Film News

ಹರ್ಭಜನ್ ಹಾಗೂ ಅರ್ಜುನ್ ಸರ್ಜಾ ಅಭಿನಯದ ಮೂವಿ ಟೀಸರ್ ಬಿಡುಗಡೆ

ಮುಂಬೈ: ಖ್ಯಾತ ಕ್ರಿಕೆಟಿಗ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಹಾಗೂ ಖ್ಯಾತ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅಭಿನಯದ ಫ್ರೆಂಡ್‌ಶಿಪ್ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರ ಹರ್ಭಜನ್ ನಾಯಕನಾಗಿ ನಟಿಸಿರುವ ಮೊದಲನೇ ಚಿತ್ರವಾಗಿದೆ.

ಟೀಮ್ ಇಂಡಿಯಾದ ಗ್ರೇಟ್ ಬೌಲರ್ ಆಗಿರುವ ಹರ್ಭಜನ್ ಸಿಂಗ್ ಇದೀಗ ಸಿನೆಮಾ ರಂಗಕ್ಕೆ ಎಂಟ್ರಿ ಕೊಟಿದ್ದು, ಮೊದಲ ಬಾರಿಗೆ ನಟನಾಗಿ ಅಭಿನಯಿಸಿದ್ದಾರೆ. ಆಕ್ಷನ್, ಕಾಮಿಡಿ ಆಲ್‌ರೌಂಡರ್ ಆಗಿ ಹರ್ಭಜನ್ ಸಿಂಗ್ ಮಿಂಚಿದ್ದಾರೆ. ಇನ್ನೂ ಸ್ವತಃ ಹರ್ಭಜನ್ ಸಿಂಗ್ ರವರೇ ತಮ್ಮ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ ಈ ಚಿತ್ರ ತಮಿಳು, ಹಿಂದಿ, ತೆಲುಗು ಭಾಷೆಯಲ್ಲಿ ರಿಲೀಸ್ ಆಗಲಿದ್ದು, ಜಾನ್ ಪಾಲ್ ರಾಜ್ ಹಾಗೂ ಶಾಮ್ ಸೂರ್ಯ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಮುಖ್ಯವಾಗಿ ಈ ಚಿತ್ರದಲ್ಲಿ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು ಸಹ ಪ್ರಮುಖ ಪಾತ್ರದಲ್ಲಿ ಅಭಿನಯಸಿದ್ದಾರೆ. ಇವರೊಂದಿಗೆ ಬಿಗ್‌ಬಾಸ್ ಸೀಸನ್-೩ ಖ್ಯಾತಿಯ ಸತೀಶ್, ಲೋಸ್ಲಿಯಾ ಮರಿಯಸೇಸನ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಬಣ್ಣ ಹಚ್ಚಿದ್ದಾರೆ.

Trending

To Top