡಿ.

15.ಬೆಂಡೆಕಾಯಿ:

ಇದರಲ್ಲಿರುವ ದ್ರವ ಮಧುಮೇಹವನ್ನು ನಿಯಂತ್ರಣ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಬೆಂಡೆಕಾಯಿಯ ತುದಿ ಮುರಿದು ಅದರ ದ್ರವವನ್ನು ಒಂದು ಲೋಟ ನೀರಿನಲ್ಲಿ ಹಾಕಿ ಬೆಳಗ್ಗೆ ಎದ್ದು ಆ ನೀರನ್ನು ಕುಡಿಯಬೇಕು.

ಈ ರೀತಿ ಮಾಡಿದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ. ಅಲ್ಲದೆ ಯಾವುದೇ ಇನ್ಸುಲಿನ್ ಚುಚ್ಚು ಮದ್ದಿನ ಅಗತ್ಯ ಕೂಡ ಕಂಡು ಬರುವುದಿಲ್ಲ.

16.ಬಾರ್ಲಿ ನೀರು:

ಬಾರ್ಲಿಯಲ್ಲಿರುವ ಫೈಬರ್ ಅಂಶವು ಮಧುಮೇಹ ರೋಗಿಗಳಿಗೆ ಬಹಳ ಅನುಕೂಲಕರವಾಗಿದೆ. ಇದರಲ್ಲಿ ಅಂಟಿ-ಆ್ಯಕ್ಸಿಡೆಂಟ್​ ಅಂಶ ಅಧಿಕ ಪ್ರಮಾಣದಲ್ಲಿದ್ದು, ಇದು ರಕ್ತದ ಗ್ಲೂಕೋಸ್​​ನ್ನು ನಿಯಂತ್ರಣದಲ್ಲಿಡುತ್ತದೆ. ಇದರಿಂದ ಡಯಾಬಿಟೀಸ್ ಸಮಸ್ಯೆ​ ನಿಯಂತ್ರಣಕ್ಕೆ ಬರುತ್ತದೆ.

Trending

To Top