health-Kannada

Health Tips: ದಿನಕ್ಕೊಂದು ಬಾಳೆಹಣ್ಣು ತಿಂದರೆ ಏನಾಗುತ್ತದೆ?

ದಿನಕ್ಕೊಂದು ಬಾಳೆ ಹಣ್ಣು ತಿಂದರೆ ಏನಾಗುತ್ತದೆ…

ದಿನಕ್ಕೊಂದು ಬಾಳೆಹಣ್ಣು ತಿಂದರೆ ಸಾಕು, ಯಾವ ಕಾಯಿಲೆಯೂ ಬರಲ್ಲ..
ವಿಶ್ವದ ಅತಿ ಹೆಚ್ಚು ಸೇವಿಸಲ್ಪಡುವ ಹಣ್ಣು ಎಂದರೆ ಬಾಳೆಹಣ್ಣು.

ವರ್ಷದ ಯಾವುದೇ ದಿನ ಏನೂ ಇಲ್ಲವೆಂದರೂ ಬಾಳೆಹಣ್ಣು ಮಾತ್ರ ಸಿಕ್ಕಿಯೇ ಸಿಗುತ್ತದೆ ಹಾಗೂ ಸಾಕಷ್ಟು ಅಗ್ಗವೂ ಆಗಿರುವ ಕಾರಣ ಎಲ್ಲರೂ ಸುಲಭವಾಗಿ ಕೊಂಡು ತಿನ್ನಬಹುದಾದ ಹಣ್ಣಾಗಿದೆ.

ಆದರೆ ಇವು ಮಾತ್ರವೇ ಬಾಳೆಹಣ್ಣಿನ ಹೆಗ್ಗಳಿಕೆಗೆ ಕಾರಣವಲ್ಲ ಹಾಗೂ ಬಾಳೆಹಣ್ಣನ್ನು ನಿತ್ಯವೂ ಸೇವಿಸುವ ಪ್ರಯೋಜನವನ್ನು ನಮ್ಮಲ್ಲಿ ಹೆಚ್ಚಿನವರು ಅರಿತಿಲ್ಲ.

ಬಾಳೆಹಣ್ಣು ಪೋಷಕಾಂಶಗಳ ಆಗರವೇ ಆಗಿದ್ದು ಈ ಮೂಲಕ ‘ದಿನಕ್ಕೊಂದು ಸೇಬು ವೈದ್ಯರನ್ನು ದೂರವಿಡುತ್ತದೆ’ ಎಂಬ ವಿದೇಶೀ ನಾಣ್ಣುಡಿಗೆ ಸೆಡ್ಡು ಹೊಡೆಯುವಂತೆ ‘ದಿನಕ್ಕೊಂದು ಬಾಳೆಯೂ ವೈದ್ಯರನ್ನು ದೂರವಿಡುತ್ತದೆ’ ಎಂದು ಹೆಮ್ಮೆ ಪಟ್ಟುಕೊಳ್ಳಬಹುದು.

ಬಾಳೆಹಣ್ಣಿನಲ್ಲಿ ದೈನಂದಿನ ಅಗತ್ಯಕ್ಕೆ ಬೇಕಾಗಿರುವ ಸರಿಸುಮಾರು ಎಲ್ಲಾ ಪೋಷಕಾಂಶಗಳಿವೆ. ವಿಟಮಿನ್ನುಗಳು, ಪೊಟ್ಯಾಶಿಯಂ, ಕರಗುವ ನಾರು ಹಾಗೂ ನೈಸರ್ಗಿಕ ಸಕ್ಕರೆ ಉತ್ತಮ ಪ್ರಮಾಣದಲ್ಲಿದೆ.

ಇದರಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲವೇ ಇಲ್ಲ. ಈ ಕಾರಣಗಳಿಗಾದರೂ ನಿತ್ಯವೂ ಒಂದು ಬಾಳೆಹಣ್ಣನ್ನಾದರೂ ಸೇವಿಸುವುದು ಆರೋಗ್ಯಕರ ಅಭ್ಯಾಸವಾಗಿದೆ.

ಬಾಳೆಹಣ್ಣು ಹಳದಿಯಾದ ಬಳಿಕ ನಿಧಾನವಾಗಿ ಕಪ್ಪು ಚುಕ್ಕೆಯನ್ನು ಮೂಡಿಸಿಕೊಳ್ಳಲು ತೊಡಗುತ್ತವೆ. ಕೆಲವರು ಇದು ಕೊಳೆತಿದೆ ಎಂದು ತಿಳಿದು ಎಸೆಯುತ್ತಾರೆ.

ವಾಸ್ತವವಾಗಿ ಚುಕ್ಕಿ ಬಂದ ಬಳಿಕವೇ ಬಾಳೆಹಣ್ಣನ್ನು ತಿಂದರೆ ಗರಿಷ್ಟ ಪ್ರಯೋಜನವಿದೆ ಹಾಗೂ ಇದು ನೈಸರ್ಗಿಕವಾಗಿ ಹಣ್ಣಾಗಿದೆ ಎಂದು ತಿಳಿಯಬಹುದು.

ಚುಕ್ಕೆ ಬಂದ ಸಿಪ್ಪೆಯ ಬಾಳೆಹಣ್ಣಿನಲ್ಲಿ TNF (Tumor Necrosis Factor) ಎಂಬ ಅಂಶ ಹೆಚ್ಚಿನ ಪ್ರಮಾಣದ್ದಾಗಿದ್ದು ಇವು ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡುತ್ತವೆ ಎಂದು ಕಂಡುಕೊಳ್ಳಲಾಗಿದೆ.

ನಿತ್ಯವೂ ಒಂದು ಹೊತ್ತಿನಲ್ಲಿ ಕನಿಷ್ಟ ಒಂದು ಬಾಳಹಣ್ಣನ್ನಾದರೂ ಸೇವಿಸುತ್ತಾ ಬಂದರೆ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು.
ಈ ಪ್ರಯೋಜನಗಳಲ್ಲಿ ಎಂಟು ಪ್ರಮುಖವಾದುದನ್ನು ಬೋಲ್ಡ್ ಸ್ಕೈ ತಂಡ ಸಂಗ್ರಹಿಸಿದ್ದು ಇಲ್ಲಿ ವಿವರಿಸಲಾಗಿದೆ…

ಎದೆಯುರಿ:

ಒಂದು ವೇಳೆ ನಿಮಗೆ ಎದೆಯುರಿ ಅಥವಾ ಹುಳಿತೇಗು ಮೊದಲಾದ ತೊಂದರೆ ಎದುರಾಗಿದ್ದರೆ ತಕ್ಷಣವೇ ಒಂದು ಬಾಳೆಹಣ್ಣು ತಿಂದರೆ ಇದು ಶಮನಗೊಳ್ಳುತ್ತದೆ.

ಮಲಬದ್ಧತೆ :

ಒಂದು ವೇಳೆ ನಿಮಗೆ ಸತತವಾಗಿ ಮಲಬದ್ಧತೆಯ ತೊಂದರೆ ಇದ್ದರೆ ನಿತ್ಯವೂ ಒಂದು ಬಾಳೆಹಣ್ಣನ್ನು ಸೇವಿಸುವ ಮೂಲಕ ಈ ತೊಂದರೆಯನ್ನು ಇಲ್ಲವಾಗಿಸಬಹುದು. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕರಗುವ ನಾರು ತ್ಯಾಜ್ಯ ವಿಸರ್ಜನಾ ಕ್ರಿಯೆಯನ್ನು ಸುಲಭವಾಗಿಸುತ್ತದೆ.

ಶಕ್ತಿಯನ್ನು ಒದಗಿಸುತ್ತದೆ :

ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ನುಗಳು, ಖನಿಜಗಳು, ಕರಗುವ ನಾರು ಹಾಗೂ ಪೊಟ್ಯಾಶಿಯಂ ಇವೆ. ಇವೆಲ್ಲವೂ ದೇಹದ ಶಕ್ತಿಯನ್ನು ಹೆಚ್ಚಿಸಲು ನೆಅವಾಗುತ್ತವೆ ಹಾಗೂ ಹೊಟ್ಟೆಯನ್ನು ಹೆಚ್ಚು ಹೊತ್ತು ತುಂಬಿರುವ ಭಾವನೆ ಮೂಡಿಸುತ್ತವೆ.

ಅಧಿಕ ರಕ್ತದೊತ್ತಡ :

ಬಾಳೆಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪೊಟ್ಯಾಶಿಯಂ ಹಾಗೂ ಕಡಿಮೆ ಪ್ರಮಾಣದಲ್ಲಿರುವ ಸೋಡಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತವೆ ಹಾಗೂ ತನ್ಮೂಲಕ ಹೃದಯ ಸ್ತಂಭನದ ಸಾಧ್ಯತೆಯನ್ನು ಕಡಿಮೆಗೊಳಿಸುತ್ತವೆ.

ಜೀರ್ಣಕ್ರಿಯೆ ಸುಲಭಗೊಳಿಸುತ್ತದೆ:

ಬಾಳೆಹಣ್ಣಿನಲ್ಲಿ ಕರಗುವ ನಾರು ಮತ್ತು ಪೊಟ್ಯಾಶಿಯಂ ಹೆಚ್ಚಿನ ಪ್ರಮಾಣದಲ್ಲಿವೆ. ಇವು ಜೀರ್ಣಕ್ರಿಯೆ ಸುಲಭಗೊಳಿಸಲು ನೆರವಾಗುತ್ತವೆ.

ನಿತ್ಯವೂ ಒಂದು ಬಾಳೆಹಣ್ಣನ್ನು ವಿಶೇಷವಾಗಿ ಊಟದ ಬಳಿಕ, ಸೇವಿಸುವ ಮೂಲಕ, ಜೀರ್ಣಕ್ರಿಯೆ ಸುಲಭವಾಗಿ ಸಾಗುತ್ತದೆ.

ರಕ್ತಹೀನತೆ ಕಡಿಮೆ ಮಾಡುತ್ತದೆ:

ಬಾಳೆಹಣ್ಣಿನಲ್ಲಿರುವ ಕಬ್ಬಿಣ ಪ್ರಮಾಣ ರಕ್ತದ ಹೀಮೋಗ್ಲೋಬಿನ್ ಕಣಗಳನ್ನು ಹೆಚ್ಚು ಹೆಚ್ಚಾಗಿ ಉತ್ಪಾದಿಸಲು ಪ್ರಚೋದನೆ ನೀಡುತ್ತವೆ. ಈ ಮೂಲಕ ರಕ್ತಹೀನತೆಯಿಂದ ದೇಹವನ್ನು ರಕ್ಷಿಸುತ್ತದೆ.

ಹೊಟ್ಟೆಯ ಹುಣ್ಣುಗಳಿಂದ ಶಮನ ಒದಗಿಸುತ್ತದೆ:

ಬಾಳೆಹಣ್ಣಿನ ಪೋಷಕಾಂಶಗಳು ಕ್ಷಾರೀಯವಾಗಿದ್ದು ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಹೊಟ್ಟೆಯಲ್ಲಿರುವ ಜೀರ್ಣರಸದ ಪ್ರಭಾವ ಹೆಚ್ಚಾಗಿ ಹೊಟ್ಟೆಯ ಒಳಪದರದಲ್ಲಿ ಯಾವುದೇ ಉರಿಯೂತ ಎದುರಾಗಿದ್ದರೆ ಅಥವಾ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಹುಣ್ಣುಗಳಾಗಿದ್ದರೆ ಬಾಳೆಹಣ್ಣಿನ ಪೋಷಕಾಂಶಗಳು ಈ ತೊಂದರೆಗಳಿಂದ ರಕ್ಷಿಸಿ ಶೀಘ್ರವಾಗಿ ಗುಣಪಡಿಸಲು ನೆರವಾಗುತ್ತವೆ.

ಆರೋಗ್ಯಕರ ಕಣ್ಣುಗಳು:

ಬಾಳೆಹಣ್ಣಿನಲ್ಲಿ ವಿಟಮಿನ್ ಎ ಉತ್ತಮ ಪ್ರಮಾಣದಲ್ಲಿದೆ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅತಿ ಅಗತ್ಯವಾದ ಪೋಷಕಾಂಶವಾಗಿದ್ದು ಕಣ್ಣಿನ ಪೊರೆ ಹಾಗೂ ವಿಶೇಷವಾಗಿ ಅಕ್ಷಿಪಟಲವನ್ನು ರಕ್ಷಿಸುತ್ತದೆ.

ಖಿನ್ನತೆಯನ್ನು ಕಡಿಮೆಗೊಳಿಸುತ್ತದೆ:

ಬಾಳೆಹಣ್ಣಿನಲ್ಲಿರುವ ಪೋಷಕಾಂಶಗಳಲ್ಲಿ ಟ್ರಿಪ್ಟೋಫಾನ್ (tryptophan) ಸಹಾ ಒಂದು. ಇದು ರಕ್ತದಲ್ಲಿ ಸೇರಿದ ಬಳಿಕ ರಾಸಾಯನಿಕ ಪ್ರತಿಕ್ರಿಯೆಗೊಂಡು ಸೆರೋಟೋನಿನ್ ಎಂಬ ರಸದೂತವಾಗಿ ಮಾರ್ಪಾಡು ಹೊಂದುತ್ತದೆ.

ಈ ಸೆರೋಟೋನಿನ್ ಒಂದು ನ್ಯೂರೋಟ್ರಾನ್ಸ್ ಮಿಟರ್ (ಮೆದುಳನ್ನು ಶಾಂತಗೊಳಿಸುವ ರಸದೂತ) ಆಗಿದ್ದು ಮನಸ್ಸನ್ನು ಶಾಂತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದರಿಂದ ಖಿನ್ನತೆಗೆ ಒಳಗಾಗಿದ್ದ ಮನ ಪ್ರಶಾಂತಗೊಂಡು ಮತ್ತೆ ಸಹಜಸ್ಥಿತಿಗೆ ಬರಲು ಸಹಕರಿಸುತ್ತದೆ.

ಮೂತ್ರದ ಮೂಲಕ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಬಹುದು:

ಆಹಾರದ ಮೂಲಕ ಲಭ್ಯವಾಗುವ ಕ್ಯಾಲ್ಸಿಯಂ ಮೂಳೆಗಳು ಹೀರಿಕೊಳ್ಳುವಂತಾಗಲು ಬಾಳೆಹಣ್ಣು ಸಹಕರಿಸುತ್ತದೆ.

ಮೂಳೆಗಳು ಗಟ್ಟಿಗೊಳ್ಳಲು ಜೇನು ಸೇರಿಸಿದ ಹಾಲು ಮತ್ತು ಬಾಳೆಹಣ್ಣನ್ನು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ಕ್ಯಾಲ್ಸಿಯಂ ಸೋರಿಹೋಗುವುದನ್ನು ತಪ್ಪಿಸಿ ಮೂಳೆಗಳ ದೃಢತೆ ಹೆಚ್ಚಿಸಬಹುದು.

ರಕ್ತದೊತ್ತಡ ಕಡಿಮೆಗೊಳಿಸಲು:

ನೆರವಾಗುತ್ತದೆ ಬಾಳೆಹಣ್ಣಿನಲ್ಲಿ ಅತಿಕಡಿಮೆ ಉಪ್ಪು ಮತ್ತು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ ಇದೆ. ಈ ಪ್ರಮಾಣವನ್ನು FDA(Food and Drug administration) ಇಲಾಖೆ ಅಂಗೀಕರಿಸಿದ್ದು ರಕ್ತದೊತ್ತಡ ಕಡಿಮೆಗೊಳಿಸುವಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ಹೃದಯ ಸ್ತಂಭನೆಯ ಸಾಧ್ಯತೆಗಳನ್ನು ಕಡಿಮೆಗೊಳಿಸುತ್ತದೆ.

ರಕ್ತದೊತ್ತಡ ಕಡಿಮೆಗೊಳಿಸಲು ನೆರವಾಗುತ್ತದೆ ನಮ್ಮ ಜೀರ್ಣರಸದಲ್ಲಿರುವ ಅಂಶಗಳಲ್ಲಿ ಪೆಕ್ಟಿನ್ ಸಹಾ ಒಂದು. ಇದು ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ.

ಹೆಚ್ಚುವರಿ ಪೆಕ್ಟಿನ್ ಆಹಾರದಲ್ಲಿನ ವಿಷಕಾರಿ ವಸ್ತುಗಳನ್ನು ಒಡೆದು ತ್ಯಾಜ್ಯರೂಪದಲ್ಲಿ ದೇಹದಿಂದ ಹೊರಹಾಕಲು ಸಹಕಾರಿಯಾಗಿದೆ. ಜೊತೆಗೇ ದೇಹ ಅರಗಿಸಿಕೊಳ್ಳಲಾರದ ಖನಿಜಗಳನ್ನು ನಿವಾರಿಸಲೂ ಬಳಕೆಯಾಗುತ್ತದೆ.

ಆಹಾರದ ಇತರ ಪೋಷಕಾಂಶಗಳನ್ನು ಹೀರಿಕೊಳ್ಳಲು ನೆರವಾಗುತ್ತದೆ:

ಬಾಳೆಹಣ್ಣಿನಲ್ಲಿರುವ ಕರಗುವ ನಾರು ಹೊಟ್ಟೆಯಲ್ಲಿ ಕರಗಿ ಜೀರ್ಣಕ್ರಿಯೆಗೆ ಅವಶ್ಯವಿರುವ ಕೆಲವು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ನೆರವಾಗುತ್ತದೆ.

prebiotic ಎಂದು ಕರೆಯಲಾಗುವ ಈ ವಿದ್ಯಮಾನದಿಂದ ಇತರ ಆಹಾರಗಳ ಮೂಲಕ ಲಭ್ಯವಾದ, ಸುಲಭವಾಗಿ ಜೀರ್ಣವಾಗದ ಆಹಾರವನ್ನು ಈ ಬ್ಯಾಕ್ಟೀರಿಯಾಗಳು ಜೀರ್ಣಿಸಲು ನೆರವಾಗುತ್ತದೆ.

ಅಲ್ಲದೇ ಜೀರ್ಣಕ್ರಿಯೆಗೆ ನೆರವಾಗುವ ಇತರ ಎಂಜೈಮು(enzymes)ಗಳನ್ನು ಉತ್ಪಾದಿಸುತ್ತದೆ:

ಈ ಎಂಜೈಮುಗಳು ಹೆಚ್ಚಿನ ಪ್ರೋಟೀನ್ ಯುಕ್ತ ಆಹಾರ (ಉದಾಹರಣೆಗೆ ಮಾಂಸ) ಗಳನ್ನು ಜೀರ್ಣಿಸಿಕೊಳ್ಳಲು ಅಗತ್ಯವಾಗಿವೆ. ಅಲ್ಸರ್ ರೋಗಿಗಳು ತಿನ್ನಬಹುದಾದ ಏಕೈಕ ಆಹಾರ ಕರುಳುಗಳ ಒಳಗೆ ಹುಣ್ಣು ಅಥವಾ ಅಲ್ಸರ್ ಆಗಿರುವ ರೋಗಿಗಳಿಗೆ ಬಾಳೆಹಣ್ಣು ಬಿಟ್ಟರೆ ಬೇರೆ ಯಾವ ಆಹಾರವನ್ನೂ ನೀಡುವಂತಿಲ್ಲ.

ಏಕೆಂದರೆ ಬಾಳೆಹಣ್ಣು ಮಾತ್ರ ಕರುಳುಗಳಲ್ಲಿ ಹಾಯುವಾಗ ಹುಣ್ಣುಗಳಿಗೆ ನಷ್ಟ ಮಾಡುವ ಬದಲಿಗೆ ಬಾಳೆಹಣ್ಣು ಈ ಹುಣ್ಣುಗಳನ್ನು ಸವರಿಕೊಂಡು ಹೋದ ಬಳಿಕ ಒಂದು ಪದರವನ್ನು ನಿರ್ಮಿಸಿ ಜಠರದ ಆಮ್ಲೀಯ ರಸಗಳೂ ಹುಣ್ಣುಗಳ ಮೇಲೆ ಪ್ರಭಾವ ಬೀರದಂತೆ ನೋಡಿಕೊಳ್ಳುತ್ತದೆ.

ಗರ್ಭಾವಸ್ಥೆಯ ವಾಕರಿಕೆಯಿಂದ ರಕ್ಷಿಸುತ್ತದೆ:

ಗರ್ಭಿಣಿಯರಿಗೆ ಪ್ರಥಮ ಮೂರು ತಿಂಗಳ ಅವಧಿಯಲ್ಲಿ ವಾಂತಿ ಮತ್ತು ವಾಕರಿಕೆ ಸಹಜ. ಇದನ್ನು ಕಡಿಮೆಗೊಳಿಸಲು ಎರಡು ಹೊತ್ತಿನ ಆಹಾರ ಸೇವನೆಯ ನಡುವಣ ಸಮಯಲ್ಲಿ.

ಒಂದು ಬಾಳೆಹಣ್ಣು ತಿಂದರೆ ವಾಕರಿಕೆಗೆ ಕಾರಣವಾಗುವ ಕಣಗಳನ್ನು ನಿವಾರಿಸಿ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಸೂಕ್ತಪ್ರಮಾಣದಲ್ಲಿರುವಂತೆ ನೋಡಿಕೊಂಡು ವಾಂತಿ ಮತ್ತು ವಾಕರಿಕೆಯಿಂದ ರಕ್ಷಿಸುತ್ತದೆ.

Trending

To Top