Karnataka

ಇಂದು ಗೌರಿ ಹಬ್ಬ, ಪೂಜೆ ಮಾಡುವುದು ಹೇಗೆ? ಶುಭ ಮುಹೂರ್ತ ಮತ್ತು ಹೇಳಬೇಕಾದ ಮಂತ್ರ ಯಾವುದು ನೋಡಿ!

gowri-habba04

ಗೌರಿ ಹಬ್ಬ ಬಂತೆಂದರೆ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಗೌರಿ ಪೂಜೆ ಮಾಡಲು ಎಲ್ಲಿಲ್ಲದ ಸಂಭ್ರಮ. ಪ್ರತಿಯೊಬ್ಬರ ಮನೆಗೂ ಭಗವಾನ್ ಗಣೇಶನನ್ನು ಮನೆಗೆ ಮನೆಗೆ ಕರೆತರುವ ಬದಲು ಅವರ ತಾಯಿ ಗೌರಿಯನ್ನು ಮನೆಗೆ ಕರೆತರಲಾಗುತ್ತದೆ. ಗೌರಿಯನ್ನು ನಮ್ಮ ಮನೆಗಳಿಗೆ ಆಹ್ವಾನಿಸುವ ದಿನವನ್ನು ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಗೌರಿ ಹಬ್ಬವೆಂದು ಆಚರಣೆ ಮಾಡುತ್ತೇವೆ. ಈ ವರ್ಷ ಗೌರಿ ಹಬ್ಬವು ಆಗಸ್ಟ್ 21 ರಂದು ಶುಕ್ರವಾರ ಇದೆ. ಗೌರಿ ಹಬ್ಬದ ಶುಭ ಮುಹೂರ್ತ, ಮಹತ್ವ ಮತ್ತು ಪೂಜಾ ವಿಧಾನಗಳನ್ನು ನೋಡೋಣ… ಪ್ರತಿ ವರ್ಷವೂ ಗಣೇಶ ಚತುರ್ಥಿ ಹಬ್ಬದ ಹಿಂದಿನ ದಿನ ಗೌರಿ ಪೂಜೆ ವ್ರತವನ್ನು ಆಚರಣೆ ಮಾಡುತ್ತೇವೆ. ಗೌರಿಯು ದೇವಿ ಪಾರ್ವತಿಯ ಮತ್ತೊಂದು ಅವತಾರ. ಗೌರಿ ಹಬ್ಬದಂದು ಪಾರ್ವತಿ ದೇವಿಯ ಈ ಸ್ವರೂಪವನ್ನು ಪೂಜಿಸಲಾಗುತ್ತದೆ. ಈ ಹಬ್ಬವು ಹೆಣ್ಣುಮಕ್ಕಳಿಗೆ ಬಹಳ ವಿಶೇಷವಾದದ್ದು. ಗೌರಿ ಹಬ್ಬದ ದಿನ ಹೆಣ್ಣುಮಕ್ಕಳು ದೇವಿಯ ಆಶೀರ್ವಾದ ಪಡೆಯುವ ಸಲುವಾಗಿ ಮತ್ತು ಒಳ್ಳೆಯ ವೈವಾಹಿಕ ಜೀವನ ಸಿಗಬೇಕು ಎಂಬ ಸಲುವಾಗಿ ಗೌರಿ ಪೂಜೆ ಮಾಡುತ್ತಾರೆ.

ಈ ಪೂಜೆಯ ದಿನ ಗೌರಿಗೆ ಪೂಜೆ ಸಲ್ಲಿಸುವುದರಿಂದ ತಾಯಿ ಗೌರಿಯು ಮುತ್ತೈದೆಯಂತೆ ನಿಮ್ಮ ಮನೆಗೆ ಪ್ರವೇಶ ಮಾಡುತ್ತಾಳೆ ಎಂಬ ಪ್ರತೀತಿ ಇದೆ. ಗೌರಿ ಹಬ್ಬವನ್ನು ಕರ್ನಾಟಕದಲ್ಲಿ ಮಾತ್ರವಲ್ಲದೆ, ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಬೇರೆ ರಾಜ್ಯಗಳಲ್ಲಿ ಸಹ ಹರ್ತಾಲಿಕಾ ತೀಜ್‌ ಎಂಬ ಹೆಸರಿನಲ್ಲಿ ಅಥವಾ ಮಂಗಳ ಗೌರಿ ಪೂಜೆ ಎಂದು ಕರೆಯುತ್ತಾರೆ.ಈ ವರ್ಷ ಗೌರಿ ಹಬ್ಬವನ್ನು ಆಗಸ್ಟ್‌ 21 ಶುಕ್ರವಾರದಂದು ಆಚರಿಸಲಾಗುತ್ತಿದೆ. ಈ ವರ್ಷ ಗೌರಿ ಹಬ್ಬಕ್ಕೆ ಶುಭ ಮುಹೂರ್ತ ಯಾವುದು ? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.2020 ರ ಆಗಸ್ಟ್‌ 21 ಶುಕ್ರವಾರದಂದು ಇರುವ ಗೌರಿ ಹಬ್ಬಕ್ಕೆ – ಬೆಳಗಿನ ಶುಭ ಮುಹೂರ್ತ :- ಬೆಳಗ್ಗೆ 6:19 ರಿಂದ 8:49 ರವರೆಗೆ – ಪೂಜೆಯ ಸಮಯ :- 2 ಗಂಟೆ 30 ನಿಮಿಷ – ಪ್ರದೋಷಕಾಲ ಗೌರಿ ಪೂಜೆ ಶುಭ ಮುಹೂರ್ತ: ಬೆಳಗ್ಗೆ 6:49 ರಿಂದ ರಾತ್ರಿ 9:07 ರವರೆಗೆ ಪೂಜಾ ಅವಧಿ: 2 ಗಂಟೆ 18 ನಿಮಿಷಗಳು | ತದಿಗೆ ತಿಥಿ ಆರಂಭ: 2020 ಆಗಸ್ಟ್‌ 21 ರಂದು ಬೆಳಗ್ಗೆ 2:13 ರಿಂದ | ತದಿಗೆ ತಿಥಿ ಮುಕ್ತಾಯ: 2020 ಆಗಸ್ಟ್‌ 21 ರಂದು ರಾತ್ರಿ 11:02 ರವರೆಗೆ | ಗೌರಿ ದೇವಿಯನ್ನು ಮನೆಗೆ ಆಹ್ವಾನಿಸುವ ಬಗೆ :-

ಗೌರಿ ದೇವಿಯನ್ನು ಸಮೃದ್ಧಿ, ಸುಖ ಹಾಗೂ ಶಕ್ತಿ ಎಲ್ಲವನ್ನು ಹೊಂದಿರುವ ದೇವತೆ ಎಂದು ಪರಿಗಣಿಸಲಾಗುತ್ತದೆ. ಗಣೇಶ ಚತುರ್ಥಿಯ ದಿನ ಗಣೇಶನನ್ನು ಕರೆತರುವ ಮುನ್ನ ಮನೆಗಳಲ್ಲಿ ಗೌರಿಯನ್ನು ಮನೆಗೆ ಬರಮಾಡಿಕೊಳ್ಳುತ್ತೇವೆ. ಇನ್ನು ಗೌರಿ ಪೂಜೆಯ ವಿಧಿ-ವಿಧಾನಗಳು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೇರೆ ಬೇರೆ ರೀತಿಯಲ್ಲಿ ಇರುತ್ತದೆ. ಮನೆಯಲ್ಲಿ ಗೌರಿ ದೇವಿಯನ್ನು ಕೂರಿಸಿ ಪೂಜೆ ಸಲ್ಲಿಸುವುದರಿಂದ ಆ ಮನೆಯಲ್ಲಿ ಐಶ್ವರ್ಯ, ನೆಮ್ಮದಿ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಗೌರಿ ಹಬ್ಬದ ದಿನ ಮುತ್ತೈದೆಯರು ಮನೆಯ ಮುಂದೆ ರಂಗೋಲಿ ಹಾಕಿ, ಮನೆಯನ್ನು ಸ್ವಚ್ಛಗೊಳಿಸಿ, ಚೆನ್ನಾಗಿ ಅಲಂಕಾರ ಮಾಡಿ ಗೌರಿಯನ್ನು ಬರಮಾಡಿಕೊಳ್ಳಬೇಕು.. ಗೌರಿ ಪೂಜೆ ಮಾಡುವ ವಿಧಾನ

1) ದೇವಿ ಗೌರಿಯ ಮೂರ್ತಿಯನ್ನು ಗಣೇಶ ಚತುರ್ಥಿ ಹಬ್ಬದ ಹಿಂದಿನ ದಿನ ಮನೆಗೆ ತರಬೇಕು. ಗೌರಿಯನ್ನು ಮನೆಗೆ ಬರಮಾಡಿಕೊಳ್ಳುವ ಮೊದಲು, ಮನೆಯಲ್ಲಿರುವ ಹೆಣ್ಣುಮಕ್ಕಳು ಸ್ನಾನ ಮಾಡಿ, ಶುದ್ಧವಾಗಿ ಮಾಡಿಯಿಂದ ಮನೆಯನ್ನು ಅಲಂಕರಿಸಿ ಮನೆ ಮುಂದೆ ರಂಗೋಲಿಯನ್ನು ಹಾಕಬೇಕು. 2) ಗೌರಿ ಹಬ್ಬವನ್ನು ಸ್ವರ್ಣ ಗೌರಿ ಹಬ್ಬ ಎಂದು ಕರೆಯುತ್ತಾರೆ. ಈ ದಿನ ಹೆಣ್ಣುಮಕ್ಕಳು ಸಾಂಪ್ರದಾಯಿಕವಾದ ಬಟ್ಟೆಯನ್ನು ಧರಿಸಿ, ಅರಶಿಣದವನ್ನು ಉಪಯೋಗಿಸಿ ಗೌರಿ ದೇವಿಯ ವಿಗ್ರಹವನ್ನು ಮಾಡಬೇಕು. ನಂತರ ಮಂತ್ರಗಳನ್ನು ಪಠಿಸಿ ಗೌರಿಯನ್ನು ಆಹ್ವಾನ ಮಾಡಬೇಕು.. ಹೇಳಬೇಕಾದ ಮಂತ್ರ: “ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣೀ ನಮೋಸ್ತುತೇ”. ಈ ಮಂತ್ರವನ್ನು ಗೌರಿ ಹಬ್ಬದ ದಿನ 108 ಬಾರಿ ಶ್ರದ್ಧೆ ಮತ್ತು ಭಕ್ತಿಯಿಂದ ಹೇಳಿ ಪೂಜೆ ಮಾಡಬೇಕು 3) ಒಂದು ಬಟ್ಟಲಿನಲ್ಲಿ ಅಕ್ಕಿ ಮತ್ತು ಧಾನ್ಯಗಳನ್ನು ಇಟ್ಟು ಅದರ ಒಲೆಗೆ ಮಡಿಯಿಂದ ತಯಾರಿಸಿದ ಗೌರಿ ವಿಗ್ರಹವನ್ನು ಇಡಬೇಕು. 4) ನಂತರ ಗೌರಿ ದೇವಿಗೆ ಶ್ರದ್ಧೆ, ಸ್ವಚ್ಛತೆ ಮತ್ತು ಭಕ್ತಿಯಿಂದ ಪೂಜೆ ನೆರವೇರಿಸಬೇಕು. 5) ಗೌರಿ ವಿಗ್ರಹವನ್ನು ಇತ್ತು ಜಾಗದಲ್ಲಿ ಬಾಳೆಗಿಡವನ್ನು ಇಡಬೇಕು, ಅದರ ಸುತ್ತಲೂ ಮಾವಿನ ಎಲೆಗಳನ್ನು ಕಟ್ಟಿ ಗೌರಿಗೆ ಮಂಟಪವನ್ನು ರಚಿಸಬೇಕು. ದೇವಿಗಾಗಿ ಮಾಡಿದ ಮಂಟಪವನ್ನು ಹೂವು ಮತ್ತು ಇತರ ವಸ್ತುಗಳಿಂದ ಅಲಂಕಾರ ಮಾಡಬೇಕು. 6) ಗೌರಿ ದಾರ ಎಂದು ಕರೆಯಲಾಗುವ ಅರಿಶಿನದ ದಾರವನ್ನು 16 ಸುತ್ತು ಬರುವವರೆಗೂ ಹೆಣ್ಣುಮಕ್ಕಳು ಕೈ ಮಣಿಕಟ್ಟಿಗೆ ಕಟ್ಟಿಕೊಳ್ಳಬೇಕು. 7) ಗೌರಿ ಪೂಜೆಯ ದಿನ ಹೆಣ್ಣುಮಕ್ಕಳು 5 ಬಾಗಿನಗಳನ್ನು ತಯಾರಿಸಿ, ಒಂದನ್ನು ಗೌರಿಗೆ ಅರ್ಪಣೆ ಮಾಡಿ, ಉಳಿದ ನಾಲ್ಕು ಬಾಗಿನಗಳನ್ನು ಮುತ್ತೈದೆಯರಿಗೆ ನೀಡಬೇಕು. 8) ಪೂಜೆಯ ದಿನ ಗೌರಿ ದೇವಿಗೆ ಹೋಳಿಗೆ, ಒಬ್ಬಟ್ಟು ಅಥವಾ ಪಾಯಸವನ್ನು ನೈವೇದ್ಯಕ್ಕೆ ಇಡಲಾಗುತ್ತದೆ. ದೇವಿಗೆ ಸಿಹಿ ತಿಂಡಿಯನ್ನು ಮಾತ್ರ ನೈವೇದ್ಯಕ್ಕೆ ಇಡಬೇಕು. ಮರುದಿನ ಗಣೇಶನನ್ನು ಮನೆಗೆ ಬರಮಾಡಿಕೊಳ್ಳಬೇಕು. 10 ದಿನಗಳು ಪೂಜೆ ಮಾಡಿದ ಬಾಳಿಕೆ ಗಣೇಶ ವಿಮತ್ತು ಗೌರಿ ವಿಗ್ರಹವನ್ನು ನೀರಿಗೆ ವಿಸರ್ಜನೆ ಮಾಡಲಾಗುತ್ತದೆ.

ಗೌರಿ ಬಾಗಿನ ಮಾಡುವ ವಿಧಾನ :- ಬಾಗಿನ ಮಾಡಲು ಇಟ್ಟುಕೊಂಡಿರುವ ಮೊರವನ್ನು ಶುದ್ಧ ಮಾಡಿ ಅದಕ್ಕೆ ಅರಶಿಣ ಮತ್ತು ಕುಂಕುಮವನ್ನು ಹಚ್ಚಬೇಕು. ನಂತರ ಬಾಗಿನಕ್ಕಾಗಿ ಸಿರಿ ಧಾನ್ಯಗಳು, ಬಳೆಗಳು, ತೆಂಗಿನಕಾಯಿ, ಕನ್ನಡಿ, ಬಳೆಬಿಚ್ಚೋಲೆ, 5 ವಿಧವಾದ ಹಣ್ಣುಗಳು, ತಾಯಿ, ಅತ್ತಿಗೆ ಅಥವಾ ನಾದಿನಿಯರಿಗೆ ಅದರ ಅವುಗಳ ಜೊತೆ ಸೀರೆಯನ್ನು ಇಟ್ಟು, ಬ್ಲೌಸ್ ಪೀಸ್ ಬಟ್ಟೆ ಮತ್ತು ಮುತ್ತೈದೆಯರು ಬಳಸುವ ವಸ್ತುಗಳನ್ನು ಇಟ್ಟು ಮೊರದ ಬಾಗಿನ ಸಿದ್ಧ ಮಾಡಬೇಕು. ಗೌರಿ ಹಬ್ಬದ ದಿನ ಪಾರ್ವತಿ ದೇವಿಯು ತಂದೆಯ ಮನೆಗೆ ಬರುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. ಆಕೆ ತಂದೆಯ ಮನೆಗೆ ಬಂದು ಬಾಗಿನವನ್ನು ತೆಗೆದುಕೊಳ್ಳುತ್ತಾಳೆ ಎಂದು ಪುರಾಣದಲ್ಲಿ ತಿಳಿಸಿರುವುದರಿಂದ. ಗೌರಿ ಹಬ್ಬದ ದಿನದಂದು ಬಾಗಿನಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಗೌರಿ ಪೂಜೆಯನ್ನು ಮಾಡುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ, ಆಯಸ್ಸು ಮತ್ತು ಆರೋಗ್ಯ ಹೆಚ್ಚಾಗುವುದು ಎಂಬ ನಂಬಿಕೆ ಇದೆ.

Trending

To Top