Film News

ಕರ್ನಾಟಕದ ಹುಡುಗಿಯರಿಗೆ ಯುವರತ್ನ ಹಿರೋಯಿನ್ ಹ್ಯಾಷ್ ಟ್ಯಾಗ್ ಚಾಲೆಂಚ್

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ ಯುವರತ್ನ ಚಿತ್ರದ ನಾಯಕಿ ಸಯೇಶಾ ಚಿತ್ರದ ಪವರ್ ಆಫ್ ಯೂತ್ ಹಾಡಿಗೆ ಸೂಪರ್ ಸ್ಟೆಪ್ಸ್ ಹಾಕಿ, ವಿಡಿಯೋ ಶೇರ್ ಮಾಡಿ ಹ್ಯಾಷ್ ಟ್ಯಾಗ್ ಚಾಲೆಂಜ್ ವೊಂದನ್ನು ಹಾಕಿದ್ದಾರೆ.

ಇನ್ನೂ ತಾವು ನೃತ್ಯ ಮಾಡಿರುವ ವಿಡೀಯೋವನ್ನು #PowerOfYouthDanceChallenge, #Yuvarathnaa ಎಂದು ಹ್ಯಾಶ್ ಟ್ಯಾಗ್ ಹಾಕಿ ವಿಡಿಯೋ ಶೇರ್ ಮಾಡಿ ಎಂದು ಕರ್ನಾಟಕದ ಹುಡುಗಿಯರಿಗೆ ಹಾಗೂ ಎಲ್ಲರಿಗೂ ನಿಮ್ಮ ಡ್ಯಾನ್ಸ್ ಪವರ್ ತೋರಿಸಿ, ವಿಡಿಯೋ ಮಾಡಿ ಕಳುಹಿಸಿ ಎಂದಿದ್ದಾರೆ. ಇನ್ನೂ ಪವರ್ ಆಫ್ ಯೂತ್ ಗೀತೆ ಅಪ್ಪು ಅಭಿಮಾನಿಗಳಿಗಾಗಿ ತಂದ ಮೊದಲ ಗೀತೆಯಾಗಿದ್ದು, ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದೆ. ಜೊತೆಗೆ ಈ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಮತಷ್ಟು ಜನರನ್ನು ಸೆಳೆಯುವ ಉದ್ದೇಶದಿಂದ ಚಿತ್ರತಂಡ ಈ ಹೊಸ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಅಂದಹಾಗೆ ಪವರ್ ಆಫ್ ಯೂತ್ ಸಾಂಗ್ ತೆಲುಗು ಭಾಷೆಯಲ್ಲೂ ಸಹ ರಿಲೀಸ್ ಆಗಿದೆ.

ಇನ್ನೂ ಈ ಚಾಲೆಂಜ್ ನಲ್ಲಿ ಉತ್ತಮವಾಗಿ ನೃತ್ಯ ಮಾಡಿದವರಿಗೆ ಚಿತ್ರತಂಡದಿಂದ ಸ್ಪೆಷಲ್ ಹಾಗೂ ಸರ್ಪ್ರೈಸ್ ಗಿಫ್ಟ್ ಇದೆ ಎಂದು ಚಿತ್ರದ ನಿರ್ದೇಶಕ ಸಂತೋಷ್ ಆನಂದ್ ಹಾಗೂ ಪುನಿತ್ ರಾಜ್‌ಕುಮಾರ್ ಸಹ ಬಹಿರಂಗ ಪಡಿಸಿದ್ದಾರೆ. ಇನ್ನೂ ಯುವರತ್ನ ಸಿನೆಮಾ ಬಿಡುಗಡೆಗೆ ಸಿದ್ದವಾಗಿದ್ದು, ಮುಂದಿನ ವರ್ಷ ತೆರೆಮೇಲೆ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ.

Trending

To Top