ಬೆಂಗಳೂರು: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿ ಮೂಡಿಬರಲಿರುವ ಗಾಳಿಪಟ-2 ಚಿತ್ರದ ಶೂಟಿಂಗ್ ಫೆಬ್ರವರಿ ಮಾಹೆಯ ಕೊನೆಯ ವಾರದಲ್ಲಿ ಪ್ರಾರಂಭವಾಗಲಿದ್ದು, ಚಿತ್ರತಂಡ ಶೂಟಿಂಗ್ ಗಾಗಿ ಕಜಕೀಸ್ಥಾನಕ್ಕೆ ತೆರಳಲಿದೆಯಂತೆ.
ಕಳೆದ 2008 ರಲ್ಲಿ ಬಿಡುಗಡೆಯಾದ ಗಾಳಿಪಟ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಸೂಪರ್ ಹಿಟ್ ಹೊಡೆದಿತ್ತು. ಇದೀಗ ಇದರ ಮುಂದುವರೆದ ಭಾಗವಾಗಿ ಗಾಳಿಪಟ-೨ ಚಿತ್ರವನ್ನು ತೆರೆಮೇಲೆ ತರಲು ನಿರ್ದೇಶಕ ಯೋಗರಾಜ್ ಭಟ್ ನಿರ್ಧರಿಸಿದ್ದು, ಇದೀಗ ಚಿತ್ರೀಕರಣಕ್ಕಾಗಿ ಇಡೀ ಚಿತ್ರತಂಡದೊಂದಿಗೆ ಗಾಳಿಪಟ ಹಾರಿಸಲು ಕಜಕೀಸ್ಥಾನಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.
ಅಂದಹಾಗೆ ಗಾಳಿಪಟ-೨ ಚಿತ್ರವನ್ನು ಯೂರೋಪ್, ಸ್ಕಾಟ್ಲ್ಯಾಂಡ್, ಜಾರ್ಜಿಯಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ನಿರ್ಧರಿಸಲಾಗಿತ್ತಂತೆ. ಆದರೆ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ಡೌನ್ ಹೇರಿದ್ದು, ಇದು ರದ್ದಾಯಿತ್ತಂತೆ. ಇದೀಗ ಚಿತ್ರತಂಡ ಶೂಟಿಂಗ್ ಲೊಕೇಷನ್ ಅನ್ನು ಕಜಕೀಸ್ಥಾನ್ಕ್ಕೆ ಶಿಫ್ಟ್ ಆಗಿದೆ ಎನ್ನಲಾಗಿದೆ.
ಇನ್ನೂ ಗಾಳಿಪಟ-೨ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪವನ್ ಕುಮಾರ್ ಹಾಗೂ ದಿಗಂತ್ ನಟಿಸಲಿದ್ದು, ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತ ಮೆನನ್ ಹಾಗೂ ನಿಶ್ವಕಾ ನಾಯ್ಡು ಬಣ್ಣ ಹಚ್ಚಲಿದ್ದಾರೆ. ಇನ್ನೂ ನಟ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂಬ ಚಿತ್ರದಲ್ಲಿ, ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಎಂಬ ಸಿನೆಮಾದಲ್ಲಿ ಹಾಗೂ ಪವನ್ ಕುಮಾರ್ ತೆಲುಗು ವೆಬ್ ಸೀರಿಸ್ ಒಂದನ್ನು ನಿರ್ದೇಶನ ಮಾಡುತ್ತಿದ್ದು, ಎಲ್ಲಾ ನಟರು ಬ್ಯುಸಿಯಾಗಿದ್ದಾರೆ.
