ಐಪಿಎಲ್ ಪಂದ್ಯಗಳನ್ನು ನೋಡದೆ ಇರುವರು ಬಹಳ ಕಡಿಮೆ ಜನ. ಮಕ್ಕಳಿಂದ ಹಿಡಿದು ದೊಡ್ಡವರ ವರೆಗು ಬಹುತೇಕ ಎಲ್ಲರೂ ಐಪಿಎಲ್ ನೋಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್ ಜನರಿಗೆ ಸಿಗುತ್ತಿರುವ ಅತ್ಯುತ್ತಮ ಮನರಂಜನೆ ಗಳಲ್ಲಿ ಪ್ರಮುಖವಾದದ್ದು ಐಪಿಎಲ್. ಐಪಿಎಲ್ ಮ್ಯಾಚ್ ಗಳ ಜೊತೆಗೆ ಐಪಿಎಲ್ ಆಟಗಾರರು ಸಹ ವೀಕ್ಷಕರಿಗೆ ಪರಿಚಿತರಾಗಿರುತ್ತಾರೆ.
ಐಪಿಎಲ್ ಪಂದ್ಯಗಳಲ್ಲಿ ಪ್ರಮುಖವಾದ ಆಟಗಾರರಲ್ಲಿ ಒಬ್ಬರು ಗ್ಲೆನ್ ಮ್ಯಾಕ್ಸ್ವೆಲ್. ಕಳೆದ ವರ್ಷ ಆರ್.ಸಿ.ಬಿ ತಂಡಕ್ಕೆ ಇವರು ಲಕ್ಕಿ ಪ್ಲೇಯರ್ ಆಗಿದ್ದರು. ಗ್ಲೆನ್ ಮ್ಯಾಕ್ಸ್ವೆಲ್ ಆಲ್ ರೌಂಡರ್. ಅದ್ಭುತವಾಗಿ ಬ್ಯಾಟಿಂಗ್ ಮಾಡಿ ರನ್ಸ್ ಗಳನ್ನು ಗಳಿಸುತ್ತಾರೆ. ಸಿಕ್ಸ್ ಫೋರ್ ಗಳನ್ನೇ ಭಾರಿಸುತ್ತಾರೆ. ಉತ್ತಮವಾಗಿ ಬೌಲಿಂಗ್ ಮಾಡಿ ವಿಕೆಟ್ ಗಳ ಪತನವನ್ನು ಮಾಡುತ್ತಾರೆ.
ಗ್ಲೆನ್ ಮ್ಯಾಕ್ಸ್ವೆಲ್ ಮೂಲತಃ ಆಸ್ಟ್ರೇಲಿಯಾದವರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಇವರು. ಐಪಿಎಲ್ ನಲ್ಲಿ ನಮ್ಮ ಭಾರತ ತಂಡಗಳ ಪರವಾಗಿ ಉತ್ತಮ ಕ್ರಿಕೆಟ್ ಪ್ರದರ್ಶನ ನೀಡುತ್ತಿದ್ದರು. ಅದರಲ್ಲೂ ಆರ್.ಸಿ.ಬಿ ತಂಡಕ್ಕೆ ಒಳ್ಳೆಯ ಅಸೆಟ್ ಆಗಿದ್ದರು ಎಂದರೆ ತಪ್ಪಾಗುವುದಿಲ್ಲ. ಭಾರತ ತಂಡಗಳ ಪರವಾಗಿ ಐಪಿಎಲ್ ನಲ್ಲಿ ಆಡುವ ಗ್ಲೆನ್ ಮ್ಯಾಕ್ಸ್ವೆಲ್ ಅವರಿಗೆ ಭಾರತದ ಜೊತೆಗೆ ಅವಿನಾಭಾವ ಸಂಬಂಧ ಶುರುವಾಗಿದೆ.
ಈಗ ಗ್ಲೆನ್ ಮ್ಯಾಕ್ಸ್ವೆಲ್ ಅವರು ಭಾರತ ದೇಶದ ಅಳಿಯನಾಗಿದ್ದಾರೆ. ಭಾರತ ಮೂಲದವರಾದ ಅದರಲ್ಲೂ ದಕ್ಷಿಣ ಭಾರತದ ಹುಡುಗಿಯ ಜೊತೆ ಗ್ಲೆನ್ ಮ್ಯಾಕ್ಸ್ವೆಲ್ ಮದುವೆಯಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ಮದುವೆ ಆಗಿರುವ ಹುಡುಗಿಯ ಹೆಸರು ವಿನಿ ರಾಮನ್. ಇವರು ಹುಟ್ಟಿದ್ದು ಬೆಳೆದದ್ದು ಎಲ್ಲವೂ ಆಸ್ಟ್ರೇಲಿಯಾದಲ್ಲಿಯೇ, ಮೆಲ್ಬೋರ್ನ್ ನಲ್ಲಿ ಓದಿದರು ವಿನಿ ರಾಮನ್.
ಆದರೆ ಈಕೆಯ ತಂದೆ ತಾಯಿ ದಕ್ಷಿಣ ಭಾರತದ ಮೂಲದವರಾಗಿದ್ದು, ಆಸ್ಟ್ರೇಲಿಯಾದಲ್ಲಿ ಸೆಟ್ಲ್ ಆಗಿದ್ದಾರೆ. ವಿನಿ ರಾಮನ್ ಅವರು ವಿದ್ಯಾಭ್ಯಾಸ ಮುಗಿಸಿ, ಫಾರ್ಮಸಿಸ್ಟ್ ಆಗಿ ಕೆಲಸ ಶುರು ಮಾಡಿದರು. ಬಿಡುವಿನ ಸಮಯದಲ್ಲಿ ಗಾಲ್ಫ್ ಆಡುವುದು ವಿನಿ ಅವರಿಗೆ ತುಂಬಾ ಇಷ್ಟ. ಹಲವು ವರ್ಷಗಳಿಂದ ಪ್ರೀತಿಸಿ ಡೇಟಿಂಗ್ ಮಾಡುತ್ತಿದ್ದರು ಗ್ಲೆನ್ ಮ್ಯಾಕ್ಸ್ವೆಲ್ ಮತ್ತು ವಿನಿ ರಾಮನ್ ಹಲವು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಗ್ಲೆನ್ ಮ್ಯಾಕ್ಸ್ವೆಲ್ ಆಡುತ್ತಿದ್ದ ಕೆಲವು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ವಿನಿ ಸಹ ಬರುತ್ತಿದ್ದರು ಎನ್ನಲಾಗಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ಇವರಿಬ್ಬರ ನಿಶ್ಚಿತಾರ್ಥ ನೆರವೇರಿತ್ತು. ನಿಶ್ಚಿತಾರ್ಥದ ಫೋಟೋಗಳನ್ನು ಗ್ಲೆನ್ ಮತ್ತು ವಿನಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಗ್ಲೆನ್ ಮ್ಯಾಕ್ಸ್ವೆಲ್ ನಮ್ಮ ಭಾರತದ ಹುಡುಗಿಯ ಜೊತೆ ಮದುವೆಯಾಗುತ್ತಿದ್ದಾರೆ ಎಂದು ತಿಳಿದು ಇಲ್ಲಿನ ಅಭಿಮಾನಿಗಳು ಸಹ ಬಹಳ ಸಂತೋಷ ಪಟ್ಟಿದ್ದರು.
ಇದೀಗ ಈ ಜೋಡಿಯ ಮದುವೆ ನಡೆದಿದೆ. ಮದುವೆಯ ಫೋಟೋ ಮತ್ತು ವಿಡಿಯೋಹಾಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ವಿನಿ ರಾಮನ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಅಪ್ಪಟ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿರುವುದು ವಿಶೇಷವಾದ ವಿಚಾರ. ಆಸ್ಟ್ರೇಲಿಯಾದಲ್ಲೇ ಮದುವೆ ನಡೆದಿದ್ದರೂ ಸಹ, ಹಿಂದೂ ಶಾಸ್ತ್ರಗಳ ಪ್ರಕಾರ ಮದುವೆ ನಡೆದಿದೆ.
ಗ್ಲೆನ್ ಮ್ಯಾಕ್ಸ್ವೆಲ್ ಮಧುಮಗನಾಗಿ ಸಾಂಪ್ರದಾಯಿಕ ಉಡುಪು ಧರಿಸಿ ಮಿಂಚಿದ್ದಾರೆ. ಸಧ್ಯಕ್ಕೆ ಇವರಿಬ್ಬರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಇನ್ನೂ ಗ್ಲೇನ್ ಮ್ಯಾಕ್ಸ್ವೇಲ್ ಅವರು ಮುಂದಿನ ವಾರದಿಂದ RCB ತಂಡಕ್ಕೆ ವಾಪಾಸ್ ಬರಲಿದ್ದು, IPL ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮ್ಯಾಕ್ಸ್ವೇಲ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಫ್ಯಾನ್ ಬೇಸ್ ಇದೆ.
ತೆಲುಗಿನಲ್ಲಿ ಬ್ಲಾಕ್ ಬ್ಲಸ್ಟರ್ ಹಿಟ್ ಹೊಡೆದ ವಕೀಲ್ ಸಾಭ್ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಅನನ್ಯ ನಾಗಳ್ಳ ಇತ್ತೀಚಿಗೆ ಸಖತ್…
ಬಾಲಿವುಡ್ ನಲ್ಲಿ ಫೈರ್ ಬ್ರಾಂಡ್ ಎಂತಲೇ ಖ್ಯಾತಿ ಪಡೆದುಕೊಂಡ ಸ್ಟಾರ್ ನಟಿ ಕಂಗನಾ ರಾನೌತ್ ಆಗಾಗ ದೊಡ್ಡ ದೊಡ್ಡ ಸೆಲೆಬ್ರೆಟಿಗಳ…
ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್ ಗ್ಲಾಮರ್ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್ ಡೋಸ್ ಏರಿಸುತ್ತಿದ್ದಾರೆ.…
ಬಾಲಿವುಡ್ ನ ಮುನ್ನಾ ಮೈಕಲ್ ಎಂಬ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ನಿಧಿ ಅಗರ್ವಾಲ್ ಕಡಿಮೆ ಸಮಯದಲ್ಲೇ…
ಬಾಲಿವುಡ್ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಅಭಿನಯದ ಮೂಲಕ ಕ್ರೇಜ್ ಪಡೆದುಕೊಂಡಿದ್ದಾರೆ. ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ…
ಸಿನೆಮಾ ಸೆಲೆಬ್ರೆಟಿಗಳ ಮದುವೆ ಬಗ್ಗೆ ಸುದ್ದಿಗಳು ಸದಾ ಕೇಳಿಬರುತ್ತಲೇ ಇರುತ್ತದೆ. ಅದರಲ್ಲೂ ನಟಿಯರ ಮದುವೆ ಬಗ್ಗೆ ಅವರ ಅಭಿಮಾನಿಗಳೂ ಸೇರಿದಂತೆ…
Leave a Comment