Film News

ಯೂರೋಪ್ ಖಂಡದತ್ತ ಗಾಳಿಪಟ-2 ಚಿತ್ರತಂಡ!

ಬೆಂಗಳೂರು: ಖ್ಯಾತ ಸ್ಯಾಂಡಲ್‌ವುಡ್ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗಾಳಿಪಟ-2 ಚಿತ್ರತಂಡ ಯೂರೋಪ್‌ನತ್ತ ಪ್ರಯಾಣ ಬೆಳೆಸಿದ್ದು, ಈ ಕುರಿತು ಯೋಗರಾಜ್ ಭಟ್ ರವರೇ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ.

ಕಳೆದ 2008 ರಲ್ಲಿ ಬಿಡುಗಡೆಯಾದ ಗಾಳಿಪಟ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಹೊಡೆದಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ ಗಾಳಿಪಟ-2 ಚಿತ್ರವನ್ನು ತೆರೆಮೇಲೆ ತರಲು ನಿರ್ದೇಶಕ ಯೋಗರಾಜ್ ಭಟ್ ನಿರ್ಧರಿಸಿದ್ದು, ಇದೀಗ ಚಿತ್ರೀಕರಣಕ್ಕಾಗಿ ಯೂರೋಪ್ ಖಂಡದತ್ತ ಚಿತ್ರತಂಡ ಪ್ರಯಾಣ ಬೆಳೆಸಿದೆ.

ಇನ್ನೂ ಗಾಳಿಪಟ-2 ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಹಾಗೂ ದಿಗಂತ್ ನಟಿಸಲಿದ್ದು, ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್ ಹಾಗೂ ನಿಶ್ವಕಾ ನಾಯ್ಡು ಬಣ್ಣ ಹಚ್ಚಲಿದ್ದಾರೆ. ಇನ್ನೂ ನಟ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಎಂಬ ಸಿನೆಮಾದಲ್ಲಿ ಹಾಗೂ ಪವನ್ ಕುಮಾರ್ ತೆಲುಗು ವೆಬ್ ಸೀರಿಸ್ ಒಂದನ್ನು ನಿರ್ದೇಶನ ಮಾಡುತ್ತಿದ್ದು, ಎಲ್ಲಾ ನಟರು ಬ್ಯುಸಿಯಾಗಿದ್ದಾರೆ.

Trending

To Top