Film News

ಸಿನೆಮಾ ರಂಗದಲ್ಲಿ 35 ವರ್ಷ ಪೂರೈಸಿದ ಶಿವಣ್ಣ: ಕಾಮನ್ ಡಿಪಿ ರಿಲೀಸ್

ಬೆಂಗಳೂರು: ಚಂದನವನದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ರವರು ಸಿನಿರಂಗದಲ್ಲಿ 35 ವರ್ಷ ಪೂರೈಸಿದ್ದು, ಅಭಿಮಾನಿಗಳಿಂದ ಹಾಗೂ ಗಣ್ಯರಿಂದ ಶುಭಾಷಯಗಳು ಹರಿದುಬರುತ್ತಿದೆ. ಇದರ ಜೊತೆಗೆ ಶಿವಣ್ಣನವರ ಕಾಮನ್ ಡಿ.ಪಿ ಯೊಂದು ಬಿಡುಗಡೆಯಾಗಿದ್ದು ವೈರಲ್ ಆಗುತ್ತಿದೆ.

ಸ್ಯಾಂಡಲ್‌ವುಡ್‌ನಲ್ಲಿ ಬಾಕ್ಸ್ ಆಫಿಸ್ ಬ್ರಹ್ಮ ಎಂತಲೇ ಕರೆಯುವ ಶಿವರಾಜ್‌ಕುಮಾರ್ ರವರು ಮೂರುವರೆ ದಶಕಗಳ ಕಾಲ ಸಿನಿರಂಗದಲ್ಲಿ ಅಪಾರ ಸೇವೆ ಸಲ್ಲಿಸಿದ್ದು, ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿವಣ್ಣ ರವರ ಆಪ್ತ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್ ರವರು ಶಿವರಾಜ್‌ಕುಮಾರ್ ರವರ ಕಾಮನ್ ಡಿ.ಪಿ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ. ಈ ಪೊಟೋವನ್ನು ಸಿನಿರಂಗದ ಗಣ್ಯರು ಹಾಗೂ ಅಭಿಮಾನಿಗಳು ಶೇರ್ ಮಾಡುತ್ತಿದ್ದು ವೈರಲ್ ಆಗಿದೆ. ಶ್ರೀಕಾಂತ್ ರವರಿಗೂ ಮೊದಲೆ ನಿರ್ದೇಶಕ ಸಿಂಪಲ್ ಸುನಿ ಹಾಗೂ ಅಲೋಕ್ ಸಹ ಶಿವಣ್ಣನವರ ಕಾಮನ್ ಡಿಪಿ ಹಂಚಿಕೊಂಡಿದ್ದರು.

ಕಳೆದ 1986 ರಲ್ಲಿ ಆನಂದ್ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್ ಮೊದಲ ಸಿನೆಮಾದಲ್ಲಿಯೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಪಡೆದುಕೊಂಡರು. ಅಂದಿನಿಂದ ಸುಮಾರು 125ಕ್ಕೂ ಅಧಿಕ ಸಿನೆಮಾಗಳಲ್ಲಿ ನಟಿಸಿದ್ದಾರೆ ಶಿವಣ್ಣ. ಅನೇಕ ಸಿನೆಮಾಗಳಲ್ಲಿ ಸೋಲು, ಗೆಲುವುನ್ನು ಕಂಡಿರುವ ಶಿವರಾಜ್‌ಕುಮಾರ್ ರವರನ್ನು ಬಾಕ್ಸ್ ಆಫೀಸ್ ಬ್ರಹ್ಮ ಎಂತಲೂ ಕರೆಯುತ್ತಾರೆ.

ಸದ್ಯ ಸಾಲು ಸಾಲು ಸಿನೆಮಾಗಳಲ್ಲಿ ಶಿವರಾಜ್ ಕುಮಾರ್ ರವರು ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಶಿವಣ್ಣ ಅಭಿನಯದ ಭಜರಂಗಿ-೨ ಚಿತ್ರ ತೆರೆಗೆ ಬರಲಿದ್ದು, ಅಭಿಮಾನಿಗಳು ಈ ಚಿತ್ರದ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ.

Trending

To Top