ಕೊರೋನಾ ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್ ಡೌನ್ ನಿರ್ಬಂಧ ಸಡಿಲಗೊಳಿಸಿ ಹಲವು ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ.
ಈಗ ಸರ್ಕಾರ ಮತ್ತೊಂದಿಷ್ಟು ವಿನಾಯಿತಿ ನೀಡಿದೆ. ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದ್ದು ಬ್ಯಾಂಕೇತರ ಹಣಕಾಸು ಸಂಸ್ಥೆ ತೆರೆಯಲು ಅನುಮತಿ ನೀಡಲಾಗಿದೆ. ಮೈಕ್ರೋಫೈನಾನ್ಸ್, ಸಣ್ಣ ಹಣಕಾಸು ಸಂಸ್ಥೆಗಳನ್ನು ತೆರೆಯಬಹುದಾಗಿದೆ.
ಪುಸ್ತಕ ಮಾರಾಟ ಮಳಿಗೆ, ಫ್ಯಾನ್ ಮಾರಾಟಕ್ಕೆ ಅನುಮತಿ ನೀಡಿದ್ದು ಬಿದಿರು, ತೆಂಗಿನಕಾಯಿ, ಅಡಕೆ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಡ್ರೈ ಫ್ರೂಟ್ಸ್, ಜ್ಯೂಸ್, ಐಸ್ ಕ್ರೀಮ್ ಮಾರಾಟಕ್ಕೆ, ಮೊಬೈಲ್ ರೀಚಾರ್ಜ್ ಗೆ ಅನುಮತಿ ನೀಡಲಾಗಿದೆ. ಹಿಟ್ಟಿನ ಗಿರಣಿ ಬೇಳೆಕಾಳುಗಳ ಮಿಲ್, ಹಾಲು ಉತ್ಪನ್ನಗಳ ಸಂಸ್ಕರಣ ಘಟಕಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಲಾಗಿದೆ.
