ಹರ್ಷಿಕಾ ಪೂಣಚ್ಚ ರವರ ಪ್ರೇಮಲೋಕ ಹಾಡಿನ ಮರುಸೃಷ್ಟಿಗೆ ಫಿದಾ ಆದ್ರು ಜೂಹಿ ಚಾವ್ಲಾ…..

ಕನ್ನಡ ಸಿನಿರಂಗದಲ್ಲಿ 80ರ ದಶಕದಲ್ಲಿ ಪ್ರೇಮಿಗಳ ಬಾಯಲ್ಲಿ ಬರುತ್ತಿದ್ದ ಸಿನೆಮಾ ಒಂದೇ ಅದು ಪ್ರೇಮಲೋಕ ಸಿನೆಮಾ. ಕ್ರೇಜಿಸ್ಟಾರ್‍ ರವಿಚಂದ್ರನ್ ಹಾಗೂ ಬಾಲಿವುಡ್ ಬೆಡಗಿ ಜೂಹಿ ಚಾವ್ಲಾ ಕಾಂಬಿನೇಷನ್ ನಲ್ಲಿ ಬಂದ ಈ ಸಿನೆಮಾ ಸಖತ್ ಸಕ್ಸಸ್ ಆಗಿತ್ತು. ಅದರಲ್ಲೂ ಸಿನೆಮಾದಲ್ಲಿನ ಹಾಡುಗಳು ಇಂದಿಗೂ ಸಹ ಕ್ರೇಜ್ ಕಳೆದುಕೊಂಡಿಲ್ಲ. ಇದೀಗ ಈ ಸಿನೆಮಾದ ಹಾಡು ಮತ್ತೊಮ್ಮೆ ಸುದ್ದಿಯಾಗಿದೆ.

ಪ್ರೇಮಲೋಕ ಸಿನೆಮಾದ ಹಾಡುಗಳಿಗೆ ಸಂಗೀತ ಮಾಂತ್ರಿಕ ಹಂಸಲೇಖ ಸಂಗೀತ ನೀಡಿದ್ದರು. ಇಂದಿಗೂ ಸಹ ಈ ಹಾಡುಗಳು ಫೇಮಸ್ ಆಗಿದೆ. ಪ್ರೇಮಲೋಕ ಸಿನೆಮಾದಲ್ಲಿ ಪ್ರತಿಯೊಂದು ಹಾಡುಗಳು ಸಹ ಪುಲ್ ಪಾಪ್ಯುಲರ್‍ ಆಗಿವೆ. ಅದರಲ್ಲೂ ಹಲೋ ಮೈ ಲವ್ಲಿ ಲೇಡಿ ಎಂಬ ಸಾಂಗ್ ಅಂತೂ ಜೋರಾಗಿಯೇ ಹವಾ ಕ್ರಿಯೇಟ್ ಮಾಡಿತ್ತು. ಅಷ್ಟೇ ಅಲ್ಲದೇ ಅನೇಕ ಕಾರ್ಯಕ್ರಮಗಳಲ್ಲಿ ಸಹ ಈ ಹಾಡು ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಈ ಸಿನೆಮಾದ ಹಾಡನ್ನು ನಟಿ ಹರ್ಷಿಕಾ ಪೂಣಚ್ಚ ಮರುಸೃಷ್ಟಿ ಮಾಡಿದ್ದಾರೆ.  ಇನ್ನೂ ಈ ವಿಡಿಯೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹರಿಬಿಟ್ಟಿದ್ದು, ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಹಾಡನ್ನು ಪ್ರೇಮಲೋಕ ಸಿನೆಮಾದ ನಟಿ ಜೂಹಿ ಚಾವ್ಲಾ ಸಹ ಫಿದಾ ಆಗಿದ್ದಾರೆ. ಈ ವಿಚಾರ ತಿಳಿದು ಹರ್ಷಿಕಾ ಪುಲ್ ಹ್ಯಾಪಿ ಆಗಿದ್ದಾರಂತೆ.

ಕಳೆದ ಎರಡು ದಿನಗಳ ಹಿಂದೆಯಷ್ಟೆ ನಟಿ ಹರ್ಷಿಕಾ ತಮ್ಮ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ಹಲೋ ಮೈ ಲವ್ಲಿ ಲೇಡಿ ಹಾಡಿಗೆ ಮರುಸೃಷ್ಟಿ ಮಾಡಿ ಅದನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿದ್ದರು. ತಾಯ್ತ ಎಂಬ ಸಿನೆಮಾ ಮೂಲಕ ಪ್ರೇಮಲೋಕ ಮರಳಿ ಬರುತ್ತಿದೆ ಎಂದು, ಈ ಹಾಡಿನಲ್ಲಿ ನನಗೆ ಜೂಹಿ ಚಾವ್ಲಾ ಮೇಡಂ ರವರು ತುಂಬಾ ಇಷ್ಟವಾದರು ಎಂದು ಶೀರ್ಷಿಕೆ ಬರೆದು ಶೇರ್‍ ಮಾಡಿದ್ದರು. ಇದರ ಜೊತೆಗೆ ಜೂಹಿ ಚಾವ್ಲಾ ರವರನ್ನು ಸಹ ನಟಿ ಹರ್ಷಿಕಾ ಟ್ಯಾಗ್ ಮಾಡಿದ್ದರು.  ಈ ವಿಡಿಯೋ ನೋಡಿದ ನಟಿ ಜೂಹಿ ಚಾವ್ಲಾ ಲವ್ ಎಮೋಜಿ ನೀಡಿ ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಹರ್ಷಿಕಾ ಪುಲ್ ಖುಷಿಯಾಗಿದ್ದಾರೆ. ಅವರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಇನ್ನೂ ಹರ್ಷಿಕಾ ಪೂಣಚ್ಚ ವಿಡಿಯೋ ಪ್ರತಿಕ್ರಿಯೆ ಕೊಟ್ಟಿದ್ದು ತುಂಬಾ ಸಂತೋಷದ ವಿಚಾರ ಈ ದಿನವನ್ನು ನನ್ನದಾಗಿಸಿದ್ದೀರಾ ಮೆಡಂ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಇಂದಿಗೂ ಸಹ ಪ್ರೇಮಲೋಕ ಸಿನೆಮಾದ ಹಾಡುಗಳು ಸಿಕ್ಕಾಪಟ್ಟೆ ಫೇಮಸ್ ಆಗಿದೆ. ಅನೇಕರಿಗೆ ಈ ಹಾಡುಗಳಂದರೇ ಪಂಚಪ್ರಾಣ ಈಗಲೂ ಸಹ ರವಿಚಂದ್ರನ್ ಅಭಿಮಾನಿಗಳ ಬಾಯಲ್ಲಿ ಪ್ರೇಮಲೋಕ ಹಾಡುಗಳು ಬಾಯಲ್ಲೆ ಇರುತ್ತದೆ. ಇನ್ನೂ ಹರ್ಷಿಕಾ ಪೂಣಚ್ಚ ಪ್ರೇಮಲೋಕ ಸಿನೆಮಾದ ಹಲೋ ಮೈ ಲವ್ಲಿ ಲೇಡಿ ಎಂಬ ಹಾಡಿನ ಮರುಸೃಷ್ಟಿಗೆ ಸೋಷಿಯಲ್ ಮಿಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೊತೆಗೆ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಕ್ರಿಯೇಟ್ ಮಾಡಿದೆ.

Previous articleಟ್ರೋಲ್ ಆದ ನಟಿ ದೀಪಿಕಾ ಪಡುಕೋಣೆ.. ತಾನು ಧರಿಸಿದ ಡ್ರೆಸ್ ನಿಂದ ಟ್ರೋಲ್….
Next articleಬಾಲಿವುಡ್ ನಟಿಯರನ್ನೂ ಮೀರಿ ಟಾಪ್ ರೇಟಿಂಗ್ಸ್ ಪಡೆದುಕೊಂಡ ನಟಿ ಸಮಂತಾ….