Kannada Serials

ಗಟ್ಟಿಮೇಳ ಧಾರಾವಾಹಿಯ ಆರತಿ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಪ್ರತಿದಿನ ಪ್ರಸಾರವಾಗೋ ಪ್ರತಿಯೊಂದು ಸೀರಿಯಲ್ ಗಳು ವೀಕ್ಷಕರನ್ನ ತನ್ನತ್ತ ಸೆಳ್ಕೊಂಡು ಬಿಟ್ಟಿದೆ . ಸಂಜೆ ಆದ್ರೆ ಸಾಕು ಟಿ.ವಿ ಮುಂದೆ ಹಾಜರಾಗ್ತಾರೆ ಸೀರಿಯಲ್ ಅಭಿಮಾನಿಗಳು ಅದ್ರಲ್ಲು ತನ್ನ ಕಡಿಮೆ ಅವಧಿಯಲ್ಲೇ ಅತೀ ಹೆಚ್ಚು ಪ್ರೇಕ್ಷಕರ ಮನಸ್ಸನ್ನ ಗೆದ್ದಿರುವ ಗಟ್ಟಿಮೇಳ ಟಿ ಆರ್‍ ಪಿ ವಿಚಾರದಲ್ಲೂ ಮುಂಚೂಣಿಯಲ್ಲಿದೆ . ಈ ಸೀರಿಯಲ್ ನಲ್ಲಿ ಅಮೂಲ್ಯ ಹಾಗೂ ವೇದಾಂತ್ ವಸಿಷ್ಠ ಪಾತ್ರವನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳು ಉಳಿದ ಕಲಾವಿದರ ಪಾತ್ರಗಳನ್ನೂ ಇಷ್ಟಪಟ್ಟಿದ್ದಾರೆ . ಅವ್ರಲ್ಲಿ ಆರತಿ ಪಾತ್ರವನ್ನ ನಿರ್ವಹಿಸುವ ಅಶ್ವಿನಿ ಕೂಡ ಒಬ್ರು .

ಇವರು ಈ ಸೀರಿಯಲ್ ಗೆ ಬರೋದಕ್ಕೂ ಮುನ್ನ ಬೇರೆ ಬೇರೆ ಸೀರಿಯಲ್ ಗಳಲ್ಲಿ ತನ್ನ ವಿಭಿನ್ನ ಪಾತ್ರದಿಂದ ಮನೆ ಮನೆಯಲ್ಲೂ ಗುರುತಿಸಿಕೊಂಡಿದ್ದಾರೆ . ಇವರಿಗೆ ಅತೀ ಹೆಚ್ಚು ಹೆಸರು ತಂದುಕೊಟ್ಟ ಸೀರಿಯಲ್ ಗಟ್ಟಿಮೇಳ ಅಂದ್ರೆ ತಪ್ಪಾಗದು . ಇನ್ನು ಬೇರೆ ಸೀರಿಯಲ್ ನಲ್ಲೂ ನಟಿಸಿರುವ ಇವರಿಗೆ ಅತೀ ಹೆಚ್ಚು ಬೇಡಿಕೆಯೂ ಇದೆ . ಹೀಗಿರುವಾಗ ಅಶ್ವಿನಿ ಗಟ್ಟಿಮೇಳ ಸೀರಿಯಲ್ ನ ಒಂದು ಎಪಿಸೋಡ್ ಗೆ ಪಡೆಯುವ ಸಂಭಾವನೆ ಬರೊಬ್ಬರಿ ಎಂಟರಿಂದ ಹನ್ನೆರಡು ಸಾವಿರದ (8000 to 12000 per episode) ವರೆಗೆ ಸಂಭಾವನೆಯನ್ನ ಪಡಿತಾರೆ . ಒಟ್ಟಿನಲ್ಲಿ ಗಟ್ಟಿಮೇಳ ಸೀರಿಯಲ್ ನಿಂದ ಯಶಸ್ಸನ್ನ ಪಡೆದಿರುವ ಆರತಿ ಅಲಿಯಸ್ ಅಶ್ವಿನಿಗೆ ಇನ್ನಷ್ಟು ಮತ್ತಷ್ಟು ಉತ್ತಮ ಅವಕಾಶಗಳು ಒದಗಿ ಬರಲಿ.

ಜೀ ಕನ್ನಡ ಧಾರಾವಾಹಿಯ ಪ್ರತಿಷ್ಠಿತ ಧಾರಾವಾಹಿ ಗಟ್ಟಿಮೇಳ , ಈ ಧಾರಾವಾಹಿಯ ನಾಯಕಿ ಅಮೂಲ್ಯ ಪಾತ್ರಧಾರಿ ನಿಶಾ ಯಾರಿಗೆ ಗೊತ್ತಿಲ್ಲ … ಈಕೆ ಎಲ್ಲರಿಗೂ ಅಚ್ಚುಮೆಚ್ಚು. ವೇದಾಂತ್ ಮತ್ತು ಅಮೂಲ್ಯ ಜಗಳ ನೋಡುವ ಸಲುವಾಗಿಯೇ ಗಟ್ಟಿಮೇಳ ಧಾರಾವಾಹಿ ನೋಡುವ ಜನರೂ ಸಹ ಇದಾರೆ.ಧಾರಾವಾಹಿಯಲ್ಲಿ ನಟಿಸುವ ಎಲ್ಲಾ ನಟ ನಟಿಯರಿಗೂ ಸಾಮಾನ್ಯವಾಗಿ ಸೋಷಿಯಲ್ ಮೀಡಿಯಾ ಅಕೌಂಟ್ ಇದ್ದೇ ಇರುತ್ತದೆ. ಮತ್ತು ಹಲವಾರು ಅಭಿಮಾನಿಗಳೂ ಸಹ ಇರುತ್ತಾರೆ.ಇದೀಗ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ ಪಾತ್ರಧಾರಿಗೆ ಸಾಮಾಜಿಕ ಜಾಲತಾಣದ ಮೂಲಕ ಒಂದು ಬೇಸರದ ಸಂಗತಿ ನಡೆದಿದೆ. ನಿಶಾ ಮಿಲನ ಹೆಸರಿನಲ್ಲಿ ಕೆಲವರು ಹಣ ಸಂಗ್ರಹಿಸಿ ವಂಚನೆ ಮಾಡುತ್ತಿದ್ದಾರೆ. ನಾನು ಯಾರಿಗೂ ಹಣ ಸಂಗ್ರಹಿಸಲು ಸೂಚನೆ ಕೊಟ್ಟಿಲ್ಲ. ನನ್ನ ಹೆಸರು ದುರ್ಬಳಕೆ ಮಾಡಲಾಗುತ್ತಿದೆ ಎಂದು ನಟಿ ನಿಶಾ ಮಿಲನ್ ಬೇಸರ ವ್ಯಕ್ತಪಡಿಸಿದ್ದಾರೆ.

Trending

To Top