ಸದ್ಯ ಕನ್ನಡದಲ್ಲಿ ಗಟ್ಟಿಮೇಳ ಧಾರಾವಾಹಿ ಬಹಳ ಫೇಮಸ್! TRP ಯಲ್ಲಿ ಜೊತೆಜೊತೆಯಲಿ ಧಾರಾವಾಹಿಯನ್ನು ಬಿಟ್ಟರೆ ಗಟ್ಟಿಮೇಳ ದಾರಾವಾಹಿಯದ್ದೇ ಮೇಲುಗೈ ಎಂದರೆ ತಪ್ಪಾಗುವುದಿಲ್ಲ. ಗಟ್ಟಿಮೇಳ ಧಾರಾವಾಹಿಯಲ್ಲಿ ನಿಶಾ, ರಕ್ಷಿತ್ ಗೌಡ ಸೇರಿದಂತೆ ಹಲವಾರು ಯುವ ನಟ/ ನಟಿಯರು ಇದ್ದಾರೆ. ಅವರಲ್ಲಿ ಅನ್ವಿತಾ ಸಾಗರ್ ಅವರು ಗಟ್ಟಿಮೇಳ ಧಾರಾವಾಹಿಯಲ್ಲಿ ಆದ್ಯ ಎಂಬ ಪಾತ್ರವನ್ನು ಮಾಡಿದ್ದಾರೆ. ಅನ್ವಿತಾ ಸಾಗರ್ ಅವರು ಧಾರಾವಾಹಿಗಳಿಗೆ ಬರುವ ಮುನ್ನ 2015 ರಿಂದ ಸುಮಾರು 5 ತುಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ! “ಬಾಲೆ ಪುದರ್ ದೀಕ” ಎಂಬ ತುಳು ಚಿತ್ರದಲ್ಲಿ ನಟಿಸಿದ್ದಾರೆ! ಅದರ ಒಂದು ಹಾಡು ಈಗ ವೈರಲ್ ಆಗಿದ್ದು, ಅನ್ವಿತಾ ಸಾಗರ್ ಅವರ ಸಕತ್ ವಿಡಿಯೋ ಸಾಂಗ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ ಗಟ್ಟಿಮೇಳ. ಶುರುವಾದಾಗಿನಿಂದಲೂ ಜನಪ್ರಿಯತೆಯ ನಂಬರ್ ಒನ್ ಗಟ್ಟಿಮೇಳ ಧಾರಾವಾಹಿ. ಈ ಧಾರಾವಾಹಿಯನ್ನು ಬಹಳ ಇಷ್ಟಪಟ್ಟಿದ್ದಾರೆ ಕರ್ನಾಟಕದ ಜನತೆ. ಪುಟ್ಟಗೌರಿ ಧಾರಾವಾಹಿ ಖ್ಯಾತಿಯ ನಟ ರಕ್ಷ್ ಹಾಗೂ ಹೊಸ ಪ್ರತಿಭೆ ನಿಶಾರ ಅಭಿನಯ ಬಹಳ ಇಷ್ಟವಾಗಿದೆ. ವೇದಾಂತ್ ಅಮೂಲ್ಯ ಜಗಳ ಈಗ ಶುರುವಾಗಿರುವ ಅವರ ನಡುವಿನ ಪ್ರೀತಿ. ಅಕ್ಕ ತಂಗಿಯರ ಬಾಂಧವ್ಯ. ಅಮೂಲ್ಯರ ತಾಯಿ ಪಾತ್ರದಲ್ಲಿ ನಟಿಸಿರುವ ಸುಧಾ ನರಸಿಂಹರಾಜು ಅವರ ಅಭಿನಯ, ಜೊತೆಗೆ ವೇದಾಂತ್ ಮನೆಯವರ ಅಭಿನಯ ಎಲ್ಲವನ್ನೂ ಜನರು ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.
ಜನಪ್ರಿಯತೆ ಮಾತ್ರವಲ್ಲದೆ ಟಿ.ಆರ್.ಪಿ ಯಲ್ಲೂ ನಂಬರ್ ಒನ್ ಸ್ಥಾನ ಗಳಿಸಿದೆ ಗಟ್ಟಿಮೇಳ. ಶುರುವಾದಾಗಿನಿಂದಲೂ ಟಿ.ಆರ್.ಪಿ ಹಾಗೂ ವೀಕ್ಷಣೆಯಲ್ಲಿ ಮುಂದಿರುವ ಗಟ್ಟಿಮೇಲೆ, ಜೊತೆಜೊತೆಯಲಿ ಧಾರಾವಾಹಿ ಶುರುವಾದ ನಂತರ ಸ್ವಲ್ಪ ಟಿ.ಆರ್.ಪಿಯಲ್ಲಿ ಕಡಿಮೆಯಾಗಿತ್ತು. ಆದರೆ ಈಗ ಬ್ಯಾಕ್ ಟು ಫಾರ್ಮ್ ಎನ್ನುವಂತೆ ಮತ್ತೆ ಟಿ.ಆರ್.ಪಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಬಂದಿದೆ. ಗಟ್ಟಮೇಳ ಧಾರಾವಾಹಿಯ ಎಲ್ಲಾ ಪಾತ್ರಗಳನ್ನು ಕರ್ನಾಟಕದ ಜನ ಮೆಚ್ಚಿಕೊಂಡಿದ್ದಾರೆ ಅದರಲ್ಲೂ ವೇದಾಂತ್ ಅಮೂಲ್ಯ ಜೋಡಿ, ಅವರಿಬ್ಬರ ಜಗಳ ಇವೆಲ್ಲವೂ ಜನರ ಫೆವರೆಟ್.
ವೇದಾಂತ್ ಪಾತ್ರ ನಿರ್ವಹಿಸುತ್ತಿರುವ ನಟ ರಕ್ಷ್ ಎಂದರೆ ಹುಡುಗಿಯರಿಗೆ ಅಚ್ಚುಮೆಚ್ಚು. ಇದೀಗ ನ್ಯೂಮರಾಲಜಿ ಪ್ರಕಾರ. ನಟ ರಕ್ಷ್ ತಮ್ಮ ಹೆಸರಿನಲ್ಲಿ ಒಂದು ಬದಲಾವಣೆ ಮಾಡಿಕೊಂಡಿದ್ದಾರೆ. ಅದೆಂದರೆ, Raksh ಹೆಸರಿಗೆ ಮತ್ತೊಂದು k ಸೇರಿಸಿ Rakksh ಎಂದು ಹೆಸರು ಬದಲಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ನಟ, ನ್ಯೂಮರಾಲಜಿ ಪ್ರಕಾರ ಮತ್ತೊಂದು k ಸೇರಿಸಬೇಕಾಯಿತು ಎಂದಿದ್ದಾರೆ. ಲಾಕ್ ಡೌನ್ ಬಳಿಕ ಗಟ್ಟಿಮೇಳ ಧಾರಾವಾಹಿ ಶುರುವಾದ ನಂತರ, ನಟ ರಕ್ಷ್ ಕೆಲವು ದಿನ ಬ್ರೇಕ್ ತೆಗೆದುಕೊಂಡಿದ್ದರು. ವೇದಾಂತ್ ಪಾತ್ರವನ್ನು ಟಿವಿಯಲ್ಲಿ ನೋಡಲಾಗದೆ ಬಹಳ ಮಿಸ್ ಮಾಡಿಕೊಂಡಿದ್ದರು ಅಭಿಮಾನಿಗಳು.
