News

(video)ಕನ್ನಡದ ಫೇಮಸ್ starಅನ್ನು ಮದುವೆ ಆಗತ್ತಾ ಇದ್ದಾರೆ ಸಿಹಿ ಕಹಿ ಚಂದ್ರು ಮಗಳು! ಯಾರು ಆ ನಟ?

sihi-kahi1

ಇತ್ತೀಚಿಗೆ ನಮ್ಮ ಸ್ಯಾಂಡಲ್ವುಡ್ ನಲ್ಲಿ ನಟ ಹಾಗು ನಟಿಯರು ಸಿನಿಮಾ ಫೀಲ್ಡ್ ನಲ್ಲಿ ಇರುವವರನ್ನೇ ಮದುವೆ ಆಗುವ ಒಂದು ಟ್ರೆಂಡ್ ಶುರು ಆಗಿದೆ. ನಮ್ಮ ಕನ್ನಡದ ಹೆಸರಾಂತ ನಟ ಮತ್ತು ನಿರ್ಮಾಪಕ ಸಿಹಿ ಕಹಿ ಚಂದ್ರು ಅವರ ಮಗಳಾದ ಹಿತ ಚಂದ್ರಶೇಖರ್ ಅವರು ಪ್ರೀತಿಸಿದ ಹುಡುಗನ ಜೊತೆ ಮದುವೆ ಆಗ್ತಾ ಇದ್ದಾರೆ. ಹಿತ ಚಂದ್ರಶೇಖರ್ ಅವರು ಕನ್ನಡದ ಖ್ಯಾತ star ಒಬ್ಬರನ್ನು ಮದುವೆ ಆಗ್ತಾ ಇದ್ದಾರೆ. ಆ ನಟ ಯಾರು ಗೊತ್ತ? ಹಾಗೆ ಸುಮ್ಮನೆ ಖ್ಯಾತಿಯ ಕಿರಣ್ ಶ್ರೀನಿವಾಸ್ ಅವರು. ಇವರಿಬ್ಬರ ಪ್ರೀತಿ ಬಗ್ಗೆ ಗಾಂಧಿನಗರದಲ್ಲಿ ಬಹಳ ದಿನಗಳಿಂದ ಸುದ್ದಿ ಹರಿದಾಡುತ್ತಿತ್ತು. ಈಗ ಇವರಿಬ್ಬರ ಒಳ್ಳೆಯ ಸ್ನೇಹಿತೆಯಾದ ನಟಿ ಸೋನು ಗೌಡ ಅವರು ಇದರ ಬಗ್ಗೆ ಸೋಶಿಯಲ್ ಮೀಡಿಯಾ ದಲ್ಲಿ confirm ಮಾಡಿದ್ದಾರೆ.
ಹಿರಿಯ ನಟ ಸಿಹಿ ಕಹಿ ಚಂದ್ರು ಅವರ ಮಗಳಾದ ಹಿತ ಚಂದ್ರಶೇಖರ್ ಅವರು ಸದ್ಯ ಕನ್ನಡದ ಹೆಸರಾಂತ ನಟಿಯರಲ್ಲಿ ಒಬ್ಬರು. ಹಿತ ಚಂದ್ರಶೇಖರ್ ಅವರು ಮೊದಲು ಮಾಡೆಲ್ಲಿಂಗ್ ಶುರು ಮಾಡಿ ಅದಾದ ನಂತರ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟರು. ಹಿತ ಚಂದ್ರಶೇಖರ್ ಅವರು ಇಲ್ಲಿಯ ತನಕ 2 ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಿತ ಚಂದ್ರಶೇಖರ್ ಅವರು ಯೋಗಿ ದುನಿಯಾ ಹಾಗು ಕಾಲ್ KG ಪ್ರೀತಿ ಎಂಬ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೊಂದೆಡೆ ನಮ್ಮ ಕಿರಣ್ ಶ್ರೀನಿವಾಸ್ ಅವರು ಹಾಗೆ ಸುಮ್ಮನೆ ಚಿತ್ರದ ಮೂಲಕ ಕರ್ನಾಟಕದ ಮನೆ ಮಾತಡವರು! ಇವರಿಬ್ಬರ ಮದುವೆ ಈಗ ಫಿಕ್ಸ್ ಆಗಿದೆ- ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ಕಿರಣ್ ಶ್ರೀನಿವಾಸ್ ಅವರು ಕನ್ನಡಿಗನಾದರೂ ಮೊದಲು ಹಿಂದಿ ಧಾರಾವಾಹಿ ಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನೂ ಮಾಡುತ್ತಾ ಬಂದರು. ಇದಾದ ನಂತರ ಕಿರಣ್ ಶ್ರೀನಿವಾಸ್ ಅವರಿಗೆ ಬಹಳಷ್ಟು ಜಾಹೀರಾತುಗಳಲ್ಲಿ ನಟಿಸಲು ಅವಕಾಶ ಸಿಕ್ಕಿತು. ಕಿರಣ್ ಶ್ರೀನಿವಾಸ್ ಅವರ ಮೊದಲ ಧಾರಾವಾಹಿಯ ಹೆಸರು Paanch 5 Wrongs Make A Right – ಈ ಧಾರಾವಾಹಿ 2013 ರಲ್ಲಿ ಬಂದಿತ್ತು. ಇಲ್ಲಿಯ ವರೆಗೆ ಕನ್ನಡಿಗ ಕಿರಣ್ ಶ್ರೀನಿವಾಸ್ ಅವರು ಸುಮಾರು 10 ಕ್ಕಿಂತ ಹೆಚ್ಚು ಹಿಂದಿ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಿರಣ್ ಶ್ರೀನಿವಾಸ್ ಅವರ ಮೊದಲ ಕನ್ನಡ ಸಿನಿಮಾ ಹಾಗೆ ಸುಮ್ಮನೆ. ಈ ಚಿತ್ರದ ಮೂಲಕ ಕರ್ನಾಟಕದ ಮನೆ ಮಾತಾದರು ಕಿರಣ್. ಇತ್ತೀಚಿಗೆ ಕನ್ನಡದಲ್ಲಿ Niruttara ಎಂಬ ಚಿತ್ರದಲ್ಲಿ ಕಿರಣ್ ಶ್ರೀನಿವಾಸ್ ಅವರು ನಟಿಸಿದ್ದರು. ಕಿರಣ್ ಶ್ರೀನಿವಾಸ್ ಹಾಗು ಸಿಹಿ ಕಹಿ ಚಂದ್ರು ಅವರ ಮಗಳಾದ ಹಿತ ಚಂದ್ರಶೇಖರ್ ಅವರು ಸುಮಾರು 5 ವರ್ಷಗಳಿಂದ ಒಳ್ಳೆಯ ಸ್ನೇಹಿತರು! ಸ್ನೇಹ ಪ್ರೀತಿ ಆಗಿ ಬದಲಾಯಿತು. ಇದೆ ವರ್ಷ ಹಿತ ಚಂದ್ರ ಶೇಖರ್ ಹಾಗು ಕಿರಣ್ ಶ್ರೀನಿವಾಸ್ ಅವರು ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಈಗಲೇ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top