Cinema

ನೋಡಿಕೊಳ್ಳೋರು ಇಲ್ಲ, ಹೇಳೋರ್ ಇಲ್ಲ, ಕೇಳ್ಳೋರ್ ಇಲ್ಲ, ಕಣ್ಣೀರಿಟ್ಟ ಗುಬ್ಬಿ ವೀರಣ್ಣ ಸೊಸೆ!

ಕನ್ನಡ ಸಿನಿಪ್ರಿಯರು ಗುಬ್ಬಿ ವೀರಣ್ಣ ಅವರನ್ನು ಮರೆಯುವ ಹಾಗಿಲ್ಲ. ಕನ್ನಡ ಚಿತ್ರರಂಗ ಇರುವವರೆಗೂ ಈ ದಿಗ್ಗಜರ ಹೆಸರು ರಾರಾಜಿಸುತ್ತವೆ. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ್ದ ಕೊಡುಗೆ ಅಷ್ಟು. ಗುಬ್ಬಿ ವೀರಣ್ಣನವರನ್ನು ನಾವು ನೆನಪಿಸಿಕೊಳ್ಳುತ್ತೇವೆ ಒಂದು ಅವರ ಕುಟುಂಬದ ಹಿರಿಜೀವ ಒಂದು ಯಾವ ಆಸರೆಯು ಇಲ್ಲದೆ ಒಬ್ಬಂಟಿಯಾಗಿದೆ.ತಮ್ಮ ಸ್ಥಿತಿಯನ್ನು ಹೇಳಿಕೊಂಡು ಕಣ್ಣೀರು ಹಾಕಿದೆ ಹಿರಿಯ ಜೀವ. ಗುಬ್ಬಿವೀರಣ್ಣನವರ ಸೊಸೆಯ ಹೆಸರು ಶಾಂತಮ್ಮ. 1951 ರಲ್ಲಿ ಜನಿಸಿದ ಇವರು, 13 ವರ್ಷದವರಿದ್ದಾಗ ಖ್ಯಾತ ನಾಟಕ ರತ್ನ ಗುಬ್ಬಿವೀರಣ್ಣ ಅವರ ನಾಟಕ ಕಂಪನಿ ಸೇರುತ್ತಾರೆ. ಆಗಿನ ಕಾಲದಲ್ಲಿ ನೋಡಲು ಸುಂದರವಾಗಿದ್ದರು ಶಾಂತಮ್ಮ ಜೊತೆಗೆ ಆಕೆ ಬುದ್ಧಿವಂತೆ ಸಹ. ಸುಮಾರು ನಲವತ್ತು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿ ಸೈ ಎನಿಸಿಕೊಂಡವರು ಈ ಹಿರಿಜೀವ.
ಆದರೆ ಈಗ ಬದುಕಿನ ನಾಟಕದಲ್ಲಿ ನಾನು ಸೋತಿದ್ದೇನೆ, ಒಂಟಿಯಾಗಿದ್ದೇನೆ, ಇಳಿವಯಸ್ಸಿನಲ್ಲಿ ನನಗೆ ಯಾರ ಆಶ್ರಯವೂ ಇಲ್ಲ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ. ಶಾಂತಮ್ಮನವರು ಮೂಲತಃ ರಾಮನಗರದ ಬಳಿ ಇರುವ ಅರ್ಚಕರಳ್ಳಿ ಎಂಬ ಪುಟ್ಟ ಊರಿನವರು. ನಿಂಗಯ್ಯ ಮತ್ತು ಪುಟ್ಟಮ್ಮ ಇವರ ತಂದೆ ತಾಯಿ. 13ವಯಸ್ಸಿನಲ್ಲಿ ಇದ್ದಾಗ ಇಂದಿನ ಖ್ಯಾತ ನಟಿ ಶೃತಿ ಅವರ ತಾಯಿ ಹಾಗೂ ದೊಡ್ಡಮ್ಮ, ರಾಧ ಮತ್ತು ರುಕ್ಮಿಣಿ ಅವರ ನಾಟಕದ ಒಂದು ಫೋಟೋ ಪೇಪರ್ ನಲ್ಲಿ ಬಂದಿದ್ದನ್ನು ನೋಡಿ ಮನೆಯವರಿಗೆ ಒತ್ತಯ ಮಾಡಿ ರಂಗಭೂಮಿ ಸೇರುತ್ತಾರೆ ಶಾಂತಮ್ಮ.
ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿತ್ತು. ಹೆಣ್ಣಿಗೆ ಹಲವಾರು ಕಟ್ಟುಪಾಡುಗಳು ಅಂದಿನ ಕಾಲದಲ್ಲಿ ಇತ್ತು. ಅಂತಹ ಕಾಲದಲ್ಲಿ ಶಾಂತಮ್ಮನವರು ರಂಗಭೂಮಿಗೆ ಪಾದಾರ್ಪಣೆ ಮಾಡಿದ್ದೇ ಒಂದು ಸಾಹಸ . ಅಂದಿನಿಂದ ಇಂದಿನವರೆಗೂ ಜೀವನದಲ್ಲಿ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ..ನಾಟಕದ ಜೀವನದ ಬಗ್ಗೆ ಶಾಂತಮ್ಮ ಅವರೇ ಮಾತನಾಡಿದ್ದು ಹೀಗೆ..”ಗಂಡ ದೇವರಲ್ಲಿ ಐಕ್ಯರಾದ ಬಳಿಕ ನನ್ನ ತಾಯಿ ಹೃದಯ ಸಂಬಂಧ ಖಾಯಿಲೆಯಿಂದ ಅಗಲಿದರು. ಇದ್ದ ಮನೆ ಕಳೆದುಕೊಂಡು, ಸದ್ಯ ಕೈಯಲ್ಲಿ ಬಿಡಿಗಾಸು ಕೂಡ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ಸ್ವಂತ ಸೂರಿಲ್ಲ, ನನ್ನವರು ಅಂತಾ ಯಾರೂ ಇಲ್ಲ. ಮಾಸ್ಟರ್ ಹಿರಣ್ಣಯ್ಯನವರು ನನಗೆ ಮಾಶಾಸನ ಮಾಡಿಸಿಕೊಟ್ಟಿದ್ದರು. ಇಂದಿಗೂ ಸಹ ಅದರಲ್ಲೇ ಜೀವನ ಸಾಗಿಸುತ್ತಿದ್ದೇನೆ. ನನಗೆ ಬೇರೆ ಯಾವುದೇ ಆದಾಯದ ಮೂಲ ಇಲ್ಲ..””ಯಾರು ನನ್ನ ಗುಬ್ಬಿವೀರಣ್ಣ ಅವರ ಸೊಸೆ ಅಂತ ಗುರುತಿಸಲೇ ಇಲ್ಲ. ನಾನು ಸಹ ಎಲ್ಲೂ ಹೊರಗಡೆ ಬಂದಿಲ್ಲ, ಒಂದು ಕಾಲದಲ್ಲಿ ಚನ್ನಾಗಿ ಬಾಳಿದವರು ನಾವು. ಹೇಗಪ್ಪ ಹೊರಗಡೆ ಬರೋದು ಎಂದು ಮಾನಕ್ಕೆ ಅಂಜಿ ನಾನು ಇಷ್ಟು ದಿನ ಎಲ್ಲೂ ಮಾತನಾಡಿಲ್ಲ. ಈಗೀಗ ಜೀವನ ಕಷ್ಟವಾಗಿ ಇರುವುದರಿಂದ ಮಾತನಾಡುತಿದ್ದೇನೆ. ನನ್ನ ನಲವತ್ತು ವರ್ಷದ ರಂಗಭೂಮಿ ಸಾಧನೆಗೂ ಬೆಲೆ ಸಿಕ್ಕದೆ ಹೋಯಿತು ಎಂಬ ನೋವು ನನ್ನನ್ನು ಕಾಡುತ್ತಿದೆ..” ಎಂದು ಹೇಳಿ ನೋವನ್ನು ಹೊರಹಾಕಿದ್ದಾರೆ ಹಿರಿಜೀವ ಶಾಂತಮ್ಮ..ಇನ್ನಾದರೂ ಚಿತ್ರರಂಗದ ಯಾರಾದರೂ ಶಾಂತಮ್ಮನವರು ಸಹಾಯ ಮಾಡುವ ಮನಸ್ಸು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕು..

Trending

To Top