Film News

ಬಾಲಿವುಡ್ ಮಂದಿಯ ನಿದ್ದೆ ಕೆಡಿಸುತ್ತಿದೆ ಗಂಗೂಭಾಯಿ ಟೀಸರ್!

ಮುಂಬೈ: ಬಾಲಿವುಡ್‌ನ ಬಹುನಿರೀಕ್ಷೆಯ ಚಿತ್ರ ಗಂಗೂಬಾಯಿ ಕಾಥಿಯಾವಾಡಿ ಸಿನೆಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಮೂಲಕವೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು ಮಾಡುವುದರ ಜೊತೆಗೆ ಅನೇಕರ ನಿದ್ದೆ ಕೆಡಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಹೌದು ಗಂಗೂಭಾಯಿ ಕಾಥಿಯಾವಾಡಿ ಸಿನೆಮಾ ಟೀಸರ್ ಇದೀಗ ಟ್ರೆಂಡಿಂಗ್ ಕ್ರಿಯೇಟ್ ಮಾಡುತ್ತಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಾರಥ್ಯದಲ್ಲಿ ಈ ಚಿತ್ರ ತಯಾರಾಗಿದ್ದು, ಟೀಸರ್ ನೋಡಿದ ಅಭಿಮಾನಿಗಳು ಮಾತ್ರವಲ್ಲದೇ ಬಾಲಿವುಡ್‌ನ ಅನೇಕ ಗಣ್ಯರು ಸಹ ಶಾಕ್ ಆಗಿದ್ದಾರಂತೆ. ಈ ಚಿತ್ರದಲ್ಲಿ ಗಂಗೂಭಾಯಿ ಕಾಥಿಯಾವಾಡಿ ಪಾತ್ರ ಪೋಷಣೆ ಮಾಡಿದ ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ನಟನಗೆ ಎಲ್ಲರೂ ಫಿದಾ ಆಗಿದ್ದಾರೆ.

ಮುಂಬೈನ ಕಾಮಾಟಿಪುರಂ ನ ಕಥನವನ್ನು ಆಧರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದು, ಕಾಮಾಟಿಪುರಂನ ಅಧ್ಯಕ್ಷರಾಗಿದ್ದ ಗಂಗೂಭಾತಿ ಕಾಥಿಯಾವಾಡಿ ಪಾತ್ರವನ್ನು ನಟಿ ಆಲಿಯಾ ಭಟ್ ಪೋಷಣೆ ಮಾಡಿದ್ದಾರೆ. ಆಲಿಯಾ ಸಿನಿ ಕೆರಿಯರ್ ನಲ್ಲಿ ಇಲ್ಲಿಯವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ನಟಿಸಿದ್ದು, ಟೀಸರ್ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ.

ಇನ್ನೂ ಟೀಸರ್ ನೋಡಿದ ಪ್ರಿಯಾಂಕಾ ಚೋಪ್ರಾ ಗಂಗೂಭಾಯಿ ಟೀಸರ್ ನೋಡಿ ತುಂಬಾ ಹೆಮ್ಮೆಯಾಗುತ್ತೆ ಎಂದು ಹೇಳಿದ್ರೆ, ನಟ ಅಕ್ಷಯ್ ಕುಮಾರ್ ಗಂಗೂಭಾಯಿ ಚಿತ್ರದ ಟೈಟಲ್ ಮೊದಲಿನಿಂದಲೂ ನನ್ನ ಗಮನ ಸೆಳೆಯುತ್ತಿತ್ತು, ಇದೀಗ ಟೀಸರ್ ಬಿಡುಗಡೆಯಾಗಿದ್ದು, ಸಿನೆಮಾವನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.

ಇನ್ನೂ ಗಂಗೂಭಾಯಿ ಕಾಥಿಯಾವಾಡಿ ಚಿತ್ರ ಇದೇ ಜುಲೈ ೩೦ ರಂದು ಅದ್ದೂರಿಯಾಗಿ ತೆರೆಗೆ ಬರಲಿದ್ದು, ಅಭಿಮಾನಿಗಳು ಈ ಚಿತ್ರವನ್ನು ತೆರೆಮೇಲೆ ಕಾಣಲು ಕಾಯುತ್ತಿದ್ದಾರೆ ಎನ್ನಲಾಗಿದೆ.

Trending

To Top