ಮೂರು ವರ್ಷದ ಬಳಿಕ ತಾಯ್ನಾಡಿಗೆ ಬಂದ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ….!

ಸುಮಾರು ಮೂರು ವರ್ಷಗಳ ಬಳಿಕ ಗ್ಲೋಬಲ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಭಾರತಕ್ಕೆ ಬಂದಿದ್ದಾರೆ. ಕಳೆದ ಸೋಮವಾರ ರಾತ್ರಿ ಮುಂಬೈನ ವಿಮಾನನಿಲ್ದಾಣದಲ್ಲಿ ಆಕೆ ಇಳಿದಿದ್ದು, ಆಕೆಯನ್ನು ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಭವ್ಯ ಸ್ವಾಗತ ಕೋರಿದರು. ನಟಿ ಪ್ರಿಯಾಂಕರವರೊಂದಿಗೆ ಆಕೆಯ ಪತಿ ನಿಕ್ ಜಾನ್ಸನ್ ಹಾಗೂ ಪುತ್ರಿ ಸಹ ಇಂಡಿಯಾಗೆ ಬಂದಿದ್ದಾರೆ. ಆಕೆಯನ್ನು ಮತ್ತೆ ಭಾರತದಲ್ಲಿ ನೋಡಲು ಅನೇಕ ವರ್ಷಗಳಿಂದ ಅಭಿಮಾನಿಗಳು ಕಾದಿದ್ದು ಇದೀಗ ಅವರ ಆಸೆ ಈಡೇರಿದೆ.

ನಟಿ ಪ್ರಿಯಾಂಕ ಚೋಪ್ರಾ ವಿದೇಶದ ನಿಕ್ ಜಾನ್ಸನ್ ಜೊತೆ ವಿವಾಹವಾದ ಬಳಿಕ ಆಕೆ ಲಾಸ್ ಏಂಜಲ್ಸ್ ನಲ್ಲೇ ಸೆಟಲ್ ಆದರು. ಮದುವೆಯಾದಾಗಿನಿಂದ ಪ್ರಿಯಾಂಕ ಇಂಡಿಯಾದತ್ತ ಮುಖ ಮಾಡಿರಲಿಲ್ಲ. ಇನ್ನೂ ಸೋಷಿಯಲ್ ಮಿಡಿಯಾದಲ್ಲೂ ಆಕೆ ಇಂಡಿಯಾಗೆ ಬಂದಂತಹ ಯಾವುದೇ ಆಧಾರಗಳಿಲ್ಲ. ಮೂರು ವರ್ಷದ ಗ್ಯಾಪ್ ಬಳಿಕ ಆಕೆ ಇಂಡಿಯಾಗೆ ಬಂದಿದ್ದಾರೆ. ಜೊತೆಗೆ ಕೊರೊನಾ ಲಾಕ್ ಡೌನ್ ಕಾರಣದಿಂದ ದೇಶಗಳ ನಡುವೆ ಸಂಚಾರ ನಿರ್ಭಂದ ಸಹ ಇತ್ತು. ಆದ್ದರಿಂದ ಇಂಡಿಯಾಗೆ ಬರಲು ಆಗಲಿಲ್ಲ ಎಂದು ಪ್ರಿಯಾಂಕಾ ಹೇಳಿದ್ದಾರೆ. ಇನ್ನೂ ಇಂಡಿಯಾ ಪ್ರವಾಸದ ಬಗ್ಗೆ ಈಗಾಗಲೇ ಪ್ರಿಯಾಂಕ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಬೋರ್ಡಿಂಗ್ ಪಾಸ್ ಪೊಟೊ ಶೇರ್ ಮಾಡಿದ್ದರು. ಇನ್ನೂ ಈ ಪೋಸ್ಟ್ ಆಕೆ ಹಂಚಿಕೊಂಡ ಕೂಡಲೇ ಆಕೆಯ ಅಭಿಮಾನಿಗಳೂ ಸಹ ಪುಲ್ ಖುಷಿಯಾದರು. ತಮ್ಮ ಅಭಿಮಾನಿಸುವ ನಟಿಯನ್ನು ನೇರವಾಗಿ ನೋಡಲು ಕಾತುರದಿಂದ ಕಾಯುತ್ತಿದ್ದರು. ಪ್ರಿಯಾಂಕ ಇದೀಗ ತಮ್ಮ ಅಭಿಮಾನಿಗಳ ಆಸೆಯನ್ನು ಪೂರೈಸಲು ಇಂಡಿಯಾಗೆ ಬಂದಿದ್ದಾರೆ.

ಇನ್ನೂ ಪ್ರಿಯಾಂಕಾ ಚೋಪ್ರಾ ಕಳೆದ 2017 ರಲ್ಲಿ ಬೆವಾಚ್ ಎಂಬ ಸಿನೆಮಾದ ಮೂಲಕ ಹಾಲಿವುಡ್ ಗೆ ಎಂಟ್ರಿ ಕಟೊಟರು. ಅಲ್ಲೇ ನಿಕ್ ಜಾನ್ಸನ್ ಎಂಬಾತನೊಂದಿಗೆ ಪ್ರೀತಿಗೆ ಬಿದ್ದರು. ಬಳಿಕ 2018ರಲ್ಲಿ ವಿವಾಹವಾದರು. ವಿವಾಹವಾದ ಬಳಿಕ ಪ್ರಿಯಾಂಕ ಪತಿಯೊಂದಿಗೆ ಲಾಸ್ ಏಂಜಲ್ಸ್ ನಲ್ಲೇ ಉಳಿದರು. ಬಳಿಕ ತಮ್ಮ ಅಭಿಮಾನಿಗಳಿಗೆ ಟಚ್ ನಲ್ಲಿರುವ ನಿಟ್ಟಿನಲ್ಲಿ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮಿಡಿಯಾ ಮೂಲಕವೇ ಟಚ್ ನಲ್ಲಿರುತ್ತಿದ್ದರು. ಅವರ ವೈಯುಕ್ತಿಕ ಜೀವನದ ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುತ್ತಿದ್ದರು. ಇನ್ನೂ ಕೆಲವು ತಿಂಗಳುಗಳ ಹಿಂದೆಯಷ್ಟೆ ಪ್ರಿಯಾಂಕಾ ಸೆರಗೋಸಿ ಪದ್ದತಿಯ ಮೂಲಕ ಮಗುವನ್ನು ಪಡೆದುಕೊಂಡರು. ಇನ್ನೂ ಮಗಳೊಂದಿಗೆ ಇಬ್ಬರೂ ಸಹ ಅನೇಕ ಪೊಟೋಗಳನ್ನು ಸಹ ಸೋಷಿಯಲ್ ಮಿಡಿಯಾ ಮೂಲಕವೇ ಹಂಚಿಕೊಳ್ಳುತ್ತಿದ್ದರು.

ಇನ್ನೂ ಮಗು ಜನಿಸಿ ತಿಂಗಳುಗಳು ಕಳೆದರೂ ಇನ್ನೂ ಪ್ರಿಯಾಂಕ ತಮ್ಮ ಪುತ್ರಿ ಪೊಟೊಅನ್ನು ಸಾರ್ವಜನಿಕವಾಗಿ ತೋರಿಸಿರಲಿಲ್ಲ. ಆಕೆ ಪ್ರತಿಯೊಬಾರಿ ಮಗಳ ಪೊಟೊ ಶೇರ್‍ ಮಾಡಿದಾಗ ಮುಖವನ್ನು ಹೈಡ್ ಮಾಡುತ್ತಿದ್ದರು. ಇನ್ನೂ ಆಕೆಯ ಅಭಿಮಾನಿಗಳು ಸಹ ಮಗಳ ಮುಖವನ್ನು ತೋರಿಸುವಂತೆ ಕಾಮೆಂಟ್ ಗಳ ಮೂಲಕ ರಿಕ್ವೆಸ್ಟ್ ಮಾಡುತ್ತಿದ್ದರು. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ.

Previous articleಪುನೀತ್ ರಾಜ್ ಕುಮಾರ್ ರವರ ಕರ್ನಾಟಕ ರತ್ನ ಪ್ರಶಸ್ತಿ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಮಾತನಾಡಿದ ಸ್ಟಾರ್ ಗಳು…!
Next articleಮಗಳೊಂದಿಗೆ ನೈಟ್ ಔಟ್ ಹೊರಟ ಅಲ್ಲು ಅರ್ಜುನ್, ವೈರಲ್ ಆದ ಪೊಟೋ…!