Film News

ಜೂ. 4 ರಂದು ಗರುಡ ಗಮನ ವೃಷಭ ವಾಹನ ಸಿನೆಮಾ ರಿಲೀಸ್!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಯಂಗ್ ನಿರ್ದೇಶಕ ರಾಜ್ ಬಿ ಶೆಟ್ಟಿ ಸಾರಥ್ಯದಲ್ಲಿ ಮೂಡಿಬಂದ ಗರುಡ ಗಮನ ವೃಷಭ ವಾಹನ ಸಿನೆಮಾ ಜೂ.4, 2021 ರಂದು ಬಿಡುಗಡೆಯಾಗಲಿದೆ.

ಕನ್ನಡ ಸಿನಿರಂಗದಲ್ಲಿ ಖ್ಯಾತಿ ಪಡೆದ ನಟ ರಿಷಭ್ ಶೆಟ್ಟಿ ನಾಯಕನಾಗಿ ಗರುಡ ಗಮನ ವೃಷಭ ವಾಹನ ಸಿನೆಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರವನ್ನು ಜೂ.4 ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಬಹಿರಂಗಗೊಳಿಸಿದೆ. ರಾಜ್ ಬಿ ಶೆಟ್ಟಿಯವರ ಎರಡನೇ ಚಿತ್ರ ಇದಾಗಿದ್ದು, ಚಿತ್ರ ಎಲ್ಲರನ್ನೂ ಆಕರ್ಷಿಸುತ್ತದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೂ ಮೊದಲು ನಿರ್ದೇಶಕ ಒಂದು ಮೊಟ್ಟೆಯ ಕಥೆ ಎಂಬ ಸೃಜನಶೀಲತೆಯಿಂದ ಕೂಡಿದ ಹಾಸ್ಯ ಸಿನೆಮಾ ತೆಗೆದು ಸೂಪರ್ ಹೊಡೆದಿದ್ದಾರೆ. ಇದೀಗ ತಮ್ಮ ಎರಡನೇ ಪ್ರಯತ್ನದಲ್ಲಿಯೇ ಭಿನ್ನವಾದ ಚಿತ್ರವನ್ನು ನಿರ್ದೇಶನ ಮಾಡಿದ್ದು, ಚಿತ್ರ ಬಿಡುಗಡೆಗೂ ಮುನ್ನಾ ಚಿತ್ರ ಟ್ರೈಲರ್ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಇನ್ನೂ ಚಿತ್ರದ ಬಿಡುಗಡೆ ಕುರಿತು ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ ಜೂನ್.4 2021 ರಂದು ಶಿವ ಮತ್ತು ಹರಿಯ ಪ್ರಪಂಚಕ್ಕೆ ಬರಲು ತಯಾರಾಗಿರಿ, ಮಂಗಳಾ ದೇವಿಗೆ ಸ್ವಾಗತ ಎಂದು ಬರೆದುಕೊಂಡು ಭಿನ್ನವಾದ ಪೋಸ್ಟರ್ ಶೇರ್ ಮಾಡಿ, ಬಿಡುಗಡೆಯ ದಿನಾಂಕವನ್ನು ಬಹಿರಂಗ ಮಾಡಿದ್ದಾರೆ.

ಇನ್ನೂ ಚಿತ್ರದ ಕಥೆಯತ್ತ ಬರುವುದಾದರೇ, ಅಂಡರ್‌ವರ್ಲ್ಡ್ ಹಾಗೂ ಕರಾವಳಿ ಕುರಿತಾದ ಕಥೆಯನ್ನು ಈ ಚಿತ್ರ ಒಳಗೊಂಡಿದ್ದು, ಶಿವ ಮತ್ತು ಹರಿ ಎಂಬ ಇಬ್ಬರು ರೌಡಿಗಳ ನಡುವೆ ನಡೆಯುವಂತಹ ಕಾಳಗವೇ ಈ ಚಿತ್ರದ ಕಥೆಯಾಗಿದೆಯಂತೆ. ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Trending

To Top