ಘೋಷಣೆಯಾಯ್ತು ಹೊಂಬಾಳೆ ಫಿಲ್ಸ್ಮ ಹೊಸ ಚಿತ್ರದ ಹೆಸರು

ಬೆಂಗಳೂರು: ಕನ್ನಡ ಸಿನಿರಂಗದ ಪ್ರಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ ತಮ್ಮ 8ನೇ ಸಿನೆಮಾದ ಹೆಸರನ್ನು ಬಹಿರಂಗಪಡಿಸಿದ್ದು, ಈ ಚಿತ್ರದಲ್ಲಿ ಕನ್ನಡ ಸ್ಟಾರ್ ನಟ ಶ್ರೀಮುರಳಿ ನಾಯಕನಾಗಲಿದ್ದಾರೆ.

ಹೊಂಬಾಳೆ ಫಿಲ್ಸ್ಮ ಹೊಸ ಚಿತ್ರದ ಶೀರ್ಷಿಕೆಯ ಬಗ್ಗೆ ಇಲ್ಲಿಯವರೆಗೂ ಕೂತೂಹಲದಿಂದ ಇದ್ದಂತಹ ಅಭಿಮಾನಿಗಳಿಗೆ ಇಂದು ಉತ್ತರ ದೊರೆತಿದ್ದು, ಬಘೀರ ಎಂಬ ಹೆಸರನ್ನು ಘೋಷಣೆ ಮಾಡಿದ್ದಾರೆ ಹೊಂಬಾಳೆ ತಂಡ. ಇನ್ನೂ ಈ ಚಿತ್ರವೂ ಕೂಡ ಪ್ಯಾನ್ ಇಂಡಿಯಾ ರೀತಿಯಲ್ಲಿಯೇ ರಿಲೀಸ್ ಆಗಲಿದ್ದು, ಪೊಲೀಸ್ ಅಧಿಕಾರಿಯ ರೂಪದಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳಲಿದ್ದಾರೆ. ಮಫ್ತಿ ಚಿತ್ರದ ನಂತರ ಬಘೀರ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿರುವ ಮತ್ತೊಂದು ಚಿತ್ರವಾಗಿದೆ.

ಇನ್ನೂ ಶ್ರೀಮುರಳಿ ಹುಟ್ಟುಹಬ್ಬದಂದೇ ಚಿತ್ರದ ಮೊದಲ ಪೋಸ್ಟರ್ ಸಹ ರಿಲೀಸ್ ಮಾಡಿದ್ದು, ಅಭಿಮಾನಿಗಳ ಕ್ರೇಜ್ ಹೆಚ್ಚಿಸುವಂತೆ ಮಾಡಿದೆ. ಸಮಾಜವು ಕಾಡಿನಂತೆ ಬದಲಾದಾಗ ಒಂದೇ ಒಂದು ಪ್ರಿಡೇಟರ್ ನ್ಯಾಯಕ್ಕಾಗಿ ಘರ್ಜಿಸುತ್ತದೆ ಎಂಬ ಕ್ಯಾಪ್ಷನ್ ಚಿತ್ರಕ್ಕಿದ್ದು, ಇದು ಇನಷ್ಟು ಕುತೂಹಲ ಹೆಚ್ಚಿಸಿದೆ. ಇನ್ನೂ ಈ ಚಿತ್ರಕ್ಕೆ ಕಥೆಯನ್ನು ಶ್ರೀಮುರಳಿ ಭಾಮೈದ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಬರೆಯಲಿದ್ದು, ಲಕ್ಕಿ ಸಿನೆಮಾ ನಿರ್ದೇಶಕ ಸೂರಿ ನಿರ್ದೇಶಿಸಲಿದ್ದಾರೆ. ಮದಗಜ ಸಿನೆಮಾ ಚಿತ್ರೀಕರಣದ ನಚಿತರ ಬಘೀರ ಸಿನೆಮಾ ಕೆಲಸಗಳು ಶುರುವಾಗಲಿದೆಯಂತೆ.

Previous articleರೋರಿಂಗ್ ಸ್ಟಾರ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು ಮದಗಜ ಟೀಸರ್
Next articleಲೂಸಿಫರ್ ಚಿತ್ರದಲ್ಲಿ ನಟಿಸಲಿದ್ದಾರೆ ಮೆಗಾಸ್ಟಾರ್