Film News

ನನ್ನ ಎಲ್ಲಾ ರಾತ್ರಿಗಳು ವ್ಯರ್ಥವಾಗುತ್ತಿವೆ, ಮೊದಲು ಮದುವೆ ಮಾಡಿಸಿ, ಮತ್ತೆ ಕೆಲಸಕ್ಕೆ ಬರ್ತಿನಿ ಎಂದ ಶಿಕ್ಷಕನನ್ನು ಅಮಾನತು ಮಾಡಿದ ಇಲಾಖೆ….!

ಸಮಾಜದಲ್ಲಿ ಆಗಾಗ ನಾವು ಕೆಲವೊಂದು ವಿಚಿತ್ರವಾದ ಘಟನೆಗಳ ಬಗ್ಗೆ ಕೇಳುತ್ತಿರುತ್ತೇವೆ. ಅದೇ ಮಾದರಿಯಲ್ಲಿ ಮಧ್ಯಪ್ರದೇಶದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ನ.17 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಡಿ.3 ರಂದು ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕರ್ತವ್ಯಕ್ಕಾಗಿ ರಾಜ್ಯದ ಅನೇಕ ಶಾಲಾ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಆದರೆ ಓರ್ವ ಶಿಕ್ಷಕ ಸರ್ಕಾರಿ ಆದೇಶಕ್ಕೆ ಸೆಡ್ಡು ಹೊಡೆದು, ತನ್ನ ಹುದ್ದೆಯನ್ನು ಕಳೆದುಕೊಂಡಿದ್ದಾನೆ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಆದರೆ 35 ವರ್ಷದ ಶಾಲಾ ಶಿಕ್ಷಕರೊಬ್ಬರು ಮಾತ್ರ ಚುನಾವಣಾ ಕರ್ತವ್ಯಕ್ಕೆ ಗೈರುಹಾಜರಾಗಿದ್ದಾರೆ. ಈ ಕಾರಣಕ್ಕಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರೇ, ಅದಕ್ಕೆ ವಿಚಿತ್ರ ಉತ್ತರ ನೀಡಿದ್ದಾರೆ. 35 ವರ್ಷದ ಅವಿವಾಹಿತ ಶಾಲಾ ಶಿಕ್ಷಕ ಅಖಿಲೇಶ್ ಕುಮಾರ್‍ ಮಿಶ್ರಾ ಎಂಬುವವ ನೌಕರನೇ ಚುನಾವಣಾ ಕರ್ತವ್ಯಕ್ಕೆ ಗೈರಾದ ಶಿಕ್ಷಕ. ಭೂಪಾಲ್ ನಿಂದ ಸುಮಾರು 450 ಕಿ.ಮೀ ದೂರವಿರುವ ಅಮರಪತನ್ ನಲ್ಲಿರುವ ಮಹುದರ್‍ ಹೈಯರ್‍ ಸೆಕೆಂಡರಿ ಶಾಲೆಯಲ್ಲಿ ಈತ ಸಂಸ್ಕೃತಯ ಕಲಿಸುವ ಶಿಕ್ಷಕರಾಗಿದ್ದಾರೆ. ಚುನಾವಣೆ ನಿಮಿತ್ತ ಅ. 16, 17 ರಂದು ಚುನಾವಣಾ ತರಬೇತಿಯನ್ನು ಆಯೋಜಿಸಲಾಗಿತ್ತು. ಆದರೆ ಅಖಿಲೇಶ್ ಕುಮಾರ್‍  ಮಿಶ್ರಾ ತರಬೇತಿಗೆ ಗೈರು ಹಾಜರಾಗಿದ್ದರು.

ಚುನಾವಣಾ ತರಬೇತಿಗೆ ಗೈರು ಹಾಜರಾದ ಅಖಿಲೇಶ್ ಕುಮಾರ್ ಮಿಶ್ರಾ ರವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದರು. ಅದಕ್ಕೆ ಮಿಶ್ರಾ ಉತ್ತರ ನೀಡಿದ್ದಾರೆ. ನಾನು ಅವಿವಾಹಿತನಾಗಿದ್ದು, ನನ್ನ ಇಡೀ ಜೀವನ ಹೆಂಡತಿ ಇಲ್ಲದೇ ಕಳೆಯುತ್ತಿದ್ದೇನೆ. ಈ ಕಾರಣದಿಂದ ನನ್ನ ಎಲ್ಲಾ ರಾತ್ರಿಗಳು ವ್ಯರ್ಥವಾಗಿದೆ. ಮೊದಲು ನನ್ನನ್ನು ಮದುವೆ ಮಾಡಿಸಿ, ಇಲ್ಲವಾದರೇ ಯಾರಾದರೂ ನನ್ನ ಮದುವೆ ಆಗಿ, ನಗದು ಅಥವಾ ಖಾತೆ ಪಾವತಿಯಲ್ಲಿ ನನಗೆ ವರದಕ್ಷಿಣೆಯಾಗಿ 3.5 ಲಕ್ಷ ರೂಪಾಯಿ ಕೊಡಿ ಹಾಗೂ ರೇವಾ ಜಿಲ್ಲೆಯ ಸಿಂಗ್ರೌಲಿ ಟವರ್‍ ಅಥವಾ ಸಮದರಿಯಾದಲ್ಲಿ ಫ್ಲಾಟ್ ಗಾಗಿ ಸಾಲವನ್ನು ಮಂಜೂರು ಮಾಡಿ, ಆಮೇಲೆ ನಾನು ಚುನಾವಣಾ ಕರ್ತವ್ಯಕ್ಕೆ ಬರುತ್ತೇನೆ ಎಂದು ಉತ್ತರ ಬರೆದಿದ್ದಾರೆ. ಇನ್ನೂ ಈ ಉತ್ತರಕ್ಕೆ ಹಿರಿಯ ಅಧಿಕಾರಿಗಳು ಆಕ್ರೋಷಗೊಂಡು ನ.2 ರಂದು ಸತ್ನಾ ಕಲೆಕ್ಟರ್‍ ಅನುರಾಗ್ ವರ್ಮಾ ರವರು ಅಖಿಲೇಶ್ ಕುಮಾರ್‍ ಮಿಶ್ರಾರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದಾರೆ.

Most Popular

To Top