Film News

ಹೊಂಬಾಳೆ ಫಿಲ್ಸ್ಮ್ ಬ್ಯಾನರ್ ನಡಿ ಹೊಸ ಸಿನೆಮಾ!

ಬೆಂಗಳೂರು: ಸ್ಯಾಂಡಲ್‌ವುಡ್ ನ ಪ್ರಖ್ಯಾತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್ ನಿಂದ ಹೊಸ ಸಿನೆಮಾ ಘೋಷಣೆಯಾಗಿದೆ. ಪಾನ್ ಇಂಡಿಯಾದಡಿ ಈಗಾಗಲೇ ಸಲಾರ್ ಚಿತ್ರವನ್ನು ಪ್ರಕಟಿಸಿದ್ದು, ಇದರ ಬೆನ್ನಲ್ಲೆ ಹೊಸ ಸಿನೆಮಾ ಮಾಡುವುದಾಗಿ ಬಹಿರಂಗವಾಗಿದೆ.

ಹೊಂಬಾಳೆ ಫಿಲ್ಸಂ ನಿಂದ ಹೊಸ ಸಿನೆಮಾ ಯಾವುದೆಂಬ ಮಾಹಿತಿ ದೊರೆಯಲು ಡಿ.೧೭ರವರೆಗೂ ಕಾಯಬೇಕಿದೆ. ಹೌದು ಡಿ.೧೭ ರಂದು ಬೆಳಗ್ಗೆ ೧೧.೫೯ಕ್ಕೆ ಹೊಸ ಸಿನೆಮಾ ಘೋಷಣೆ ಮಾಡುತ್ತೇವೆ ಎಂದು ಹೊಂಬಾಳೆ ಫಿಲ್ಸ್ಮ್ ಪೋಸ್ಟರ್ ರಿಲೀಸ್ ಮಾಡಿದೆ. ಇನ್ನೂ ಈ ಚಿತ್ರದ ಪೊಸ್ಟರ್ ಗಾಗಿ ಕಾಯುತ್ತಿರುವ ಸಿನಿರಸಿಕರು, ಚಿತ್ರದಲ್ಲಿ ನಾಯಕ ಯಾರಾಗಲಿದ್ದಾರೆ ಎಂಬ ಕೌತುಕದಲ್ಲಿದ್ದಾರೆ.

ಸಲಾರ್ ಚಿತ್ರವನ್ನು ಹೊಂಬಾಳೆ ತಂಡ ಪ್ರಕಟಿಸಿದಾಗ ಚಿತ್ರದ ನಾಯಕ ಆಯ್ಕೆ ಕುರಿತಂತೆ ಅನೇಕರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಸಿನೆಮಾದಲ್ಲಿ ನಾಯಕ ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ. ಇನ್ನೂ ಈ ನೂತನ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿದ್ದು, ಈ ಚಿತ್ರ ಕೇವಲ ಕನ್ನಡ ಭಾಷೆಯಲ್ಲಿ ಮಾತ್ರ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ. ಜೊತೆಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಹುಟ್ಟಿದ ದಿನ ಕೂಡ ಡಿ.೧೭ ರಂದೇ ಆಗಿರುವ ಕಾರಣ ನಟ ಶ್ರೀಮುರಳಿ ಸಹ ಹೊಂಬಾಳೆ ತಂಡ ನೂತನ ಚಿತ್ರದಲ್ಲಿ ನಾಯಕರಾಗಬಹುದು ಎಂದು ಸಹ ಹೇಳಲಾಗುತ್ತಿದೆ.

Trending

To Top