News

(video)KGF ಚಿತ್ರದಲ್ಲಿ ಗರುಡ ಪಾತ್ರವನ್ನು ಮಾಡಿದ್ದ ರಾಮ್ ಅವರ ಮೊಟ್ಟ ಮೊದಲ ಹಿಂದಿ ಸಂದರ್ಶನ ವಿಡಿಯೋ ವೈರಲ್

garuda-kgf

KGF ಚಿತ್ರದಲ್ಲಿ ರಾಮ್ ಅವರು ಒಂದು ಮುಖ್ಯ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. KGF ಚಿತ್ರದಲ್ಲಿ ರಾಮ್ ಅವರ ಪಾತ್ರದ ಹೆಸರು ಗರುಡ. KGF ಚಿತ್ರವನ್ನು ನೋಡಿ ರಾಕಿಂಗ್ ಸ್ಟಾರ್ ಯಶ್ ಅವರನ್ನು ಎಷ್ಟು ಹೊಗಳಿದ್ದಾರೋ ಅಷ್ಟೇ ಹೊಗಳಿಕೆಯನ್ನು ಗರುಡ ಪಾತ್ರಧಾರಿ ರಾಮ್ ಅವರು ಪಡೆದಿದ್ದಾರೆ. ರಾಮ್ ಅವರು ಈಗ ಇಡೀ ಇಂಡಿಯಾ ದಲ್ಲಿ ಬಹಳ ಫೇಮಸ್ ಆಗಿದ್ದಾರೆ. ಕನ್ನಡದ ನ್ಯೂಸ್ ಚಾನೆಲ್ ಗಳು ಇವರ ಸಂದರ್ಶನ ಮಾಡಲು ನಾ ಮುಂದು ತಾ ಮುಂದು ಅಂತ ವೇಟ್ ಮಾಡ್ತಾ ಇದ್ದಾರೆ. ಈಗ ಇದೆ ಮೊದಲ ಬಾರಿಗೆ ಒಂದು ಹಿಂದಿ ಚಾನೆಲ್ ನಲ್ಲಿ ಗರುಡ ರಾಮ್ ಅವರನ್ನು ಸಂದರ್ಶನ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಬಹಳ ವೈರಲ್ ಆಗಿದೆ. ನೀವು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
KGF ಚಿತ್ರ ಇಡೀ ದೇಶದಲ್ಲಿ ಅಮೋಘವಾದ ಪ್ರದರ್ಶನ ಕಾಣುತ್ತಿದೆ. 100 ಕೋಟಿ ಕಲೆಕ್ಷನ್ ದಾಟಿದ ಮೊದಲ ಕನ್ನಡ ಚಿತ್ರ KGF . KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆಯೋ ಅಷ್ಟೇ ಪ್ರಾಮುಖ್ಯತೆ ಗರುಡ ಎಂಬ ವಿಲನ್ ಪಾತ್ರಕ್ಕೆ ಸಿಕ್ಕಿದೆ. ಗರುಡ ಪಾತ್ರವನ್ನು ಅದ್ಭುತವಾಗಿ ನಟನೆ ಮಾಡಿದ ರಾಮ್ ಅವರು ರಾಕಿ bhai ಯಶ್ ಅವರಿಗೆ ಸಲಾಂ ಹಾಗು ಥ್ಯಾಂಕ್ಸ್ ಎಂದು ಹೇಳಿದ್ದಾರೆ. ರಾಮ್ ಅವರು ಯಶ್ ಅವರ ಜೊತೆ ಸುಮಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಯಶ್ ಅವರ ಕೃಪೆ ಇಂದ KGF ಚಿತ್ರಕ್ಕೆ ರಾಮ್ ಅವರಿಗೆ ಅವಕಾಶ ಸಿಕ್ಕಿತು. ರಾಮ್ ಅವರ ಮಾತುಗಳನ್ನು ಒಮ್ಮೆ ಕೇಳಿ, ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ KGF ಚಿತ್ರ ವಿಶ್ವ ದಾದ್ಯಂತ ಬಿಡುಗಡೆ ಆಗಿದೆ. KGF ಚಿತ್ರಕ್ಕೆ ಇಡೀ ದೇಶವೇ ಫಿದಾ ಆಗಿದ್ದಾರೆ. ನೆನ್ನೆ ಕೆಲವು ಹುಚ್ಚರು KGF ಚಿತ್ರದ ಬಿಡುಗಡೆ ಮಾಡಬೇಡಿ ಅದು ರೌಡಿ ತಂಗಂ ಕಥೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದರು. ಆದರೆ ಇವತ್ತು ಸಿನಿಮಾ ನೋಡಿದ ಮೇಲೆ ಗೊತ್ತಾದ ವಿಷ್ಯ ಏನಪ್ಪಾ ಅಂದರೆ KGF ಚಿತ್ರದ ಕಥೆಗೂ ರೌಡಿ ತಂಗಂ ಗು ಯಾವ ಸಂಬಂಧ ಇಲ್ಲ ಕಣ್ರೀ! KGF ಚಿತ್ರ ನಿಜಕ್ಕೂ ಒಂದು ಮಾಸ್ಟರ್ ಪೀಸ್ ಕಣ್ರೀ! ಪ್ರತಿಯೊಬ್ಬ ಕನ್ನಡಿಗನು ನೋಡಲೇಬೇಕಾದ ಚಿತ್ರ. KGF ಚಿತ್ರ ಬಿಡುಗಡೆ ಆಗಿ ಎಲ್ಲಾ ದಾಖಲೆಗಳನ್ನು ಧೂಳೆಬ್ಬಿಸಿದೆ.
KGF ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಬಗ್ಗೆ ಎರಡು ಮಾತೆ ಇಲ್ಲ ಕಣ್ರೀ! ರಾಕಿ bhai ಯಶ್ ಅವರು KGF ಚಿತ್ರದ ರಾಕಿ ಪಾತ್ರಕ್ಕೆ ನ್ಯವ ಒದಗಿಸಿದ್ದಾರೆ. ಯಶ್ ಅವರ ಅಭಿನಯಕ್ಕೆ, ಅವರ ಶ್ರಮಕ್ಕೆ, ಅವರ ಟ್ಯಾಲೆಂಟಿಗೆ, ನಮ್ಮ ಕಡೆ ಇಂದ ಒಂದು ಸಲಾಂ! ಇದಲ್ಲದೆ ಅನಂತ್ ನಾಗ್ ಅವರು ಕೂಡ ಒಂದು ಮುಖ್ಯ ಪಾತ್ರವನ್ನು ಮಾಡಿದ್ದಾರೆ. ಅಚ್ಯುತ್ ಕುಮಾರ್ ಅವರು ಕೂಡ ಒಂದು ಬಹು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. KGF ಚಿತ್ರದ ಹೆರೋಯಿನ್ ಆದ ಶ್ರೀನಿಧಿ ಶೆಟ್ಟಿ ಅವರು ಅದ್ಭುತವಾಗಿ ನಟಿಸಿದ್ದಾರೆ.
KGF ಚಿತ್ರ 1970 ರಿಂದ 1980 ರಲ್ಲಿ ನಡೆಯುವ ಒಂದು ಅದ್ಭುತ ಕಥೆ ಎಂದೇ ಹಳಬಹುದು. ಆ ಸಮಯದಲ್ಲಿ ಬ್ರಿಟಿಷ್ ಅವರು ಹಾಗು ಕೆಲವು ಮುಂಬೈ ಡಾನ್ ಗಳು ನಮ್ಮ ಕರ್ನಾಟಕ KGF ನಲ್ಲಿ ಬೀಡು ಹೂಡಿ ನಮ್ಮ ಕನ್ನಡಿಗರನ್ನು ಅವಮಾನಿಸಿ ಅವರ ಹತ್ತಿರ ಗೋಲ್ಡ್ mining ಕೆಲಸವನ್ನು ಮಾಡಿಸುವ ಒಂದು ಕಥೆ ಇದು. ಇದನ್ನು ತಡೆಯದೆ ರಾಕಿ ಮುಂಬೈ ಅವರಿಗೆ ಸೆಡ್ಡು ಹೊಡೆದು ಅವರಿಗೆಲ್ಲ ಬೆವರಳಿಸಿದ್ದ. ಇನ್ನು ಮುಂದೆ ನಾವು ಕಥೆ ಹೇಳುವುದಿಲ್ಲ. ಇದು ಕಥೆಯ ಬರೀ 10 % ಭಾಗ ಅಷ್ಟೇ! ಸಿನಿಮಾ ನೋಡಲೇಬೇಕು ಕಣ್ರೀ! ನೀವೇ ಸಿನೆಮಾವನ್ನು ಥಿಯೇಟರ್ ನಲ್ಲಿ ನೋಡಬೇಕು ಎಂದು ನಮ್ಮ ವಿನಂತಿ.

Trending

To Top