ಭಾರತದ ಜನತೆಗೆ ತುಂಬಾ ಅಸೂಯೆ ಎಂದ ನಟಿ ಪ್ರಿಯಾಂಕಾ ಚೋಪ್ರಾ, ಆಕ್ರೋಷ ಗೊಂಡ ನೆಟ್ಟಿಗರು….!

ಬಾಲಿವುಡ್ ಸಿನೆಮಾಗಳ ಮೂಲಕ ಇದೀಗ ಹಾಲಿವುಡ್ ಸಿನೆಮಾಗಳಲ್ಲಿ ನಟಿಸುತ್ತಾ ಫೇಮ್ ಪಡೆದುಕೊಂಡಿರುವ ನಟಿ  ಪ್ರಿಯಾಂಕಾ ಚೋಪ್ರಾ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಜೊತೆಗೆ ಆಗಾಗ ಕೆಲವೊಂದು ವಿವಾದಗಳು, ಟ್ರೋಲ್ ಗಳನ್ನು ಸಹ ಆಕೆ ಎದುರಿಸುತ್ತಿದ್ದಾರೆ. ಇದೀಗ ಆಕೆ ಸಂದರ್ಶನದಲ್ಲಿ ನೀಡಿದ ಒಂದು ಹೇಳಿಕೆಯ ಕಾರಣದಿಂದ ಆಕೆಯ ವಿರುದ್ದ ಭಾರತೀಯರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ. ದೇಶದ ನಟಿಯಾದ ಪ್ರಿಯಾಂಕಾ ಚೋಪ್ರಾ ವಿರುದ್ದ ಭಾರತೀಯರು ಆಕ್ರೋಷಗೊಳ್ಳಲು ಕಾರಣ ಏನು ಎಂಬ ವಿಚಾರಕ್ಕೆ ಬಂದರೇ,

ಸಿನಿರಂಗ ಸೇರಿದಂತೆ ಯಾವುದೇ ರಂಗದಲ್ಲಾದರೂ ಸ್ಟಾರ್‍ ಆಗುವುದಕ್ಕೂ ಮುಂಚೆ ಏನೋ ಒಂದು ಕಾರಣದಿಂದ ಯಾವುದೋ ಒಂದು ಸಮಯದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ತನ್ನ ಕೆರಿಯರ್‍ ನಲ್ಲಿ ಅನೇಕ ಕಷ್ಟಗಳನ್ನು ಸಹ ಪ್ರಿಯಾಂಕಾ ಚೋಪ್ರಾ ಎದುರಿಸಿ ಇದೀಗ ಗ್ಲೋಬಲ್ ಸ್ಟಾರ್‍ ಆಗಿದ್ದಾರೆ. ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ಚೋಪ್ರಾ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ನಟಿ ಪ್ರಿಯಾಂಕಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಪ್ರಾರಂಭದಲ್ಲಿ  ತಾನು ಅನೇಕ ಸಮಸ್ಯೆಗಳನ್ನು ಎದುರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ಇಂಡಿಯಾದ ಬಹುತೇಕ ಜನತೆ ತುಂಬಾ ಅಸೂಯೆಯನ್ನು ಹೊಂದಿದ್ದಾರೆ ಎಂದು ಹೇಳಿದ್ದು, ಬೇರೆಯವರ ಸಕ್ಸಸ್ ಅನ್ನು ತಮ್ಮ ಸಕ್ಸಸ್ ಎಂದು ಭಾವಿಸುವಂತಹವರು ಭಾರತದಲ್ಲಿ ತುಂಬಾನೆ ವಿರಳ ಎಂದು ಹೇಳಿಕೆ ನೀಡಿದ್ದು, ಈ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದನ್ನು ಕಂಡ ಭಾರತೀಯರು ಆಕೆಯ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಇನ್ನೂ ಅನೇಕರು ನನ್ನಲ್ಲಿನ ಪ್ರತಿಭೆಯನ್ನು ಹಾಗೂ ಸಿನೆಮಾ ಕೆರಿಯರ್‍ ಅನ್ನು ನಾಶ ಮಾಡಲು ತುಂಬಾನೆ ಪ್ರಯತ್ನ ಮಾಡಿದ್ದರು. ಅಷ್ಟೇ ಅಲ್ಲದೇ ನನಗೆ ಕೆಲಸ ಸಿಗದಂತೆ ಸಿನೆಮಾ ರಂಗದಿಂದ ಹೊರಹಾಕಲು ಸಹ ತುಂಬಾ ಪ್ರುತ್ನಗಳನ್ನು ನಡೆಸಿದ್ದರಂತೆ. ಸಿನಿರಂಗದಲ್ಲಿ ಆಕೆ ತುಂಬಾನೆ ಕಷ್ಟಪಟ್ಟಿದ್ದಾಗಿ ಸಂದರ್ಶನದಲ್ಲಿ ವಿಚಾರ ಹಂಚಿಕೊಂಡಿದ್ದಾರೆ. ನನ್ನ ಜೀವನದಲ್ಲಿ ಎದುರಾದ ಅನೇಕ ಸಮಸ್ಯೆಗಳನ್ನು ನಾನು ಧೈರ್ಯವಾಗಿ ಎದುರಿಸಿದ್ದೇನೆ. ಇಂತಹ ಸ್ಥಿತಿಗೆ ಬರಲು, ಎಂತಹುದೇ ಪರಿಸ್ಥಿತಿ ಬಂದರೂ ಸಹ ಹಿಂದೆ ಸರಿಯದೇ ನನ್ನ ಗುರಿ ತಲುಪಲು ಶ್ರಮವಹಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಸದ್ಯ ಪ್ರಿಯಾಂಕಾ ಮಾಡಿದಂತಹ ಕಾಮೆಂಟ್ ಗಳು ಸಿನಿರಂಗದಲ್ಲಿ ಹಾಟ್ ಟಾಪಿಕ್ ಆಗಿದ್ದು, ಆಕೆಯ ವಿರುದ್ದ ಅನೇಕರು ಆಕ್ರೋಷ ಹೊರಹಾಕಿದ್ದಾರೆ.

ವಿದೇಶಿ ವ್ಯಕ್ತಿಯನ್ನು ಮದುವೆಯಾಗಿ, ಅಲ್ಲೇ ಇದ್ದ ಕಾರಣದಿಂದ ನಿನಗೆ ಲೈಪ್ ಕೊಟ್ಟ ಭಾರತವನ್ನು ಈ ರೀತಿ ಮಾತನಾಡುತ್ತೀಯಾ, ನಿನಗೆ ಕೊಬ್ಬು ಜಾಸ್ತಿಯಾಗಿದೆಯೇ ಎಂಬೆಲ್ಲಾ ಸ್ಟ್ರಾಂಗ್ ಕೌಂಟರ್‍ ನೀಡಿದ್ದಾರೆ. ಪ್ರತಿಯೊಂದೂ ದೇಶದಲ್ಲೂ ಸಹ ಕೆಲವರು ಒಳ್ಳೆಯವರು, ಕೆಲವರು ಕೆಟ್ಟವರು ಸಹ ಇರುತ್ತಾರೆ. ಆದರೆ ನಿನಗೆ ಜೀವನ ಕೊಟ್ಟಂತಹ ದೇಶದ ವಿರುದ್ದ ಮಾತನಾಡುವುದು ತಪ್ಪು, ಪ್ರಿಯಾಂಕಾ ರವರನ್ನು ಇಂಡಿಯಾದಲ್ಲಿ ಬ್ಯಾನ್ ಮಾಡಬೇಕು ಎಂದೂ ಸಹ ಆಗ್ರಹ ವ್ಯಕ್ಯವಾಗುತ್ತಿದೆ. ಸದ್ಯ ಈ ಸುದ್ದಿ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದ್ದು, ಈ ವಿವಾದ ಎಲ್ಲಿಯ ವರೆಗೂ ಸಾಗುತ್ತೋ ಎಂಬುದನ್ನು ಕಾದು ನೋಡಬೇಕಿದೆ.

Previous articleತಂದೆಯನ್ನು ಎಮೋಷನಲ್ ಪೋಸ್ಟ್ ಹಂಚಿಕೊಂಡ ಮಹೇಶ್ ಬಾಬು….!
Next articleಸಮುದ್ರದ ನೀರಿನಲ್ಲಿ ನೆನೆಯುತ್ತಾ ಹಾಟ್ ಪೋಸ್ ಕೊಟ್ಟ ಶ್ರೀಮುಖಿ, ನೆವರ್ ಬಿಪೋರ್ ಅನ್ನೋ ತರಹ ಪೋಸ್ ಕೊಟ್ಟ ಆಂಕರ್….!