Film News

ಮತ್ತೊಮ್ಮೆ ವೈದ್ಯನ ಅವತಾರದ ತಾಳಲಿರುವ ಗಣೇಶ್!

ಬೆಂಗಳೂರು: ಸ್ಯಾಂಡಲ್ ವುಡ್‌ನ ಸ್ಟಾರ್ ನಟರೊಲ್ಲಬ್ಬರಾದ ಗೋಲ್ಡನ್ ಸ್ಟಾರ್ ಗಣೇಶ್ ಚಮಕ್ ಚಿತ್ರದ ನಂತರ ಮತ್ತೊಮ್ಮೆ ವೈದ್ಯನ ಪಾತ್ರದಲ್ಲಿ ಅಭಿನಯಿಸಲಿದ್ದಾರಂತೆ. ಅಂದಹಾಗೆ ಈ ಚಿತ್ರವನ್ನು ವೈದ್ಯರೇ ನಿರ್ಮಾಣ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಸುಮಾರು ೨೫ ವರ್ಷಗಳ ಕಾಲ ವೈದ್ಯ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ಶಶಿಕಲಾ ಪುಟ್ಟಸ್ವಾಮಿ ನಿರ್ದೇಶನದಲ್ಲಿ, ಮತ್ತೋರ್ವ ವೈದ್ಯ ಶೈಲೇಶ್ ನಿರ್ಮಾಣದಲ್ಲಿ ಮೂಡಿಬರಲಿರುವ ಚಿತ್ರದಲ್ಲಿ ನಟ ಗಣೇಶ್ ನಾಯಕನಾಗಿ ಬಣ್ಣ ಹಚ್ಚಲಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಗಣೇಶ್ ವೈದ್ಯನ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ವೈದ್ಯರಾದ ಶಶಿಕಳಾ ಹಾಗೂ ಶೈಲೇಶ್ ಒಟ್ಟಾಗಿ ವೈದ್ಯಕೀಯ ವಿದ್ಯಾಭ್ಯಾಸವನ್ನು ಪಡೆದಿದ್ದು, ವೈದ್ಯ ವೃತ್ತಿಯ ಘನತೆ, ವೃತ್ತಿಯಲ್ಲಿ ಕಷ್ಟ-ಸುಖಗಳ ಕುರಿತಂತೆ ಜಗತ್ತಿಗೆ ತಿಳಿಸಲು ಈ ಚಿತ್ರವನ್ನು ನಿರ್ಮಾಣ ಮಾಡಲು ಹೊರಟಿದ್ದಾರಂತೆ. ಈಗಾಗಲೇ ನಿರ್ದೇಶನದಲ್ಲಿ ಅನುಭವ ಪಡೆಯುವ ಉದ್ದೇಶದಿಂದ ಶೈಲೇಶ್ ರವರು ನಿರ್ಮಾಣ ಮಾಡುತ್ತಿರುವ ತಲ್ವಾರ್ ಪೇಟ್ ಎಂಬ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಶಶಿಕಳಾ ರವರು ತೊಡಗಿಸಿಕೊಂಡಿದ್ದಾರೆ.

ಇನ್ನೂ ವೈದ್ಯೆ ಶಶಿಕಳಾ ರವರಿಗೆ ಸಾಹಿತ್ಯದ ಬಗ್ಗೆ ಅತೀವ ಆಸಕ್ತಿಯಿದ್ದು, ಕತೆ, ಕವನ ಬರೆಯುವ ಹವ್ಯಾಸವೂ ಸಹ ಅವರಿಗಿದೆ. ಅಷ್ಟೇ ಅಲ್ಲದೇ ಕೆಲವೊಂದು ದಿನಪತ್ರಿಕೆಗಳಲ್ಲಿ ಅವರ ಲೇಖನಗಳು ಸಹ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ವೈದ್ಯರ ಕುರಿತಂತೆ ಸಿನೆಮಾ ಮಾಡಿ ತೆರೆಗೆ ತರುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಇನ್ನೂ ಈ ಕುರಿತು ಶಶಿಕಲಾ ವೈದ್ಯ ವೃತ್ತಿ ಅತ್ಯಂತ ಗೌರವದಿಂದ ಕೂಡಿದ್ದು, ವೃತ್ತಿಯ ಪ್ರಾಮುಖ್ಯತೆ, ಸಮಾಜಕ್ಕೆ ವೈದ್ಯರು ನೀಡುವಂತಹ ಕೊಡುಗೆ ಎಂಬೆಲ್ಲಾ ವಿಚಾರಗಳ ಕುರಿತು ಈ ಚಿತ್ರದಲ್ಲಿ ಬರಲಿದೆ. ವೈದ್ಯರು ತಮ್ಮ ವೈಯುಕ್ತಿಕ ಸಮಸ್ಯೆಗಳನ್ನು ಬಿಟ್ಟು ಇತರರ ಆರೋಗ್ಯ ಕಾಪಾಡುವ ಕೆಲಸ ಮಾಡುತ್ತಾರೆ. ಇಷ್ಟಾದರೂ ವೈದ್ಯರ ಮೇಲೆ ಹಲ್ಲೆಗಳು ನಡೆಯುತ್ತಿವೆ. ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ ಈ ಚಿತ್ರ ಮೂಡಿಬರಲಿದೆ ಎಂದಿದ್ದಾರೆ.

Trending

To Top