Film News

ಗಾಳಿಪಟ-2 ಚಿತ್ರದಲ್ಲಿ ಇವರೇ ನಾಯಕಿಯರು!

ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಗಾಳಿಪಟ-೨ ಚಿತ್ರದಲ್ಲಿ ನಾಯಕರು ಯಾರೆಂಬುದು ಮಾತ್ರ ಬಹಿರಂಗವಾಗಿತ್ತು. ನಾಯಕಿಯಾಗಿ ಶರ್ಮಿಳಾ ಮಾಂಡ್ರೆ ಬಿಟ್ಟರೇ ಉಳಿದ ಇಬ್ಬರು ನಾಯಕಿಯರ ಮಾಹಿತಿ ಬಹಿರಂಗವಾಗಿರಲಿಲ್ಲ.

ಇದೀಗ ಗಾಳಿಪಟ-೨ ಚಿತ್ರಕ್ಕೆ ಹೊಸ ನಾಯಕಿಯರನ್ನು ಆಯ್ಕೆ ಮಾಡಿದ್ದಾರೆ ಯೋಗರಾಜ್ ಭಟ್. ಈ ನಾಯಕಿಯರು ಕನ್ನಡ, ತಮಿಳು, ಮಲಯಾಳಂ ಮೂಲದ ನಟಿಯರಾಗಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಹಾಗೂ ಸಂಯುಕ್ತಾ ಮೆನನ್ ರವರೇ ಗಾಳಿಪಟ-೨ ಚಿತ್ರದಲ್ಲಿ ನಾಯಕಿಯರಾಗಿ ರಂಜಿಸುವುದು. ಆದರೆ ಯಾವ ನಟಿ ಯಾರಿಗೆ ಜೋಡಿಯಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇಲ್ಲಿಯವರೆಗೂ ಗಾಳಿಪಟ-೨ ಚಿತ್ರದಲ್ಲಿನ ನಾಯಕರು, ಶೂಟಿಂಗ್, ಪೋಸ್ಟರ್ ಸೇರಿದಂತೆ ಕೆಲವೊಂದು ವಿಷಯಗಳನ್ನು ಬಹಿರಂಗಗೊಳಿಸುತ್ತಾ ಬರುತ್ತಿದ್ದರು ಯೋಗರಾಜ್ ಭಟ್. ಇದೀಗ ನಾಯಕಿಯರು ಯಾರೆಂಬುದನ್ನು ಸಹ ಬಹಿರಂಗಗೊಳಿಸಿದ್ದಾರೆ. ಈ ಚಿತ್ರದಲ್ಲಿ ನಾಯಕ ನಟರಾಗಿ ಗೋಲ್ಡನ್ ಸ್ಟಾರ್ ಗಣೇಶ್, ದೂದ್‌ಪೇಡ ದಿಗಂತ್ ಹಾಗೂ ಗಾಳಿಪಟ-೧ ರಲ್ಲಿದ್ದ ರಾಜೇಶ್ ಕೃಷ್ಣನ್ ಪಾತ್ರದಲ್ಲಿ ನಟ ಹಾಗೂ ನಿರ್ದೇಶಕ ಪವನ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಈ ಚಿತ್ರದಲ್ಲಿನ ನಾಯಕಿಯರ ಪೊಟೋಗಳನ್ನು ಪವನ್ ಕುಮಾರ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದರು. ಸದ್ಯ ಗಾಳಿಪಟ-೨ ಚಿತ್ರದ ಶೂಟಿಂಗ್ ಯೂರೋಪ್ ಸೇರಿದಂತೆ ಕಜಕಿಸ್ತಾನದ ಕೆಲವೊಂದು ಸುಂದರವಾದ ಪ್ರದೇಶಗಳಲ್ಲಿ ನಡೆಯುತ್ತಿದ್ದು, ಇದು ಕೊನೆಯ ಹಂತದ ಶೂಟಿಂಗ್ ಆಗಿದೆ. ಶೂಟಿಂಗ್ ನಂತರ ಚಿತ್ರದ ಬಿಡುಗಡೆ ದಿನಾಂಕ ಸಹ ಘೋಷಣೆಯಾಗಲಿದೆ ಎನ್ನಲಾಗುತ್ತಿದೆ.

Trending

To Top