News

(video)ಯುಗಾದಿ ಸಡಗರದಲ್ಲಿ ಅಣ್ಣಾವ್ರ ಹಾಡನ್ನು ಹಾಡಿ ಮೋಡಿ ಮಾಡಿದ ಹನುಮಂತ! ವಿಡಿಯೋ ವೈರಲ್

hanumanta1

ಇತ್ತೀಚಿಗೆ ಅಷ್ಟೇ ಝೀ ಕನ್ನಡ ಸ ರೇ ಗ ಮ ಪ ಲಿಟಲ್ ಚಾಂಪ್ ಷೋ ಶುರು ಆಗಿದೆ. ಈ ಶೋನ ಆಡಿಷನ್ ಸದ್ಯ ನಡೆಯುತ್ತಾ ಇದೆ. ಕರ್ನಾಟಕದ ಮೂಲೆ ಮೂಲೆ ಇಂದ ಅದ್ಭುತ ಪುಟಾಣಿ ಪ್ರತಿಭೆಗಳು ಝೀ ಕನ್ನಡದ ಸ ರೇ ಗ ಮ ಪ ದ ಮಂಚಕ್ಕೆ ಬಂದಿದ್ದಾರೆ. ಈ ಭಾರಿ ಪುಟಾಣಿ ಗಳಲ್ಲಿ ಕನ್ನಡಿಗರ ಗಮನ ಸೆಳೆದಿದ್ದು, ಅಂಧೆ ಆದ ಸಂಗೀತ ಹಾಗು ಧಾರವಾಡದ ಸಾಕ್ಷಿ. ಇದಲ್ಲದೆ ಮತ್ತೊಬ್ಬ ಸ್ಪರ್ದಿ ಆದ ಪುಟಾಣಿ ಅಪ್ರಮೇಯ ಸಕತ್ ಹಾಗಿ ಹಾಡನ್ನು ಹೇಳಿ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾನೆ. ಇದಲ್ಲದೆ ಮೊನ್ನೆ ಯುಗಾದಿಯ ಸಂಭ್ರಮದಲ್ಲಿ, ಝೀ ಕನ್ನಡದ ವೇದಿಕೆಯಲ್ಲಿ ಹನುಮಂತ ಬಂದು ನಮ್ಮ ಅಣ್ಣಾವ್ರ ಹಾಡನ್ನು ಹಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ! ಹನುಮಂತನ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಗಾಯಕ ಹನುಮಂತ ಯಾರಿಗೆ ಗೊತ್ತಿಲ ಹೇಳಿ! ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಇಡೀ ಕರ್ನಾಟಕದ ಮನೆ ಮಾತಾಗಿ ಕೊನೆಗೆ ಝೀ ಕನ್ನಡದಲ್ಲಿ ಪ್ರಸಾರವಾಗಿದ್ದ ಸ ರೇ ಗ ಮ ಪ ದಲ್ಲಿ ಅದ್ಭುತ ವಾಗಿ ತನ್ನ ಪ್ರತಿಭೆಯನ್ನು ತೋರಿಸಿ ಈಗ ಸಿನಿಮಾ ದಲ್ಲಿ ಬಹಳಷ್ಟು ಅವಕಾಶ ಗಳನ್ನೂ ಗಿಟ್ಟಿಸಿಕೊಂಡಿದ್ದಾನೆ. ಇತ್ತೀಚಿಗೆ ಹನುಮಂತ ಹಾವೇರಿ ಜಿಲ್ಲೆಯಲ್ಲಿ ಒಂದು ಹಾಡಿನ ಷೋ ಕೊಡಲು ಹೋಗಿದ್ದನು, ಈ ಸಮಯದಲ್ಲಿ ಯಾರೋ ಕಳ್ಳರು ಹನುಮಂತನ ಮೊಬೈಲ್ ಅನ್ನು ಕದ್ದಿದ್ದಾರೆ. ಇದ್ದರಿಂದ ಹನುಮಂತನಿಗೆ ಬಹಳ ದುಃಖವಾಗಿದ್ದು , ತಾನು ಸ ರೇ ಗ ಮ ಪ ದಲ್ಲಿ ಬಂದ ಹಣದಿಂದ ಆ ಮೊಬೈಲ್ ಖರೀದಿ ಮಾಡಿದ್ದೆ ಎಂದು ಹೇಳಿ ದುಃಖದಲ್ಲಿ ಇದ್ದಾನೆ. ಇದಲ್ಲದೆ ದಯವಿಟ್ಟು ಫೋನ್ ನೀವೇ ಇಟ್ಟುಕೊಳ್ಳಿ SIM ನನಗೆ ಕೊಡಿ ಎಂದು ಗೋಗರಿದಿದ್ದಾನೆ! ಮೊಬೈಲ್ ಕಳೆದುಕೊಂಡು ಹನುಮಂತ ಏನ್ ಹೇಳಿದ್ದಾನೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಟ್ಯಾಲೆಂಟ್ ಇರುವವರಿಗೆ ಯಾವತ್ತಾದರೂ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ! ನಿಮ್ಮಲ್ಲಿ ದೃಢ ಮನಸ್ಸಿರಬೇಕು, ಕಷ್ಟ ಪಡಬೇಕು! ಒಂದು ದಿನ ಒಳ್ಳೇದ್ ಆಗುತ್ತದೆ! ಕನ್ನಡದಲ್ಲಿ ಇತ್ತೀಚಿಗೆ ಕುರಿ ಕಾಯುವ ಹುಡುಗ ಹನುಮಂತ ಹಾಗು ಜೂನಿಯರ್ ದರ್ಶನ್ ಅವಿನಾಶ್ ಅವರು ರಾತ್ರೋ ರಾತ್ರಿ ಇಡೀ ಕರ್ನಾಟಕದಲ್ಲಿ ಫೇಮಸ್ ಆದ ಉದಾಹರಣೆಗಳು! ಸುಮಾರು 3 ತಿಂಗಳ ಹಿಂದೆ ಹನುಮಂತ ಎಂಬ ಯುವಕ ತಾನು ಕುರಿ ಕಾಯುವಾಗ ಒಂದು ಹಾಡನ್ನು ಹಾಡಿ ಅದರ ಸೆಲ್ಫಿ ವಿಡಿಯೋ ಮಾಡಿ ಅದನ್ನು ಫೇಸ್ಬುಕ್ ನಲಿ ಹಾಕಿದ್ದನು. ಈ ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು. ಹನುಮಂತ ಕೇವಲ ಒಂದು ದಿನದಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಹೀರೋ ಆಗಿದ್ದನು. ಇದಲ್ಲದೆ ಇಡೀ ಕರ್ನಾಟಕದ ಮನೆ ಮಾತಾದನು. ಇದನ್ನು ನೋಡಿ ಜಿ ವಾಹಿನಿ ಅವರು ಹನುಮಂತನಿಗೆ ಕರೆದು ಸ ರೇ ಗ ಮ ಪ ದಲ್ಲಿ ಒಂದು ಅವಕಾಶ ಕೊಟ್ಟರು. ಇದಾದ ಮೇಲೆ ಹನುಮಂತನು ಹಿಂದುರುಗಿ ನೋಡಲೇ ಇಲ್ಲ! ಪ್ರತೀ ವಾರ ಒಂದರಕ್ಕಿಂತ ಒಂದು ಅದ್ಭುತ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಾ ಬರುತ್ತಿದ್ದಾನೆ. ಸದ್ಯ ಹನುಮಂತ ನಿಗೆ ಕನ್ನಡ ಚಿತ್ರಗಳಲ್ಲಿ ಹಾಡಲು ಅವಕಾಶಗಳು ಬರುತ್ತಿವೆ. ಈಗಾಗಲೇ ನಮ್ಮ ಯೋಗರಾಜ್ ಭಟ್ಟರು ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅವರ ಸಿನೆಮಾಗೆ ಹಾಡಲು ಹನುಮಂತನಿಗೆ ಅವಕಾಶ ಕೊಟ್ಟಿದ್ದಾರೆ.
ಇನ್ನೊಂದೆಡೆ ಜೂನಿಯರ್ ದರ್ಶನ್ ಅವಿನಾಶ್! ಅವಿನಾಶ್ ಒಬ್ಬ ಬಹಲ್ ಟ್ಯಾಲೆಂಟ್ ಇರುವ ಹುಡುಗ ಹಾಗು ಇವನು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಹಳ ದಿನಗಳಿಂದ ಅನುಕರಣೆ ಮಾಡುತ್ತಿದ್ದಾನೆ. ಈತ ಮೊದಲು ತನ್ನ ಫೇಸ್ಬುಕ್ ನಲ್ಲಿ, ದರ್ಶನ್ ಅವರ ಡೈಲಾಗ್ ಗಳನ್ನೂ, ಹಾಡುಲ್ಗನ್ನು ಅನುಕರಣೆ ಮಾಡಿ ಅದರ ವಿಡಿಯೋ ಹಾಕುತ್ತಿದ್ದನು. ನೋಡ್ತಾ ನೋಡ್ತಾ ಸೋಶಿಯಲ್ ಮೀಡಿಯಾ ದಲ್ಲಿ ಇವನ ವಿಡಿಯೋ ಗಳು ಸಕತ್ ವೈರಲ್ ಆಗಲು ಶುರು ಆಯಿತು. ಇದಲ್ಲದೆ ದರ್ಶನ್ ಅವರ ಫ್ಯಾನ್ ಪೇಜ್ಗಳಲ್ಲಿ ಕೂಡ ಇವನ ವಿಡಿಯೋ ಅಪ್ಲೋಡ್ ಮಾಡಲಾಯಿತು. ಇದನ್ನು ಗಮನಿಸಿದ ಕಲರ್ಸ್ ವಾಹಿನಿ ಅವರು ಇವನನ್ನು ಮಜಭಾರತ ಎಂಬ ರಿಯಾಲಿಟಿ ಶೋಗೆ ಆಹ್ವಾನ ಮಾಡಿದರು. ಒಂದು ಪುಟ್ಟ ಅವಕಾಶಕ್ಕಾಗಿ ಕಾಯುತ್ತಿದ್ದ ಅವಿನಾಶ್ ಅವರು ಹಿಂದೆ ಮುಂದೆ ನೋಡದೆ ಮಜಭಾರತ ರಿಯಾಲಿಟಿ ಶೋಗೆ ಬಂದರು. ವೇದಿಕೆ ಮೇಲೆ ಬಂದ ಒಂದೇ ಒಂದು ವಿಡಿಯೋ ಈಗ ಸಕತ್ ಸದ್ದು ಮಾಡಿದೆ. ಇದಲ್ಲದೆ ರಾತ್ರೋ ರಾತ್ರಿ ಜೂನಿಯರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವಿನಾಶ್ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಇದಲ್ಲದೆ ಬಲ್ಲ ಮೂಲಗಳ ಪ್ರಕಾರ ಇವರನ್ನು ಕುದ್ದು ದರ್ಶನ್ ಅವರು ಭೇಟಿ ಮಾಡುತ್ತಾರೆ ಎಂದು ತಿಳಿದು ಬಂದಿದೆ. ಇತ್ತೀಚಿಗೆ ಮಜಭಾರತದಲ್ಲಿ ಜೂನಿಯರ್ ದರ್ಶನ್ ಆದ ಅವಿನಾಶ್ ಅವರ ಝಲಕ್ ಹೇಗಿತ್ತು ಈ ಕೆಳಗಿನ ವಿಡಿಯೋ ನೋಡಿರಿ
ಅವಿನಾಶ್ ಎಂಬ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪಕ್ಕಾ ಅಭಿಮಾನಿ, ದರ್ಶನ್ ಅವರ ಅನುಕರಣೆ ಯನ್ನು ಬಹಳ ಚನ್ನಾಗಿ ಮಾಡುತ್ತಾರೆ. ಅವರನ್ನು ನೋಡಿದ್ರೆ ಒಂದು ಕ್ಷಣ ನಮ್ಮ ದರ್ಶನ್ ಅವರನ್ನು ನೋಡಿದ ಹಾಗೆ ಆಗುತ್ತಾದೆ. ಅವರ ಮಾತಿನ ವರಸೆ, ಹಾವಾ ಭಾವ, ಸ್ಟೈಲ್ ಎಲ್ಲಾ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತರಹ ಮಾಡುತ್ತಾರೆ. ಅವಿನಾಶ್ ಅವರು ಬಹಳ ಅದ್ಭುತ ಪ್ರತಿಭೆ. ಈ ಹಿಂದೆ ಸೋಶಿಯಲ್ ಮೀಡಿಯಾ ಗಳಲ್ಲಿ ದರ್ಶನ್ ಅವರ ಅನುಕರಣೆಯನ್ನು ಮಾಡಿ ಅದರ ವಿಡಿಯೋ ಗಳನ್ನೂ ಹಾಕುತ್ತಿದ್ದರು. ಇವರ ಎಲ್ಲಾ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿವೆ. ಇವರ ಅದ್ಭುತ ಟ್ಯಾಲೆಂಟಿಗೆ ಒಂದು ಸಲಾಂ!

Trending

To Top