Film News

ಗೌಡ್ರು ಹುಡುಗನ ಜೊತೆ ಕಾಣಿಸಿಕೊಂಡರು ರಚಿತಾ! ಇವನೇನಾ ಮದುವೆ ಆಗೋ ಹುಡ್ಗ!

ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್ ಎಂದೇ ಖ್ಯಾತಿಯಾಗಿರುವ ನಟಿ ರಚಿತಾ ರಾಮ್. ಬುಲ್ ಬುಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ರಚಿತಾ, ಹಿಂದಕ್ಕೆ ತಿರುಗಿ ನೋಡಿದ್ದೆ ಇಲ್ಲ. ಕನ್ನಡ ಚಿತ್ರರಂಗದ ಮೇರು ನಟರಾದ ದರ್ಶನ್, ಪುನೀತ್ ರಾಜ್ ಕುಮಾರ್, ಸುದೀಪ್, ಶ್ರೀಮುರಳಿ, ಧ್ರುವ ಸರ್ಜಾ ಸೇರಿದಂತೆ ಎಲ್ಲಾ ಕನ್ನಡ ನಟರ ಜೊತೆಯಲ್ಲೂ ನಟಿಸಿ ಯಶಸ್ಸು ಪಡೆದಿದ್ದಾರೆ.

ಇತ್ತೀಚೆಗೆ ಸಿನಿರಂಗದಲ್ಲಿ 7 ವರ್ಷ ಪೂರೈಸಿದರು ರಚಿತಾ. ಕನ್ನಡದಲ್ಲಿ ಖ್ಯಾತಿ ಪಡೆದ ಹುಡುಗಿ, ಇದೀಗ ತೆಲುಗು ಚಿತ್ರದಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಸೂಪರ್ ಮಚ್ಚಿ ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಲಿದ್ದಾರೆ ರಚಿತಾ. ನಮ್ಮ ಕನ್ನಡದ ಹುಡುಗಿ ಟಾಲಿವುಡ್ ನಲ್ಲೂ ಗೆದ್ದು ಯಶಸ್ಸು ಪಡೆದರೆ ನಮಗೆ ಅದಕ್ಕಿಂತ ಖುಷಿ ಇನ್ನೇನಿದೆ ಹೇಳಿ..

ಇದೆಲ್ಲದರ ಜೊತೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ವಿಷಯ ರಚಿತಾ ಮದುವೆ ಕುರಿತು. ಹಿಂದಿನ ಸಂದರ್ಶನಗಳಲ್ಲಿ ತಾವು ಮದುವೆಯಾದರೆ ಗೌಡರ ಹುಡುಗನನ್ನೇ ಎಂದು ರಚಿತಾ ತಿಳಿಸಿದ್ದರು. ಈ ಹೇಳಿಕೆಯಿಂದ ರಚಿತಾ ಯಾರನ್ನು ಮದುವೆಯಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ಮತ್ತೊಂದು ಸುದ್ದಿ ಸಿಕ್ಕಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ರಚಿತಾ ರಾಮ್ ಅವರ ಅಕ್ಕ ನಿತ್ಯಾ ರಾಮ್ ಅವರ ಮದುವೆ ನೆರವೇರಿತು. ಈ ಮದುವೆ ಸಮಾರಂಭಕ್ಕೆ ಕುಟುಂಬದವರು ಹಾಗೂ ಆಪ್ತರ ಜೊತೆ, ಕೆಲವೇ ಕೆಲವು ಸಿನಿರಂಗದ ವ್ಯಕ್ತಿಗಳಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಅದರಲ್ಲಿ ಒಬ್ಬರು ನಿಖಿಲ್ ಕುಮಾರಸ್ವಾಮಿ. ರಚಿತಾ ಅಕ್ಕನ ಮದುವೆಗೆ ನಿಖಿಲ್ ಬಂದ ಕಾರಣ, ರಚಿತಾ ನಿಖಿಲ್ ರನ್ನೇ ಮದುವೆಯಾಗಬಹುದು ಎಂಬ ಸುದ್ದಿ ಹರಿದಾಡಿತ್ತು.

ಈ ಸುದ್ದಿಗೆ ಸ್ವತಃ ರಚಿತಾ, ಸಮರ್ಥನೆ ನೀಡಿದರು. ಅದಕ್ಕೆ ತಕ್ಕ ಹಾಗೂ ನಿಖಿಲ್ ಅವರ ಮದುವೆ ಸಹ ರೇವತಿಯವರೊಡನೆ ನಡೆಯಿತು. ಇದಾದ ನಂತರ ರಚಿತಾ ಮದುವೆಯಾಗುವ ಹುಡುಗ ಯಾರಿರಬಹುದು ಎಂದು ತಲೆಕೆಡಿಸಿಕೊಂಡಿದ್ದ ಅಭಿಮಾನಿಗಳಿಗೆ ಈಗ ಮತ್ತೊಂದು ಕುತೂಹಲ ಹುಟ್ಟಿದೆ.

ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಧನವೀರ್ ಹಾಗೂ ರಚಿತಾ ರಾಮ್ ಜೊತೆಯಲ್ಲಿ ಕಾಣಿಸಿಕೊಂಡಿರುವ ಫೋಟೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ, ಹಾಗಾಗಿ ರಚಿತಾ ಮದುವೆಯಾಗುವ ಹುಡುಗ ಇವರೇ ಇರಬಹುದೇ ? ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಜೊತೆಗೆ, ಒಳ್ಳೆಯ ಜೋಡಿ, ನೀವಿಬ್ಬರೂ ಬೇಗ ಮದುವೆಯಾಗಿ ಎಂದು ಸಹ ಇವರಿಬ್ಬರ ಫೋಟೋಗೆ ಕಾಮೆಂಟ್ ಬರೆಯುತ್ತಿದ್ದಾರೆ. ಆದರೆ ನಿಜವಾಗಲೂ ರಚಿತಾ ರಾಮ್ ಧನವೀರ್ ರನ್ನು ಮದುವೆಯಾಗ್ತಾರಾ ? ಎಂಬುದಕ್ಕೆ ಉತ್ತರ ಇಲ್ಲ. ಇದನ್ನು ತಿಳಿದುಕೊಳ್ಳಲು ಇನ್ನಷ್ಟು ದಿನ ಕಾಯಬೇಕು.

Trending

To Top