ಬೆಂಗಳೂರು: ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ ಹ್ಯಾಟ್ರಿಕ್ ಹಿರೋ ಶಿವರಾಜ್ಕುಮಾರ್ ಅಭಿನಯದ ಭಜರಂಗಿ-2 ಚಿತ್ರದಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದು ದೊರೆಯಲಿದೆ ಎನ್ನಲಾಗುತ್ತಿದೆ.
ನಟ ಶಿವರಾಜ್ಕುಮಾರ್ ದ್ರೋಣ ಚಿತ್ರದ ಬಳಿಕ ಯಾವುದೇ ಚಿತ್ರ ತೆರೆಮೇಲೆ ಕಾಣದೇ ಅಭಿಮಾನಿಗಳು ನಿರಾಸೆಯಾಗಿದ್ದರು. ಇದೀಗ ಭಜರಂಗಿ-2 ಚಿತ್ರದ ಮೂಲಕ ತಮ್ಮ ಅಭಿಮಾನಿಗಳ ಮನ ಗೆಲ್ಲಲು ಶಿವಣ್ಣ ರೆಡಿಯಾಗಿದ್ದು, ಈ ಚಿತ್ರ ಯಾವಾಗ ತೆರೆ ಮೇಲೆ ನೋಡಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.
ಈಗಾಗಲೇ ಭಜರಂಗಿ-2 ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸುಮಾರು ದಿನಗಳ ಹಿಂದೆಯೇ ಚಿತ್ರದ ಫಸ್ಟ್ ಲುಕ್ ಸಹ ಬಿಡುಗಡೆಯಾಗಿದೆ. ಈ ಪೋಸ್ಟರ್ ನೋಡಿದ ಅಭಿಮಾನಿಗಳಲ್ಲಿ ಕೂತೂಹಲ ಹಾಗೂ ಸಿನೆಮಾದ ಮೇಲಿನ ನಿರೀಕ್ಷೆ ಮತಷ್ಟು ಹೆಚ್ಚಾಗಿದ್ದು. ಇದೀಗ ಅಭಿಮಾನಿಗಳಿಗೆ ಚಿತ್ರತಂಡದಿಂದ ಗುಡ್ನ್ಯೂಸ್ ಒಂದು ದೊರೆಯಲಿದೆ ಎನ್ನಲಾಗಿದೆ.
ಅಂದಹಾಗೆ ಆ ಗುಡ್ನ್ಯೂಸ್ ಏನೆಂದರೇ, ಭಜರಂಗಿ ಚಿತ್ರದ ಹಾಡು ಹಾಗೂ ಮೋಷನ್ ಪೋಸ್ಟರ್ ಇದೇ ಫೆಬ್ರವರಿ 10, 2021 ರ ಸಂಜೆ 6 ಗಂಟೆಗೆ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಮತಷ್ಟು ಥ್ರಿಲ್ ಹೆಚ್ಚಿಸಲಿದೆಯಂತೆ ಚಿತ್ರತಂಡ. ನಿರ್ದೇಶಕ ಎ.ಹರ್ಷ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರದಲ್ಲಿ ಶಿವರಾಜ್ಕುಮಾರ್ ರವರ ಹಲವು ಪೋಸ್ಗಳು ಮತಷ್ಟು ಗಮನ ಸೆಳೆಯುತ್ತಿದೆ. ಇದೀಗ ಚಿತ್ರತಂಡ ಬಿಡುಗಡೆ ಮಾಡುವ ಮೋಷನ್ ಪೋಸ್ಟರ್ ನಲ್ಲಿ ಶಿವಣ್ಣನ ಗೆಟಪ್ ಯಾವ ರೀತಿ ಅಬ್ಬರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಹ್ಯಾಟ್ರಿಕ್ ಹಿರೋ ಶಿವಣ್ಣ ಹಾಗೂ ಡಾಲಿ ಧನಂಜಯ್ ಶಿವಪ್ಪ ಎಂಬ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರೀಕರಣ ಸಹ ಬಹುತೇಕ ಮುಕ್ತಾಯದ ಹಂತದಲ್ಲಿದೆಯಂತೆ. ಅಷ್ಟೇ ಅಲ್ಲದೇ ತಮಿಳು ಸಿನೆಮಾ ಒಂದರಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಬಲವಾಗಿ ಕೇಳಿಬರುತ್ತಿದ್ದು, ಆದರೆ ಶಿವರಾಜ್ಕುಮಾರ್ ರವರು ತಮಿಳು ಸಿನೆಮಾದಲ್ಲಿ ನಟಿಸುವ ನಿರ್ಧಾರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
